ಹುಳಿಯಾರು ಶ್ರೀ ದುರ್ಗಾಪರಮೇಶ್ವರಿ ದೇವಿಯ ಜಾತ್ರೋತ್ಸವ

| Published : Apr 20 2025, 01:46 AM IST

ಹುಳಿಯಾರು ಶ್ರೀ ದುರ್ಗಾಪರಮೇಶ್ವರಿ ದೇವಿಯ ಜಾತ್ರೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ರಥದಲ್ಲಿ ಕುಳ್ಳಿರಿಸುವಾಗ ಹುಳಿಯಾರು ಹಾಗೂ ಸುತ್ತಮುತ್ತಲಿನ ದೇವರುಗಳಾದ ಹುಳಿಯಾರ್ ಅಮ್ಮ, ಕೆಂಚಮ್ಮ, ಹೊಸಳ್ಳಿ ಕೊಲ್ಲಾಪುರದಮ್ಮ, ಗೌಡಗೆರೆ ಶ್ರೀ ದುರ್ಗಮ್ಮ, ತಿರುಮಲಾಪುರದ ಶ್ರೀಕೊಲ್ಲಾಪುರದಮ್ಮ, ಹೊಸಳ್ಳಿ ಪಾಳ್ಯದ ಅಂತರಘಟ್ಟಮ್ಮ, ಕೆ.ಸಿ. ಪಾಳ್ಯದ ಶ್ರೀ ಅಂತರಘಟ್ಟಮ್ಮ ದೇವರುಗಳೊಂದಿಗೆ ಶ್ರೀ ದುರ್ಗಾ ಪರಮೇಶ್ವರಿ ದೇವಿಯನ್ನು ರಥದಲ್ಲಿ ಕುಳ್ಳಿರಿಸಿ ರಥೋತ್ಸವವನ್ನು ನಡೆಸಲಾಯಿತು.

ಹುಳಿಯಾರು: ಪಟ್ಟಣದ ಶ್ರೀ ದುರ್ಗಾ ಪರಮೇಶ್ವರಿ ದೇವಿಯ 53ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಬ್ರಹ್ಮರಥೋತ್ಸವವೂ ಅಪಾರ ಭಕ್ತ ಸಮೂಹದ ಹರ್ಷೋದ್ಗಾರದೊಂದಿಗೆ ವೈಭವಯುತವಾಗಿ ಜರುಗಿತು.

ರಥೋತ್ಸವದ ಅಂಗವಾಗಿ ಮುಂಜಾನೆ ರಥವನ್ನು ಸ್ವಚ್ಛಗೊಳಿಸಿ ತಳಿರು- ತೋರಣಗಳಿಂದ ಸಿಂಗರಿಸಿ, ಕೇಸರಿ ಬಾವುಟಗಳನ್ನು ಕಟ್ಟಿ, ದಿಬ್ಬಲಿ ಸೇರಿದಂತೆ ವಿವಿಧ ಪೂಜೆ ನಡೆಸಿ ನಂತರ ದೇಗುಲದಲ್ಲಿ ದೇವಿಯನ್ನು ಹೂವು, ಹೊಂಬಾಳೆಯಿಂದ ಸಿಂಗಾರಗೊಳಿಸಿ ವಿಶೇಷ ಪೂಜೆ ನಡೆಸಲಾಯಿತು. ನಂತರ ರಥದಲ್ಲಿ ಕುಳ್ಳಿರಿಸುವಾಗ ಹುಳಿಯಾರು ಹಾಗೂ ಸುತ್ತಮುತ್ತಲಿನ ದೇವರುಗಳಾದ ಹುಳಿಯಾರ್ ಅಮ್ಮ, ಕೆಂಚಮ್ಮ, ಹೊಸಳ್ಳಿ ಕೊಲ್ಲಾಪುರದಮ್ಮ, ಗೌಡಗೆರೆ ಶ್ರೀ ದುರ್ಗಮ್ಮ, ತಿರುಮಲಾಪುರದ ಶ್ರೀಕೊಲ್ಲಾಪುರದಮ್ಮ, ಹೊಸಳ್ಳಿ ಪಾಳ್ಯದ ಅಂತರಘಟ್ಟಮ್ಮ, ಕೆ.ಸಿ. ಪಾಳ್ಯದ ಶ್ರೀ ಅಂತರಘಟ್ಟಮ್ಮ ದೇವರುಗಳೊಂದಿಗೆ ಶ್ರೀ ದುರ್ಗಾ ಪರಮೇಶ್ವರಿ ದೇವಿಯನ್ನು ರಥದಲ್ಲಿ ಕುಳ್ಳಿರಿಸಿ ರಥೋತ್ಸವವನ್ನು ನಡೆಸಲಾಯಿತು. ಬಿರು ಬಿಸಿಲನ್ನು ಲೆಕ್ಕಿಸದೆ ಸಾವಿರಾರು ಭಕ್ತರು ತೇರನ್ನು ಎಳೆದು ತಾಯಿಯ ಕೃಪೆಗೆ ಪಾತ್ರರಾದರು.

ರಥೋತ್ಸವ ನಡೆದ ನಂತರ ತೇರಿಗೆ ಬಾಳೆಹಣ್ಣು ಎಸೆದು ಕಳಸದಲ್ಲಿನ ನಿಂಬೆಹಣ್ಣು ಕೆಡವಲು ಭಕ್ತರು ಮುಗಿಬಿದ್ದರು, ರಥೋತ್ಸವಕ್ಕೆ ಬಜರಂಗದಳದ ವತಿಯಿಂದ ದೇವರಿಗೆ ಮೋಸಂಬಿ ಹಾರವು ಎಲ್ಲರ ಗಮನ ಸೆಳೆಯಿತು. ರಥೋತ್ಸವಕ್ಕೆ ಆಗಮಿಸಿದ್ದ ನಾಗಾಸಾಧು ಧನಂಜಯ್ ಗುರೂಜೀ ಆಶೀರ್ವಚನ ನೀಡಿದರು. ನಂತರ ದೇವಾಲಯ ಸಮಿತಿಯಿಂದ ಅನ್ನ ಸಂತರ್ಪಣೆ ನಡೆಸಲಾಯಿತು ಹಾಗೂ ಕೆಲ ಭಕ್ತಾದಿಗಳು ಭಕ್ತರಿಗೆ ತಂಪು ಮಜ್ಜಿಗೆ ಪಾನೀಯ ನೀಡಿದರು.