ಸಾರಾಂಶ
ಬಸ್ಸು ನಿಲ್ದಾಣದಲ್ಲಿ ಸಂಪೂರ್ಣ ರಸ್ತೆ ತಡೆ ಮಾಡಿ ವಿವಿಧ ಸಂವಿಧಾನಿಕ ಕುರಿತು ಹಕ್ಕೋತ್ತಾಯ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಸೋಮವಾರ ಇಲ್ಲಿಯ ಬಸ್ಸು ನಿಲ್ದಾಣದಲ್ಲಿ ಸಂಪೂರ್ಣ ರಸ್ತೆ ತಡೆ ಮಾಡಿ ಏಳನೇ ಮಾನವ ಸರಪಳಿ ನಿರ್ಮಿಸಿ ವಿವಿಧ ಸಂವಿಧಾನಿಕ ಕುರಿತು ಹಕ್ಕೋತ್ತಾಯ ಮಾಡಲಾಯಿತು.ಕೊಡವಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ ಮತ್ತು ಎಸ್ಟಿ ವರ್ಗೀಕರಣವು ಸೇರಿದಂತೆ 2026ರ ರಾಷ್ಟ್ರೀಯ ಜನಗಣತಿಯೊಂದಿಗೆ ಜನಾಂಗವಾರು ಮಾಹಿತಿ ಕಲೆಹಾಕುವ ಸಂದರ್ಭ ಆದಿಮ ಸಂಜಾತ ಏಕ-ಜನಾಂಗೀಯ (ಆ್ಯನಿಮಿಸ್ಟಿಕ್) ಕೊಡವರಿಗಾಗಿ ಪ್ರತ್ಯೇಕ ಕೋಡ್ ಮತ್ತು ಕಾಲಮ್ ನ್ನು ಸೇರಿಸಬೇಕು ಎಂದು ಸಿಎನ್ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಮಾತನಾಡಿ ಒತ್ತಾಯಿಸಿದರು.ಸಂಸತ್ ಹಾಗೂ ವಿಧಾನಸಭೆಯಲ್ಲಿ ಕೊಡವರಿಗೆ ವಿಶೇಷ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಸೇರಿದಂತೆ ಇನ್ನಿತರ ಬೇಡಿಕೆ ಬಗ್ಗೆ ಒತ್ತಾಯಿಸಿ ಜನಜಾಗೃತಿ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಕೊಡವ ಸಮಾಜದ ಅಧ್ಯಕ್ಷ ಮುಂಡಂಡ ಸಿ. ನಾಣಯ್ಯ, ಕೇಟೊಳಿರ ಹರೀಶ್ ಪೂವಯ್ಯ, ಕುಂಡ್ಯೋಳಂಡ ರಮೇಶ್ ಮುದ್ದಯ್ಯ , ಕಲಿಯಂಡ ಪ್ರಕಾಶ್, ಕುಲ್ಲೇಟಿರ ಅರುಣ್ ಬೇಬಾ, ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಕುಲ್ಲೇಟಿರ ಅಜಿತ್ ನಾಣಯ್ಯ ಸೇರಿದಂತೆ ಜನಾಂಗ ಬಾಂಧವರು ಭಾಗವಹಿಸಿದ್ದರು.