ಹಕ ಸ್ನೇಹಿಯಾದ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘ

| Published : Sep 25 2024, 12:49 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಹುಕ್ಕೇರಿ ಸಹಕಾರಿ ತತ್ವದಡಿ ಗ್ರಾಹಕರಿಗೆ ಗುಣಮಟ್ಟದ ವಿದ್ಯುತ್ ಪೂರೈಸುತ್ತಿರುವ ರಾಜ್ಯದ ಏಕೈಕ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘ ಗ್ರಾಹಕ ಸ್ನೇಹಿಯಾಗಿ ಹೊರಹೊಮ್ಮಿದೆ ಎಂದು ಯುವ ಉದ್ಯಮಿ, ನಿರ್ದೇಶಕ ಪೃಥ್ವಿ ಕತ್ತಿ ಹೇಳಿದರು.

ಕನ್ನಡಪ್ರಭ ವಾರ್ತೆ ಹುಕ್ಕೇರಿ

ಸಹಕಾರಿ ತತ್ವದಡಿ ಗ್ರಾಹಕರಿಗೆ ಗುಣಮಟ್ಟದ ವಿದ್ಯುತ್ ಪೂರೈಸುತ್ತಿರುವ ರಾಜ್ಯದ ಏಕೈಕ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘ ಗ್ರಾಹಕ ಸ್ನೇಹಿಯಾಗಿ ಹೊರಹೊಮ್ಮಿದೆ ಎಂದು ಯುವ ಉದ್ಯಮಿ, ನಿರ್ದೇಶಕ ಪೃಥ್ವಿ ಕತ್ತಿ ಹೇಳಿದರು.

ವಿದ್ಯುತ್ ಸಂಘದ ಆವರಣದಲ್ಲಿ ಮಂಗಳವಾರ ನಡೆದ 2023-24ನೇ ಸಾಲಿನ 55ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನ ವ್ಯಾಪ್ತಿಯಲ್ಲಿ ರೈತರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು, ವ್ಯಾಪಾರಸ್ಥರು ಸೇರಿದಂತೆ ಗ್ರಾಹಕರಿಗೆ ಗುಣಮ್ಟಟದ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

2023-24ನೇ ಸಾಲಿನಲ್ಲಿ ಒಟ್ಟು ₹298 ಕೋಟಿ ಮೊತ್ತದ ವಿದ್ಯುತ್‌ ಖರೀದಿಸಿ₹ 339 ಕೋಟಿಗೆ ಮಾರಾಟ ಮಾಡಲಾಗಿದೆ. ಇದರಿಂದ ₹41 ಕೋಟಿ ಉಳಿತಾಯವಾಗಿದೆ. ಈ ಸಾಲಿನಲ್ಲಿ ₹8.52 ಕೋಟಿ ಆಸ್ತಿ ಹೆಚ್ಚಳವಾಗಿದೆ. ಗೃಹ ಬಳಕೆ, ವಾಣಿಜ್ಯ, ಬೀದಿ ದೀಪಗಳು, ಕುಡಿಯುವ ನೀರು ಸೇರಿದಂತೆ ಒಟ್ಟು 2679 ಹೊಸ ವಿದ್ಯುತ್ ಜೋಡಣೆ ಕಲ್ಪಿಸಲಾಗಿದೆ. 1347 ವಿದ್ಯುತ್ ಪರಿವರ್ತಕ (ಟಿಸಿ)ಗಳನ್ನು ರಿಪೇರಿ ಮಾಡಲಾಗಿದೆ. ಒಟ್ಟು 101050 ಗೃಹ ಬಳಕೆ ಗ್ರಾಹಕರ ಪೈಕಿ 87403 ಗ್ರಾಹಕರು ರಾಜ್ಯ ಸರ್ಕಾರದ ಗೃಹಜ್ಯೋತಿ ಉಚಿತ ವಿದ್ಯುತ್ ಸೌಲಭ್ಯ ಪಡೆದಿದ್ದಾರೆ ಎಂದವರು ತಿಳಿಸಿದರು.

