5 ಮನೆಗಳ ಮೇಲೆ ಉರುಳಿದ ಬೃಹತ್ ಮರ: ಅದೃಷ್ಟವಶಾತ್‌, ಯಾದೇ ಪ್ರಾಣಹಾನಿ ಇಲ್ಲ

| Published : Jul 18 2025, 12:45 AM IST

5 ಮನೆಗಳ ಮೇಲೆ ಉರುಳಿದ ಬೃಹತ್ ಮರ: ಅದೃಷ್ಟವಶಾತ್‌, ಯಾದೇ ಪ್ರಾಣಹಾನಿ ಇಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಸತತ ಮಳೆಯಿಂದಾಗಿ ಬೃಹತ್ ಮರವೊಂದು ಐದು ಮನೆಗಳ ಮೇಲೆ ಉರುಳಿಬಿದ್ದಿದೆ. ಅದೃಷ್ಟವಶಾಥ್‌ ಮನೆಗಳಲ್ಲಿದ್ದವರು ಅಪಾಯದಿಂದ ಪಾರಾದ ಘಟನೆ ಗಾಂಧಿ ನಗರ ಪಕ್ಕದ ಗುಂಡಿ ಹೊಲದಲ್ಲಿ ಗುರುವಾರ ನಡೆದಿದೆ.

- ಸೂಕ್ತ ಪರಿಹಾರ ಕ್ರಮಕ್ಕೆ ಶಾಸಕ, ತಹಸೀಲ್ದಾರ್‌ ಸೂಚನೆ । ಗಾಂಧಿ ನಗರಕ್ಕೆ ಹೊಂದಿಕೊಂಡಿರುವ ಗುಂಡಿ ಹೊಲದಲ್ಲಿ ಘಟನೆ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಸತತ ಮಳೆಯಿಂದಾಗಿ ಬೃಹತ್ ಮರವೊಂದು ಐದು ಮನೆಗಳ ಮೇಲೆ ಉರುಳಿಬಿದ್ದಿದೆ. ಅದೃಷ್ಟವಶಾಥ್‌ ಮನೆಗಳಲ್ಲಿದ್ದವರು ಅಪಾಯದಿಂದ ಪಾರಾದ ಘಟನೆ ಗಾಂಧಿ ನಗರ ಪಕ್ಕದ ಗುಂಡಿ ಹೊಲದಲ್ಲಿ ಗುರುವಾರ ನಡೆದಿದೆ.

ಗಾಂಧಿ ನಗರಕ್ಕೆ ಹೊಂದಿಕೊಂಡಿರುವ ಗುಂಡಿ ಹೊಲದಲ್ಲಿ 2-3 ದಿನಗಳಿಂದ ಸುರಿದ ಸತತ ಮಳೆಯಿಂದಾಗಿ ನೆಲ ತೇವಗೊಂಡಿದೆ. ಪರಿಣಾಮ ದೈತ್ಯ ಮರ ಐದು ಮನೆಗಳ ಮೇಲೆ ಉರುಳಿ ಮನೆಗಳು ಜಖಂಗೊಂಡಿವೆ. ಯಾವುದೇ ಸಾವು, ನೋವು ಸಂಭವಿಸಿಲ್ಲ.

ಮರ ಬಿದ್ದ ವಿಚಾರ ತಿಳಿದು ದಾವಣಗೆರೆ ದಕ್ಷಿಣ ಕ್ಷೇತ್ರ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅವರು ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ, ಕಾಂಗ್ರೆಸ್ ಮುಖಂಡರು, ಅಧಿಕಾರಿಗಳಿಗೆ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ತಮಗೆ ಮಾಹಿತಿ ನೀಡುವಂತೆ ಘಟನಾ ಪ್ರದೇಶಕ್ಕೆ ಕಳಿಸಿದ್ದರು.

ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ, ಮಾಜಿ ಅಧ್ಯಕ್ಷ ಅಯೂಬ್ ಪೈಲ್ವಾನ್‌, ಪಾಲಿಕೆ ಮಾಜಿ ಸದಸ್ಯರಾದ ಎ.ನಾಗರಾಜ, ಎಲ್.ಎಂ.ಎಚ್. ಸಾಗರ್‌, ವಾರ್ಡ್ ಅಧ್ಯಕ್ಷ ಟಿ.ರಮೇಶ, ಜಿ.ರಾಕೇಶ ಗಾಂಧಿ ನಗರ ಇತರರು ಮರ ಬಿದ್ದ ಸ್ಥಳ ಪರಿಶೀಲಿಸಿ, ಶಾಸಕರಿಗೆ ಮಾಹಿತಿ ನೀಡಿದರು. ಅನಂತರ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ತಹಸೀಲ್ದಾರ್‌ಗೆ ತಕ್ಷಣ‍ವೇ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡುವಂತೆ ಆದೇಶಿಸಿದರು.

ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು, ತಾಲೂಕು ಕಚೇರಿ ಅಧಿಕಾರಿಗಳು, ಪಾಲಿಕೆ ಎಂಜಿನಿಯರ್‌ಗಳಿಗೆ ಆದಷ್ಟು ಬೇಗನೆ ಸಂತ್ರಸ್ಥ ಕುಟುಂಬಗಳಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳುವಂತೆ ದಿನೇಶ ಶೆಟ್ಟಿ ಸಹ ಸೂಚನೆ ನೀಡಿದರು.

- - -

-17ಕೆಡಿವಿಜಿ5.ಜೆಪಿಜಿ: ದಾವಣಗೆರೆ ಗಾಂಧಿ ನಗರದ ಪಕ್ಕದ ಗುಂಡಿ ಹೊಲದಲ್ಲಿ ಮನೆಗಳ ಮೇಲೆ ದೈತ್ಯ ಮರ ಉರುಳಿಬಿದ್ದ ಸ್ಥಳಕ್ಕೆ ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಅಧಿಕಾರಿಗಳು, ಮುಖಂಡರು ಭೇಟಿ ನೀಡಿ, ಅಹವಾಲು ಆಲಿಸಿದರು. -17ಕೆಡಿವಿಜಿ6, 7: ದಾವಣಗೆರೆ ಗಾಂಧಿ ನಗರದ ಪಕ್ಕದ ಗುಂಡಿ ಹೊಲದಲ್ಲಿ ಮನೆಗಳ ಮೇಲೆ ಧೈತ್ಯ ಮರ ಉರುಳಿ ಬಿದ್ದಿರುವುದು.