ಹುಯಿಗೆರೆ ಪಿಎಸಿಎಸ್: ಶೇ.10 ಡಿವಿಡೆಂಟ್ ಘೋಷಣೆ

| Published : Sep 21 2025, 02:00 AM IST

ಸಾರಾಂಶ

ಬಾಳೆಹೊನ್ನೂರು, ಹುಯಿಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಲಾಭದಲ್ಲಿ ಮುನ್ನಡೆಯುತ್ತಿರುವ ಹಿನ್ನೆಲೆಯಲ್ಲಿ ಸದಸ್ಯರಿಗೆ ಶೇ.10 ಡಿವಿಡೆಂಟ್ ಘೋಷಣೆ ಮಾಡಲಾಗಿದೆ ಎಂದು ಸಂಘದ ಅಧ್ಯಕ್ಷ ಬಿ.ಎಚ್.ಶಂಕರೇಗೌಡ ತಿಳಿಸಿದರು.

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಹುಯಿಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಲಾಭದಲ್ಲಿ ಮುನ್ನಡೆಯುತ್ತಿರುವ ಹಿನ್ನೆಲೆಯಲ್ಲಿ ಸದಸ್ಯರಿಗೆ ಶೇ.10 ಡಿವಿಡೆಂಟ್ ಘೋಷಣೆ ಮಾಡಲಾಗಿದೆ ಎಂದು ಸಂಘದ ಅಧ್ಯಕ್ಷ ಬಿ.ಎಚ್.ಶಂಕರೇಗೌಡ ತಿಳಿಸಿದರು.

ಹುಯಿಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಆಯೋಜಿಸಿದ್ದ 2024-25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಸಂಘ ₹4.30 ಲಕ್ಷ ನಿವ್ವಳ ಲಾಭ ಗಳಿಸಿದ್ದು, ಸದಸ್ಯರ ವ್ಯಾಪಾರ ವಹಿವಾಟು, ಆರ್ಥಿಕ ವಹಿವಾಟಿನಿಂದ ಇದು ಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸಂಘದ ಸದಸ್ಯರಿಗೆ ಶೇ.10 ಡಿವಿಡೆಂಟ್ ನೀಡಲು ಆಡಳಿತ ಮಂಡಳಿ ತೀರ್ಮಾನಿಸಿದೆ.

ಸಂಘ ಆರಂಭಗೊಂಡು ಕೆಲವೇ ವರ್ಷಗಳಲ್ಲಿ ಉತ್ತಮ ಆರ್ಥಿಕ ವಹಿವಾಟು ನಡೆಸುತ್ತ ಗ್ರಾಹಕರು, ಷೇರುದಾರರಿಗೆ ಅಗತ್ಯ ಸೇವೆಗಳನ್ನು ನೀಡುತ್ತಿದೆ. ಸಂಘದ ಷೇರುದಾರರು, ಗ್ರಾಹಕರೇ ಸಹಕಾರಿ ಸಂಸ್ಥೆಗಳಿಗೆ ಜೀವಾಳವಾಗಿದ್ದಾರೆ. ಮುಂದಿನ ದಿನಗಳಲ್ಲಿ ಸಂಘ ಹಲವು ವ್ಯಾಪಾರಾಭಿವೃದ್ಧಿ ಹಾಗೂ ಆರ್ಥಿಕಾಭಿವೃದ್ಧಿ ಚಟುವಟಿಕೆ ಕೈಗೊಳ್ಳಲಿದೆ ಎಂದರು.

ಸಂಘದ ಉಪಾಧ್ಯಕ್ಷ ಎಂ.ಆರ್.ಮಹೇಶ್‌ಕುಮಾರ್, ನಿರ್ದೇಶಕ ಎಚ್.ಎಸ್.ರವಿ, ಎಚ್.ಜೆ.ರಚನ್, ಎಸ್.ಎಸ್.ರಾಜಪ್ಪಗೌಡ, ಬಿ.ಕೆ.ಜಗದೀಶ್, ಎಂ.ಕೆ.ಮೋಹಿತ್, ಸುಮತಿ ಸತೀಶ್, ಅಶ್ವಿನಿ ವಿಜಯ, ಎಸ್.ಆರ್.ಸುರೇಶ್, ಎಂ.ಎಸ್.ಕೃಷ್ಣಪ್ಪ, ಕೆ.ಬಿ. ಶ್ರೀನಿವಾಸ್, ಸಿಇಒ ಸಂಜಯ್ ಮತ್ತಿತರರು ಹಾಜರಿದ್ದರು. ೨೦ಬಿಹೆಚ್‌ಆರ್ ೧: ಬಾಳೆಹೊನ್ನೂರು ಸಮೀಪದ ಹುಯಿಗೆರೆ ಪಿಎಸಿಎಸ್ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷ ಬಿ.ಎಚ್.ಶಂಕರೇಗೌಡ ಮಾತನಾಡಿದರು. ಉಪಾಧ್ಯಕ್ಷ ಮಹೇಶ್‌ಕುಮಾರ್, ನಿರ್ದೇಶಕರಾದ ರವಿ, ರಚನ್, ರಾಜಪ್ಪಗೌಡ, ಜಗದೀಶ್, ಮೋಹಿತ್ ಇದ್ದರು.