ಪುತ್ತೂರು ನಮೋ ಅಭಿಮಾನಿ ಬಳಗದಿಂದ ಹುಲಿಕುಣಿತ, ಸಾಮೂಹಿಕ ವಾಹನ ಪೂಜೆ

| Published : Oct 13 2024, 01:12 AM IST

ಪುತ್ತೂರು ನಮೋ ಅಭಿಮಾನಿ ಬಳಗದಿಂದ ಹುಲಿಕುಣಿತ, ಸಾಮೂಹಿಕ ವಾಹನ ಪೂಜೆ
Share this Article
  • FB
  • TW
  • Linkdin
  • Email

ಸಾರಾಂಶ

೨೦೦ ಕ್ಕೂ ಹೆಚ್ಚು ವಾಹನಗಳಿಗೆ ಪೂಜೆ ನೆರವೇರಿಸಲಾಯಿತು. ಪಿಲಿ ರಾಧಣ್ಣ ಮತ್ತು ಬಳಗದ ಶಾರದಾ ಹುಲಿಗಳ ಕುಣಿತ ಮನರಂಜಿಸಿತು. ಆರಂಭದಲ್ಲಿ ಮಕ್ಕಳ ತಂಡದಿಂದ ಕುಣಿತ ಭಜನೆ ನಡೆಯಿತು.

ಕನ್ನಡಪ್ರಭವಾರ್ತೆ ಪುತ್ತೂರು:

ನಮೋ ಅಭಿಮಾನಿ ಬಳಗ ಪುತ್ತೂರು ಇವರ ವತಿಯಿಂದ ವಿಜಯ ದಶಮಿಯ ಹಿನ್ನಲೆಯಲ್ಲಿ ಪುತ್ತೂರು ನಗರದಲ್ಲಿರುವ ಎನ್.ಎಸ್. ಕಿಲ್ಲೆ ಮೈದಾನದಲ್ಲಿ ಹುಲಿ ಕುಣಿತ ಪ್ರದರ್ಶನ ಮತ್ತು ಸಾಮೂಹಿಕ ವಾಹನ ಪೂಜೆ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮವನ್ನು ಬಿಜೆಪಿ ಹಾಗೂ ಸಂಘ ಪರಿವಾರದ ಹಿರಿಯರಾದ ಯು. ಪೂವಪ್ಪ, ಮುಗೆರೋಡಿ ಬಾಲಕೃಷ್ಣ ರೈ ಮತ್ತು ಡಾ. ಎಂ.ಕೆ. ಪ್ರಸಾದ್ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ೨೦೦ ಕ್ಕೂ ಹೆಚ್ಚು ವಾಹನಗಳಿಗೆ ಪೂಜೆ ನೆರವೇರಿಸಲಾಯಿತು. ಪಿಲಿ ರಾಧಣ್ಣ ಮತ್ತು ಬಳಗದ ಶಾರದಾ ಹುಲಿಗಳ ಕುಣಿತ ಮನರಂಜಿಸಿತು. ಆರಂಭದಲ್ಲಿ ಮಕ್ಕಳ ತಂಡದಿಂದ ಕುಣಿತ ಭಜನೆ ನಡೆಯಿತು.ಮಾಜಿ ಶಾಸಕರಾದ ಸಂಜೀವ ಮಠಂದೂರು, ಮಲ್ಲಿಕಾ ಪ್ರಸಾದ್, ಬಿಜೆಪಿ ಪಕ್ಷ ಹಾಗೂ ಸಂಘಟನೆಗಳ ಪ್ರಮುಖರಾದ ಮುರಳೀಕೃಷ್ಣ ಹಸಂತಡ್ಕ, ಸಾಜ ರಾಧಾಕೃಷ್ಣ ಆಳ್ವ, ಶಶಿಕುಮಾರ್ ರೈ ಬಾಲ್ಯೊಟ್ಟು, ಸುರೇಶ್ ರೈ, ಚನಿಲ ತಿಮ್ಮಪ್ಪ ಶೆಟ್ಟಿ, ಅಪ್ಪಯ್ಯ ಮಣಿಯಾಣಿ, ಚಂದ್ರಶೇಖರ ರಾವ್ ಬಪ್ಪಳಿಗೆ ಮತ್ತಿತರರು ಉಪಸ್ಥಿತರಿದ್ದರು.