ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಮೇಳಕ್ಕೆ ಆಗಮಿಸುತ್ತಿರುವ ರೈತರು ಮಳಿಗೆಗೆ ಭೇಟಿ ನೀಡಿ ಯಂತ್ರಗಳ ಕಾರ್ಯವೈಖರಿ, ಬಳಕೆ ಹಾಗೂ ಬೆಲೆಯ ಕುರಿತು ಮಾಹಿತಿ ಪಡೆಯುತ್ತಿದ್ದಾರೆ. ಅಗತ್ಯ ಯಂತ್ರೋಪಕರಣಗಳನ್ನು ಸ್ಥಳದಲ್ಲಿಯೇ ಬುಕಿಂಗ್ ಕೂಡ ಮಾಡುತ್ತಿದ್ದಾರೆ.
ಧಾರವಾಡ: ಕೃಷಿಯಲ್ಲಿ ಕೂಲಿ ಕಾರ್ಮಿಕರ ಕೊರತೆ ಹಾಗೂ ಹೆಚ್ಚುತ್ತಿರುವ ಕೂಲಿ ವೆಚ್ಚಕ್ಕೆ ಯಂತ್ರೋಪಕರಣಗಳೇ ಪರಿಹಾರವಾಗುತ್ತಿವೆ. ಇದಕ್ಕೆ ಸಾಕ್ಷಿಯಂತೆ ಧಾರವಾಡ ಕೃಷಿ ಮೇಳದಲ್ಲಿ ಕೃಷಿ ಯಂತ್ರೋಪಕರಣಗಳ ಮಳಿಗೆಗಳಿಗೆ ರೈತರು ಮುಗಿಬೀಳುತ್ತಿದ್ದಾರೆ. ನವಲಗುಂದದ ರಾಮಕೃಷ್ಣ ಅಗ್ರಿ ಇಕ್ವಿಪಮೆಂಟ್ ವರ್ಕ್ಸ್‌ನ 438ನೇ ಮಳಿಗೆ ರೈತರ ವಿಶೇಷ ಗಮನ ಸೆಳೆಯುತ್ತಿದೆ.
ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಮೇಳಕ್ಕೆ ಆಗಮಿಸುತ್ತಿರುವ ರೈತರು ಮಳಿಗೆಗೆ ಭೇಟಿ ನೀಡಿ ಯಂತ್ರಗಳ ಕಾರ್ಯವೈಖರಿ, ಬಳಕೆ ಹಾಗೂ ಬೆಲೆಯ ಕುರಿತು ಮಾಹಿತಿ ಪಡೆಯುತ್ತಿದ್ದಾರೆ. ಅಗತ್ಯ ಯಂತ್ರೋಪಕರಣಗಳನ್ನು ಸ್ಥಳದಲ್ಲಿಯೇ ಬುಕಿಂಗ್ ಕೂಡ ಮಾಡುತ್ತಿದ್ದಾರೆ.ಎಡೆಕುಂಟೆ, ಗೊಬ್ಬರ ಬಾಕ್ಸ್: ಸಂಸ್ಥೆ ತಯಾರಿಸುವ ಯಂತ್ರಚಾಲಿತ ಎಡೆಕುಂಟೆ ಹಾಗೂ ಸ್ವಯಂಚಾಲಿತ ಗೊಬ್ಬರ ಬಾಕ್ಸ್‌ಗಳು ರೈತರ ಗಮನ ಸೆಳೆಯುತ್ತಿವೆ. ಕೊಟ್ಟಿಗೆ ಗೊಬ್ಬರ, ರಾಸಾಯನಿಕ ಗೊಬ್ಬರ, ಯೂರಿಯಾ ಹಾಗೂ ಪೊಟ್ಯಾಷ್ ಸೇರಿದಂತೆ ವಿವಿಧ ಗೊಬ್ಬರಗಳನ್ನು ಬೆಳೆ ಸಾಲುಗಳಿಗೆ ಹಾಕಲು ಈ ಉಪಕರಣಗಳು ನೆರವಾಗುತ್ತವೆ. ಇದರಿಂದ ಕೂಲಿ ಕಾರ್ಮಿಕರ ಅವಲಂಬನೆ ಕಡಿಮೆಯಾಗಿ ಸಮಯ ಹಾಗೂ ವೆಚ್ಚ ಉಳಿತಾಯವಾಗಲಿದೆ.
