ರೈತನ ಜಮೀನಿನಲ್ಲಿ ಭಾರೀ ಗಾತ್ರದ ಹೆಬ್ಬಾವು ರಕ್ಷಣೆ..!

| Published : Jul 10 2025, 12:48 AM IST / Updated: Jul 10 2025, 12:49 AM IST

ಸಾರಾಂಶ

ದಳವಾಯಿಕೋಡಿಹಳ್ಳಿ ಗ್ರಾಮದ ವೆಂಕಟೇಶ್ ಅವರ ಜಮೀನಿನಲ್ಲಿ ಹಸುಗಳಿಗೆ ಸೀಮೆ ಹುಲ್ಲು ಕುಯ್ಯಲು ಹೋಗಿದ್ದಾಗ ಸೀಮೆ ಹುಲ್ಲಿನ ನಡುವೆ ಭಾರೀ ಗಾತ್ರದ ಹೆಬ್ಬಾವು ಕಂಡು ತೀವ್ರ ಭಯಗೊಂಡಿದ್ದಾನೆ. ತಕ್ಷಣ ಹಲಗೂರಿನ ಸ್ನೇಕ್ ಜಗದೀಶ್ ಅವರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹಲಗೂರು

ದಳವಾಯಿಕೋಡಿಹಳ್ಳಿ ಹೊರವಲಯದಲ್ಲಿ ಬುಧವಾರ ಸಂಜೆ ರೈತ ಬೋರಯ್ಯ ಜಮೀನಿನಲ್ಲಿ ಭಾರೀ ಗಾತ್ರದ 9 ಅಡಿ ಉದ್ದದ ಹೆಬ್ಬಾವು ಕಾಣಿಸಿಕೊಂಡಿದ್ದು, ಅದನ್ನು ರಕ್ಷಿಸಿ ಅರಣ್ಯ ಪ್ರದೇಶಕ್ಕೆ ಬಿಡಲಾಯಿತು.

ಗ್ರಾಮದ ವೆಂಕಟೇಶ್ ಅವರ ಜಮೀನಿನಲ್ಲಿ ಹಸುಗಳಿಗೆ ಸೀಮೆ ಹುಲ್ಲು ಕುಯ್ಯಲು ಹೋಗಿದ್ದಾಗ ಸೀಮೆ ಹುಲ್ಲಿನ ನಡುವೆ ಭಾರೀ ಗಾತ್ರದ ಹೆಬ್ಬಾವು ಕಂಡು ತೀವ್ರ ಭಯಗೊಂಡಿದ್ದಾನೆ. ತಕ್ಷಣ ಹಲಗೂರಿನ ಸ್ನೇಕ್ ಜಗದೀಶ್ ಅವರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಜಗದೀಶ್ ಮತ್ತು ಸಹಾಯಕ ಕೃಷ್ಣ ಹಾವನ್ನು ಸೆರೆ ಹಿಡಿದು ಬಸವನಬೆಟ್ಟ ಅರಣ್ಯ ಪ್ರದೇಶಕ್ಕೆ ಬಿಡಲು ಅರಣ್ಯ ಇಲಾಖೆ ಸಿಬ್ಬಂದಿಗೆ ನೆರವಾದರು.

ಜನ ವಸತಿ ಪ್ರದೇಶ, ಜಮೀನು ಪ್ರದೇಶಗಳಲ್ಲಿ ಯಾವುದೇ ಬಗೆಯ ಹಾವುಗಳು ಕಂಡು ಬಂದರೇ ಮೊ-8431500189 ಕರೆ ಮಾಡಿ ಎಲ್ಲಾ ಬಗೆಯ ಹಾವುಗಳನ್ನು ಸುರಕ್ಷಿತವಾಗಿ ಸೆರೆ ಹಿಡಿದು ಸಂರಕ್ಷಿತ ಪ್ರದೇಶಕ್ಕೆ ಬಿಡಲಾಗುವುದು ಎಂದು ಉರಗ ಪ್ರೇಮಿ ಜಗದೀಶ್ ಮನವಿ ಮಾಡಿದರು.

ಇಂದು ಆದಿಚುಂಚನಗಿರಿಯಲ್ಲಿ ಗುರುಪೂರ್ಣಿಮೆ

ನಾಗಮಂಗಲ:

ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಜು.10ರಂದು ಗುರುಪೂರ್ಣಿಮೆ ಪ್ರಯುಕ್ತ ವಿವಿಧ ಪೂಜಾ ಕಾರ್ಯಗಳು ಬಹಳ ವಿಜೃಂಭಣೆಯಿಂದ ನೆರೆವೇರಲಿವೆ.

ಶ್ರೀಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥಶ್ರೀಗಳ ಸಾನಿಧ್ಯದಲ್ಲಿ ಕ್ಷೇತ್ರದ ಅಧಿದೇವತೆ ಶ್ರೀಕಾಲಭೈರವೇಶ್ವರಸ್ವಾಮಿ, ಶ್ರೀ ಗಂಗಾಧರೇಶ್ವರಸ್ವಾಮಿ ಸೇರಿದಂತೆ ಎಲ್ಲ ದೇವರುಗಳಿಗೆ ಅಭಿಷೇಕ, ಗಂಗಾಸ್ನಾನ, ಪುಷ್ಪಾರ್ಚನೆ ಹಾಗೂ ವಿಶೇಷ ಪೂಜೆ ಜರುಗಲಿವೆ. ಭೈರವೈಕ್ಯ ಡಾ.ಬಾಲಗಂಗಾಧರನಾಥ ಮಹಾ ಸ್ವಾಮೀಜಿಗಳ ಮಹಾಸಮಾಧಿ ಬಳಿ ಹೋಮ, ಅಭಿಷೇಕ, ಪೂಜಾ ಕೈಂಕರ್ಯಗಳು ಸೇರಿದಂತೆ ಶ್ರೀಮಠದ 71 ಭೈರವೈಕ್ಯ ಶ್ರೀಗಳನ್ನು ಸ್ಮರಿಸಿ ಪೂಜಿಸಿಲಾಗುವುದು. ಗುರುಪೂರ್ಣಿಮೆ ಪ್ರಯುಕ್ತ ಶ್ರೀ ಮಠದಲ್ಲಿ ಗುರುವಾರ ಬೆಳಗ್ಗೆಯಿಂದಲ್ಲೇ ವಿವಿಧ ಪೂಜಾ ಮಹೋತ್ಸವಗಳು ಜರುಗಲಿದ್ದು, ಶ್ರೀಮಠದ ಸಾವಿರಾರು ಭಕ್ತರು ಗುರು ಪೂರ್ಣಿಮೆಯಂದು ಶ್ರೀ ಗುರುಗಳನ್ನು ಸ್ಮರಿಸಿ, ಪೂಜೆ ಸಲ್ಲಿಸಿ ಆಶೀರ್ವಾದ ಪಡೆಯುವರು.