ಸಾರಾಂಶ
ಕನ್ನಡಪ್ರಭ ವಾರ್ತೆ ಕಾರ್ಕಳಕಳೆದ ಎರಡು ದಿನಗಳಿಂದ ಕಾರ್ಕಳ ತಾಲೂಕಿನಲ್ಲಿ ಸುರಿದ ಭಾರಿ ಗಾಳಿ ಮಳೆಗೆ ಹಲವೆಡೆ ಮನೆಗಳು, ಅಡಕೆ ಮರಗಳು, ಶೀಟ್‌ಗಳು ಹಾಗೂ ಜಮೀನುಗಳಿಗೆ ಹಾನಿ ಉಂಟಾಗಿದ್ದು, ಸಾವಿರಾರು ರು. ನಷ್ಟ ಸಂಭವಿಸಿದೆ.ನಲ್ಲೂರು ಗ್ರಾಮದ ಕೂಡಲಬೆಟ್ಟು ದರ್ಕಾಸು ಮನೆಯ ಹರೀಶ್ ಎಂಬವರ ಮನೆಗೆ ಗಾಳಿ ಮತ್ತು ಮಳೆಯಿಂದಾಗಿ ಭಾಗಶಃ ಹಾನಿಯಾಗಿದ್ದು, ಅಂದಾಜು ರೂ.10,000 ನಷ್ಟ ಉಂಟಾಗಿದೆ.
ಬೆಳ್ಮಣ್ ಗ್ರಾಮದ ಇಟ್ಟಮೇರಿ ಎಂಬಲ್ಲಿ ಬಾಬು ಅವರ ಮನೆಯ ಮೇಲೆ ಮರ ಬಿದ್ದು ಅಂದಾಜು ರೂ.10,000 ನಷ್ಟವಾಗಿದೆ.ಬೋಳ ಗ್ರಾಮದ ಪಾವರಿ ಪಲ್ಲ ನಿವಾಸಿ ದೊಡ್ದು ಮೂಲ್ಯದಿ ಅವರ ಮನೆಯ ಸಿಮೆಂಟ್ ಸೀಟ್‌ಗಳು ಗಾಳಿಗೆ ಹಾರಿ ರೂ.5,000 ನಷ್ಟವಾಗಿದೆ. ಇದೇ ಗ್ರಾಮದ ಬಾನಂಗಡಿ ಪ್ರದೇಶದಲ್ಲಿ ವಿಶ್ವನಾಥ ಆಚಾರ್ಯ ಅವರ ಮನೆಗೆ ಅಡಕೆ ಮರ ಬಿದ್ದು ರೂ.5,000 ನಷ್ಟ, ಮೇಲಂಗಡಿಯಲ್ಲಿ ಶಂಕರ ಆಚಾರ್ಯ ಅವರ ಮನೆಗೆ ಸಾಗುವಾನಿ ಮರ ಬಿದ್ದು ರೂ.5,000 ನಷ್ಟವಾಗಿದೆ.
ಕಲ್ಯಾ ಗ್ರಾಮದ ಮೂಡುಮನೆ ಕುಂಟಾಡಿಯಲ್ಲಿ ಸರಿತ್ ಅವರ ಮನೆ ಹಾಗೂ ದನದ ಕೊಟ್ಟಿಗೆಗೆ ಹಾನಿಯಾಗಿ ಅಂದಾಜು ರೂ.15,000 ನಷ್ಟವಾಗಿದೆ.ಕೆರ್ವಾಶೆ ಗ್ರಾಮದ ಕುದ್ರೋಟ್ಟು ಮನೆ ನಿವಾಸಿ ಪ್ರಭಾವತಿ ಅವರ ಮನೆಯ ಶೀಟ್ ಹಾಗೂ ದಂಬೆ ಹಾನಿಗೊಂಡಿದ್ದು ರೂ.50,000 ನಷ್ಟವಾಗಿದೆ.ಮರ್ಣೆ ಗ್ರಾಮದ ವಿಷ್ಣುಮೂರ್ತಿ ದೇವಸ್ಥಾನದ ಸಭಾಂಗಣದ ಸಿಮೆಂಟ್ ಶೀಟ್ ಗಳು ಹಾನಿಗೊಂಡಿದ್ದು ಅಂದಾಜು ರೂ.20,000 ನಷ್ಟವಾಗಿದೆ. ಜಾರ್ಕಳ ಗ್ರಾಮದಲ್ಲಿನ ಮಹಾತ್ಮ ಗಾಂಧಿ ಕಾಲೋನಿಯ ಚೈತ್ರಾ, ಸುಲೋಚನಾ, ಶಾರದಾ ಹಾಗೂ ಮಾಲತಿ ಅವರ ಮನೆಗಳಿಗೆ ಹಾನಿಯುಂಟಾಗಿ ಒಟ್ಟೂ ರೂ.40,000 ನಷ್ಟ ಉಂಟಾಗಿದೆ.
ಕೆರುವಾಶೆ ಗ್ರಾಮದ ಜಲಜ ಅವರ ಮನೆಗೆ ರೂ.8,000 ಹಾಗೂ ಎಳ್ಳಾರೆಯ ಪಾಲ್ಜೆಡ್ಡು ಪ್ರದೇಶದ ಗೋವಿಂದರಾಯ ಸಲ್ವಾಂಕರ್ ಅವರ ಮನೆಗೆ ರೂ.5,000 ನಷ್ಟವಾಗಿದೆ. ಇದೇ ಪ್ರದೇಶದ ಸಂತೋಷ್ ಎಂಬವರ ಮನೆ ಗೋಡೆ ಬಿದ್ದು ಸುಮಾರು ರೂ.1,20,000 ನಷ್ಟ ಅನುಭವಿಸಿದೆ.