ಸಾರಾಂಶ
ಕನ್ನಡಪ್ರಭ ವಾರ್ತೆ ನಂಜನಗೂಡುದಲಿತ ಮತ್ತು ಒಕ್ಕಲಿಗ ಸಮುದಾಯದ ಜಾತಿ ನಿಂದನೆಗೊಳಿಸಿ ಮಹಿಳೆಯರನ್ನು ಅಪಮಾನಗೊಳಿಸಿರುವ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಿ, ಕಾನೂನು ಶಿಕ್ಷೆಗೆ ಒಳಪಡಿಸಬೇಕೆಂದು ಒತ್ತಾಯಿಸಿ ಪಟ್ಟಣದಲ್ಲಿ ಕಾಂಗ್ರೆಸ್ ಪ್ರತಿಭಟಿಸಿತು.ಪಟ್ಟಣದ ಹುಲ್ಲಹಳ್ಳಿ ವೃತ್ತದ ಬಳಿ ಕಾಂಗ್ರೆಸ್ ಕಾರ್ಯಕರ್ತರು ಮೈಸೂರು ಮತ್ತು ನಂಜನಗೂಡು ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಮಾನವ ಸರಪಳಿ ನಿರ್ಮಿಸಿ, ಮುನಿರತ್ನ ಅವರ ಪ್ರತಿಕೃತಿ ಧಹಿಸಿ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಶಾಸಕ ದರ್ಶನ್ ಧ್ರುವನಾರಾಯಣ್ ಮಾತನಾಡಿ, ಒಬ್ಬ ಶಾಸಕನಾಗಿ ಸಂವಿಧಾನಿಕ ಹುದ್ದೆಯಲ್ಲಿದ್ದುಕೊಂಡು ಸರ್ವಜನಾಂಗವನ್ನು ಸಮವಾಗಿ ಕಾಣಬೇಕಿದ್ದ ಶಾಸಕ ಮುನಿರತ್ನ ಅವರು, ದಲಿತರ ವಿರುದ್ದ, ಒಕ್ಕಲಿಗರ ವಿರುದ್ದ ಮಹಿಳೆಯರ ವಿರುದ್ದ ಅವ್ಯಾಚ್ಯ ಶಬ್ದಗಳನ್ನು ಬಳಸಿ ಜಾತಿ ನಿಂದನೆ ಮಾಡಿರುವುದು ಅಕ್ಷಮ್ಯ ಅಪರಾಧವಾಗಿದೆ. ಇಂತಹ ನೀಚ ಮನಸ್ಥಿತಿಯುಳ್ಳ ಮುನಿರತ್ನ ಅವರು ಶಾಸಕರಾಗಿ ಸಂವಿಧಾನಿಕ ಹುದ್ದೆಯಲ್ಲಿ ಇರಲಿಕ್ಕೆ ನಾಲಾಯಕ್ಕು, ಆದ್ದರಿಂದ ಅವರು ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕು, ಬಿಜೆಪಿ ನಾಯಕರೂ ಕೂಡ ಅವರ ಮೇಲೆ ಶಿಸ್ತು ಕ್ರಮವಹಿಸಿ ರಾಜೀನಾಮೆ ಸಲ್ಲಿಸುವಂತೆ ಸೂಚನೆ ನೀಡಬೇಕು ಎಂದು ಆಗ್ರಹಿಸಿದರು.ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಮಾತನಾಡಿ, ಮುನಿರತ್ನ ಅವರು ಸಾರ್ವಜನಿಕರ ಜೀವನದಲ್ಲಿದ್ದುಕೊಂಡು ಕಮಿಷನ್ ವಿಚಾರವಾಗಿ ದಲಿತ ಮತ್ತು ಒಕ್ಕಲಿಗ ಸಮುದಾಯದ ಜಾತಿ ನಿಂದನೆ ಮಾಡಿರುವುದಕ್ಕೆ ಖಂಡಿಸಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೇಶ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಕಂಠನಾಯಕ, ಹುಲ್ಲಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಕಂಠನಾಯಕ, ಜಿಪಂ ಮಾಜಿ ಸದಸ್ಯ ಕೆ. ಮಾರುತಿ, ತಾಪಂ ಮಾಜಿ ಸದಸ್ಯ ಎಚ್.ಎಸ್. ಮೂಗಶೆಟ್ಟಿ, ಎಸ್ಸಿ ಘಟಕದ ಜಿಲ್ಲಾ ಉಪಾಧ್ಯಕ್ಷ ರವಿಪ್ರಕಾಶ್, ವಿಶ್ವಕರ್ಮ ನಿಗಮ ಮಾಜಿ ಅಧ್ಯಕ್ಷ ನಂದಕುಮಾರ್, ನಗರಸಭಾ ಅಧ್ಯಕ್ಷ ಶ್ರೀಕಂಠಸ್ವಾಮಿ, ನಗರಸಭಾ ಸದಸ್ಯರಾದ ಗಾಯತ್ರಿ, ಪ್ರದೀಪ್, ಗಂಗಾಧರ್, ಎಪಿಎಂಸಿ ಮಾಜಿ ಉಪಾಧ್ಯಕ್ಷ ಕೆಂಡಗಣ್ಣಪ್ಪ, ಮುಖಂಡರಾದ ರಾಜು, ಸಿದ್ದಿಖ್, ರಾಜೇಶ್, ಶಿವಣ್ಣ, ನಾಗರಾಜಯ್ಯ, ಜಿ. ಬಸವರಾಜು, ಅಜ್ಗರ್, ಎಂ.ಎನ್. ಮಂಜುನಾಥ್, ದೊರೆಸ್ವಾಮಿ, ಗ್ರಾಪಂ ಸದಸ್ಯ ಮುದ್ದುಮಾದಶೆಟ್ಟಿ, ಮುಖಂಡರು, ಕಾಂಗ್ರೇಸ್ ಕಾರ್ಯಕರ್ತರು ಇದ್ದರು.