ಸರ್ಕಾರಿ ಸ್ವಾಮ್ಯದ ಕಂಪನಿಗಳಂತೆ ಹಲವು ದಶಕಗಳಿಂದ ಈ ಸಂಸ್ಥೆ ಗ್ರಾಹಕ-ಸದಸ್ಯರ ಹಿತಾಸಕ್ತಿ ಕಾಪಾಡಿಕೊಂಡಿದೆ. ಸಂಸ್ಥೆಯಲ್ಲಿ 420ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಈ ಭಾಗದ ನಿರುದ್ಯೋಗಿ ನಿವಾರಣೆಯಲ್ಲಿ ಮಹತ್ವದ ಪಾತ್ರ ವಹಿಸಿದೆ. ವಿದ್ಯುತ್ ಖರೀದಿ ಮತ್ತು ಮಾರಾಟ ವ್ಯವಸ್ಥೆಯನ್ನು ಅತ್ಯಂತ ಅಚ್ಚುಕಟ್ಟಾಗಿ ನಿಭಾಯಿಸಲಾಗಿದೆ. ವಿದ್ಯುತ್ ಕಳ್ಳತನ ತಡೆಗಟ್ಟಲು ಜಾಗೃತ ದಳ ರಚಿಸುವ ಬದಲು ರೈತರು ಪರಸ್ಪರ ಸಹಕಾರದಿಂದ ಸಂಸ್ಥೆಗೆ ಹಾನಿಯಾಗದಂತೆ ಜವಾಬ್ದಾರಿ ವಹಿಸಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷ ಕಲಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ವಿಷ್ಣು ರೇಡೆಕರ, ನಿರ್ದೇಶಕರಾದ ಶಶಿರಾಜ ಪಾಟೀಲ, ಕೆಂಚಪ್ಪ ಬೆಣಚಿನಮರಡಿ, ಜಯಗೌಡ ಪಾಟೀಲ, ಬಸಗೌಡ ಮಗೆನ್ನವರ, ಕುನಾಲ ಪಾಟೀಲ, ಜೋಮಲಿಂಗ ಪಟೋಳಿ, ರವೀಂದ್ರ ಅಸೂದೆ, ಈರಪ್ಪ ಬಂಜಿರಾಮ, ಸಂಗೀತಾ ದಪ್ಪಾದೂಳಿ, ಶಿವಲೀಲಾ ಮಣಗುತ್ತಿ, ರಮೇಶ ಕುಲಕರ್ಣಿ, ಸೋಮಲಿಂಗ ಪಾಟೀಲ, ವ್ಯವಸ್ಥಾಪಕ ನಿರ್ದೇಶಕಿ ರಂಜನಾ ಪೋಳ, ಮುಖಂಡರಾದ ಅಶೋಕ ಪಟ್ಟಣಶೆಟ್ಟಿ, ಬಸವರಾಜ ಮರಡಿ, ಸತ್ಯಪ್ಪಾ ನಾಯಿಕ, ರಾಜು ಮುನ್ನೋಳಿ, ಶೀತಲ್ ಬ್ಯಾಳಿ ಮತ್ತಿತರರು ಉಪಸ್ಥಿತರಿದ್ದರು.

ನಿರ್ದೇಶಕ ರವೀಂದ್ರ ಹಿಡಕಲ್ ಸ್ವಾಗತಿಸಿದರು. ಸ್ಥಾನಿಕ ಅಭಿಯಂತರ ನೇಮಿನಾಥ ಖೆಮಲಾಪುರೆ ನಿರೂಪಿಸಿದರು. ವ್ಯವಸ್ಥಾಪಕ ಡಿ.ಎಸ್.ನಾಯಿಕ ವಂದಿಸಿದರು. ಪ್ರಭಾರಿ ಲೆಕ್ಕಾಧಿಕಾರಿ ಎಸ್.ಎನ್. ಹಿರೇಮಠ ವಾರ್ಷಿಕ ವರದಿ ಓದಿದರು. ಎಸ್.ಆರ್. ಮಲಗೌಡನವರ ಅಂದಾಜು ಪತ್ರಿಕೆಗೆ ಮಂಜೂರು ಪಡೆದುಕೊಂಡರು.