12ರಂದು ಭಾನುವಳ್ಳಿಯಲ್ಲಿ ಬೃಹತ್ ಆರೋಗ್ಯ ಮೇಳ, ರಕ್ತದಾನ ಶಿಬಿರ

| Published : Apr 05 2025, 12:48 AM IST

12ರಂದು ಭಾನುವಳ್ಳಿಯಲ್ಲಿ ಬೃಹತ್ ಆರೋಗ್ಯ ಮೇಳ, ರಕ್ತದಾನ ಶಿಬಿರ
Share this Article
  • FB
  • TW
  • Linkdin
  • Email

ಸಾರಾಂಶ

ಹರಿಹರ ತಾಲೂಕಿನ ಭಾನುವಳ್ಳಿ ಗ್ರಾಮದಲ್ಲಿ ಭಾನುವಳ್ಳಿಯ ಹಳೆಯ ವಿದ್ಯಾರ್ಥಿಗಳ ಸ್ನೇಹ ಸಂಭ್ರಮ ಗೆಳೆಯರ ಬಳಗದಿಂದ ಏ.12ರಂದು ಬೃಹತ್ ಆರೋಗ್ಯ ಮೇಳ ಮತ್ತು ರಕ್ತದಾನ ಶಿಬಿರ ಆಯೋಜಿಸಲಾಗಿದೆ ಎಂದು ಬಳಗದ ಗೌರವಾಧ್ಯಕ್ಷ ಟಿ.ಆರ್. ತೇಜಸ್ವಿ ಕಟ್ಟೀಮನಿ ಹೇಳಿದ್ದಾರೆ.

- ಸ್ನೇಹ ಸಂಭ್ರಮ ಗೆಳೆಯರ ಬಳಗ ಆಯೋಜನೆ: ತೇಜಸ್ವಿ ಕಟ್ಟಿಮನಿ - - -

ದಾವಣಗೆರೆ: ಹರಿಹರ ತಾಲೂಕಿನ ಭಾನುವಳ್ಳಿ ಗ್ರಾಮದಲ್ಲಿ ಭಾನುವಳ್ಳಿಯ ಹಳೆಯ ವಿದ್ಯಾರ್ಥಿಗಳ ಸ್ನೇಹ ಸಂಭ್ರಮ ಗೆಳೆಯರ ಬಳಗದಿಂದ ಏ.12ರಂದು ಬೃಹತ್ ಆರೋಗ್ಯ ಮೇಳ ಮತ್ತು ರಕ್ತದಾನ ಶಿಬಿರ ಆಯೋಜಿಸಲಾಗಿದೆ ಎಂದು ಬಳಗದ ಗೌರವಾಧ್ಯಕ್ಷ ಟಿ.ಆರ್. ತೇಜಸ್ವಿ ಕಟ್ಟೀಮನಿ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 9ರಿಂದ ಸಂಜೆ 4 ಗಂಟೆವರೆಗೆ ಬೆಂಗಳೂರಿನ ಪ್ರಸಿದ್ಧ ಜಿಎಂ ಹಾಸ್ಪಿಟಲ್, ದಾವಣಗೆರೆ ಅಶ್ವಿನಿ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಅಂಡ್ ಹಾಸ್ಪಿಟಲ್‌, ದಾವಣಗೆರೆ ನೇತ್ರಾಲಯ, ಜಿಎಂ ಫಾರ್ಮಸುಟಿಕಲ್ ಸೈನ್ಸ್ ಅಂಡ್ ರೀಸರ್ಚ್‌, ಲಯನ್ಸ್‌ ಕ್ಲಬ್, ಆಸರೆ ವಿದ್ಯಾನಗರ, ಲೈಫ್ ಲೈನ್ ದಾವಣಗೆರೆ ನೇತೃತ್ವದಲ್ಲಿ ಶಿಬಿರ ನಡೆಯಲಿದೆ ಎಂದರು.

ಶಿಬಿರದಲ್ಲಿ ಸಾಮಾನ್ಯ ಕಾಯಿಲೆಗಳಿಗೆ ಔಷಧಿ ವಿತರಿಸಲಾಗುವುದು. ಆರೋಗ್ಯ ಮೇಳವನ್ನು ಜಿ.ಮಲ್ಲಿಕಾರ್ಜುನಪ್ಪ ಮತ್ತು ಭೀಮಸಮುದ್ರದ ಶ್ರೀಮತಿ ಹಾಲಮ್ಮ ಚಾರಿಟಬಲ್ ಫೌಂಡೇಷನ್ ಸಹಯೋಗದಲ್ಲಿ ನಡೆಸಲಾಗುತ್ತಿದೆ. ಭಾನುವಳ್ಳಿಯ ನೌಕರರ ಬಳಗ ಬೆಂಬಲ ನೀಡುವ ಮೂಲಕ ಶಿಬಿರದ ಯಶಸ್ಸಿಗೆ ಕೈಜೋಡಿಸುತ್ತಿದೆ. ಗ್ರಾಮದ ಮುಖಂಡರು, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಶಿಬಿರಕ್ಕೆ ಸಹಕಾರ ನೀಡುತ್ತಿದ್ದಾರೆ ಎಂದು ಹೇಳಿದರು.

ಬಳಗದ ಅಧ್ಯಕ್ಷ ಶಿವಕುಮಾರ ಮಾತನಾಡಿ, ಭಾನುವಳ್ಳಿ ಗ್ರಾಮದಲ್ಲಿಯೇ ಇದೊಂದು ಐತಿಹಾಸಿಕ ಆರೋಗ್ಯ ಶಿಬಿರವಾಗಲಿದೆ. ಆರೋಗ್ಯ ಮೇಳದ ಜೊತೆಗೆ ರಕ್ತದಾನ ಶಿಬಿರವೂ ನಡೆಯಲಿದೆ. ಗ್ರಾಮದ ಆರೋಗ್ಯವಂತ ವಿದ್ಯಾರ್ಥಿ, ಯುವಜನರು, ಪುರುಷ- ಮಹಿಳೆಯರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಲಿದ್ದಾರೆ. ಭಾನುವಳ್ಳಿ ಹಾಗೂ ಸುತ್ತಲಿನ ಗ್ರಾಮಸ್ಥರು ಶಿಬಿರದ ಸದುಪಯೋಗ ಪಡೆಯುವಂತೆ ಮನವಿ ಮಾಡಿದರು.

ಬಳಗದ ಉಪಾಧ್ಯಕ್ಷ ವಿಶ್ವನಾಥಯ್ಯ, ಪ್ರಧಾನ ಕಾರ್ಯದರ್ಶಿ ರಾಮನಗೌಡ, ಸಂಘಟನಾ ಕಾರ್ಯದರ್ಶಿ ಫಕೀರ, ಭಾನುವಳ್ಳಿ ಸರ್ಕಾರಿ ನೌಕರರ ಬಳಗದ ಕಾರ್ಯದರ್ಶಿ ಪ್ರಕಾಶ, ಮಹಿಳಾ ನಿರ್ದೇಶಕರಾದ ಸರಳ, ಗೀತಾ ಇದ್ದರು.

- - - -3ಕೆಡಿವಿಜಿ8.ಜೆಪಿಜಿ: ಆರೋಗ್ಯ ಶಿಬಿರ ಕುರಿತು ಟಿ.ಆರ್.ತೇಜಸ್ವಿ ಕಟ್ಟಿಮನಿ ಮಾತನಾಡಿದರು.