ಕಿತ್ತೂರಲ್ಲಿ ಮಾನವ ಸರಪಳಿ ಅಭಿಯಾನ‌ ಯಶಸ್ವಿ

| Published : Sep 16 2024, 01:55 AM IST

ಸಾರಾಂಶ

ಚನ್ನಮ್ಮನ ಕಿತ್ತೂರು: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನದ ಅಂಗವಾಗಿ ಮಾನವ ಸರಪಳಿ ಅಭಿಯಾನ‌ ಕಿತ್ತೂರು ವಿಧಾನಸಭಾ ಮತಕ್ಷೇತ್ರದಲ್ಲಿ ಯಶಸ್ವಿಯಾಗಿ ನಡೆಯಿತು.

ಚನ್ನಮ್ಮನ ಕಿತ್ತೂರು: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನದ ಅಂಗವಾಗಿ ಮಾನವ ಸರಪಳಿ ಅಭಿಯಾನ‌ ಕಿತ್ತೂರು ವಿಧಾನಸಭಾ ಮತಕ್ಷೇತ್ರದಲ್ಲಿ ಯಶಸ್ವಿಯಾಗಿ ನಡೆಯಿತು.

ರಾಷ್ಟ್ರೀಯ ಹೆದ್ದಾರಿ ಪಕ್ಕದ ಚನ್ನಮ್ಮಾಜಿಯ ವರ್ತುಳದಲ್ಲಿ ಭಾನುವಾರ ಸಂವಿಧಾನ ಪೀಠಿಕೆ ಬೋಧಿಸಿ ಪ್ರತಿಜ್ಞಾ ವಿಧಿಯನ್ನು ಶಾಸಕ ಬಾಬಾಸಾಹೇಬ ಪಾಟೀಲ ಹಾಗೂ ಅಧಿಕಾರಿಗಳು ಸ್ವೀಕರಿಸಿದರು.

ತಾಲೂಕಿನ ಮುತ್ನಾಳ ಗ್ರಾಮದಿಂದ ಧಾರವಾಡ ಹದ್ದಿಯ ಶಿವಾ ಪೆಟ್ರೋಲ್ ಪಂಪ್‌ ವರೆಗೂ ೨೫ ಸಾವಿರಕ್ಕೂ ಅಧಿಕ ಜನರು ೨೬ ಕಿ.ಮೀ ವ್ಯಾಪ್ತಿಯವರೆಗೂ ಮಾನವ ಸರಪಳಿ ನಿರ್ಮಿಸಲಾಗಿತ್ತು, ತೆರೆದ ವಾಹನದಲ್ಲಿ ಶಾಸಕರು ಹಾಗೂ ಅಧಿಕಾರಿಗಳು ಮಾನವ ಸರಪಳಿ‌ವಿಕ್ಷೀಸಿದರು. ಶಾಸಕ ಬಾಬಾಸಾಹೇಬ ಪಾಟೀಲ, ತಹಸೀಲ್ದಾರ ರವೀಂದ್ರ ಹಾದಿಮನಿ, ಇಒ ಕಿರಣ ಘೋರ್ಪಡೆ, ಬಿಇಒ ಸಿ.ವೈ. ತುಬಾಕಿ , ಸಿಪಿಐ ಶಿವಾನಂದ ಗುಡಗನಟ್ಟಿ, ಪಿಎಸೈ ಪ್ರವೀಣ ಗಂಗೋಳ, ಸೇರಿದಂತೆ ಎಲ್ಲ ಇಲಾಖೆಯ ಅಧಿಕಾರಿಗಳು, ನೌಕರರು , ಶಾಲಾ ಕಾಲೇಜಿನ ಮಕ್ಕಳು, ಸಾರ್ವಜನಿಕರು ಇದ್ದರು.