1972ರಿಂದ ಹೈಟೆಕ್ ಕೂರಿಗೆ: ರಾಮಕೃಷ್ಣ ಅಗ್ರಿ ಇಕ್ವಿಪಮೆಂಟ್ ವರ್ಕ್ಸ್‌ನ ಪಯಣ 1972ರಲ್ಲಿ ಕೈಯಿಂದ ಬಿತ್ತನೆ ಮಾಡುವ ಕೂರಿಗೆಯಿಂದ ಆರಂಭಗೊಂಡಿದ್ದು, ಇಂದು ಹೈಟೆಕ್ ಸ್ವಯಂಚಾಲಿತ ಕೂರಿಗೆಗಳವರೆಗೆ ಬೆಳೆದಿದೆ. ನಿರ್ದಿಷ್ಟ ಅಂತರದಲ್ಲಿ ಬೀಜ ಬಿತ್ತುವುದರ ಜತೆಗೆ ಏಕಕಾಲದಲ್ಲಿ ಗೊಬ್ಬರವನ್ನೂ ಹಾಕಬಹುದಾಗಿದೆ. ಹೆಸರು, ಕಡಲೆ, ಗೋಧಿ, ಸೂರ್ಯಕಾಂತಿ, ಗೋವಿನಜೋಳ, ತೊಗರಿ, ಜೋಳ, ಚಂಡುಹೂ ಹಾಗೂ ಸೋಯಾಬಿನ್ ಸೇರಿದಂತೆ ವಿವಿಧ ಬೆಳೆಗಳಿಗೆ ಬಳಸಬಹುದು. ಸಂಸ್ಥೆಯ ಪೂರ್ವಜರ ಕೊಡುಗೆಯನ್ನು ಗುರುತಿಸಿ 2006ರಲ್ಲಿ "ಭಾರತೀಯ ವಿಕಾಸ ರತ್ನ " ಪ್ರಶಸ್ತಿ ನೀಡಿ ಗೌರವಿಸಿರುವುದು ವಿಶೇಷ.ಬೆಳೆ ಹಾನಿ ತಡೆಗೆ ಹೈಟೆಕ್ ವ್ಹೀಲ್ಸ್:
ಎಡೆ ಹೊಡೆಯುವುದು, ಔಷಧ, ರಾಸಾಯನಿಕ ಗೊಬ್ಬರ ಹಾಗೂ ಪೌಷ್ಟಿಕ ದ್ರಾವಣ ಸಿಂಪಡಣೆಗೆ ಹೈಟೆಕ್ ವ್ಹೀಲ್ಸ್ ಬಳಸಬಹುದಾಗಿದೆ. ಬೆಳೆ ಸಾಲುಗಳ ಮಧ್ಯೆ ಯಂತ್ರ ಚಲಾಯಿಸುವಾಗ ಬೆಳೆ ಹಾನಿಯಾಗದಂತೆ ಇವು ನೆರವಾಗುತ್ತವೆ. ಹೆಚ್ಚಿನ ಮಾಹಿತಿಗಾಗಿ ಮೊ: 97438 44730, 89706 42067 ಈ ಸಂಖ್ಯೆಗಳಿಗೆ ಸಂಪರ್ಕಿಸಬಹುದಾಗಿದೆ.ಉತ್ತಮ ಸ್ಪಂದನೆ: ಮೇಳದಲ್ಲಿ ನಮ್ಮ ಯಂತ್ರೋಪಕರಣಗಳಿಗೆ ಉತ್ತಮ ಸ್ಪಂದನೆ ದೊರೆತಿದೆ. ರೈತರು ಮಾಹಿತಿ ಪಡೆಯುವುದರ ಜೊತೆಗೆ ಬುಕಿಂಗ್ ಕೂಡ ಮಾಡುತ್ತಿದ್ದಾರೆ. ಯಂತ್ರಗಳ ಬಳಕೆಯಿಂದ ಸಮಯ ಹಾಗೂ ಕೂಲಿ ವೆಚ್ಚ ಕಡಿಮೆ ಮಾಡಿ ರೈತರ ಆದಾಯ ಹೆಚ್ಚಿಸುವುದೇ ನಮ್ಮ ಉದ್ದೇಶ ಎಂದು ರಾಮಕೃಷ್ಣ ಅಗ್ರಿ ಇಕ್ವಿಪಮೆಂಟ್ ವರ್ಕ್ಸ್‌ನ ಮಾಲೀಕರಾದ ರಾಮಕೃಷ್ಣ ಬಡಿಗೇರ ತಿಳಿಸಿದರು.