ಗ್ರಾಮಗಳಲ್ಲಿ ಧಾರ್ಮಿಕ ಕೇಂದ್ರಗಳು ಒಗ್ಗಟ್ಟು ಮೂಡಿಸುತ್ತವೆ. ಮನೆಗಳಲ್ಲಿ ಮಕ್ಕಳಿಗೆ ಸಂಸ್ಕಾರ ಕಲಿಸಬೇಕು. ಮನೆ ಕಟ್ಟುವುದು ಸುಲಭ ಆದರೆ ನೆಮ್ಮದಿಯ ವಾತಾವರಣ ಕಲ್ಪಿಸುವ ಮನಸ್ಸುಗಳನ್ನು ಕಟ್ಟುವ ನಿಟ್ಟಿನಲ್ಲಿ ಸೌಹಾರ್ದಯುತ ಬಾಳುವೇ ನಡೆಸುವುದು ಅತಿ ಮುಖ್ಯ, ಹಳ್ಳಿಗಳಲ್ಲಿ ಎಲ್ಲರೂ ಅಣ್ಣ ತಮ್ಮಂದಿರಂತೆ ಬದುಕಬೇಕು. ಹೆಣ್ಣು ಮನೆಯ ಕಣ್ಣು. ಗೌರವಿಸಿ ತಮ್ಮ ಮನೆಗಳನ್ನು ಬೆಳಗಿಸಿಕೊಳ್ಳಿ .

ಕನ್ನಡಪ್ರಭವಾರ್ತೆ, ಮಧುಗಿರಿ

ಮನುಷ್ಯನ ಆತ್ಮಸಾಕ್ಷಿಯೇ ದೈವ ರೂಪ. ಪ್ರತಿಯೊಬ್ಬರೂ ಮಾಡುವ ಕೆಲಸಗಳಿಗೆ ಸರಿ ತಪ್ಪುಗಳ ಪ್ರತಿಕ್ರಿಯೆ ನಮ್ಮೊಳಗಿನಿಂದಲೇ ಬರುತ್ತದೆ. ಅದಕ್ಕೆ ಬೆಲೆ ಕೊಟ್ಟು ಎಚ್ಚರ ವಹಿಸೋಣ ಎಂದು ಎಲೆರಾಂಪುರ ಕುಂಚಿಟಿಗ ಮಠದ ಪೀಠಾಧ್ಯಕ್ಷ ಶ್ರೀ ಹನುಮಂತನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಲೂಕಿನ ದೊಡ್ಡೇರಿ ಹೋಬಳಿ ಕೆ. ಬಸವನಹಳ್ಳಿ ಗ್ರಾಮದಲ್ಲಿ ಶ್ರೀ ಆಂಜನೇಯ ಸ್ವಾಮಿ ನೂತನ ದೇವಾಲಯದ ಬ್ರಹ್ಮ ಕಳಶ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಿಥಿಲಗೊಂಡ ದೇವಾಲಯಗಳನ್ನು ಪುನರುಜೀವನಗೊಳಿಸಿ ಪೂಜೆ ಪುನಸ್ಕಾರಗಳಿಗೆ ಅವಕಾಶ ಕಲ್ಪಿಸಿ ಕೊಡುವುದರಿಂದ ಒಳಿತಾಗುತ್ತದೆ. ತಂದೆ ತಾಯಿಗಳನ್ನು ವೃದ್ಧಾಶ್ರಮಗಳಿಗೆ ಬಿಡದೆ ಜೋಪಾನ ಮಾಡಿ ಎಂದು ಸಲಹೆ ಮಾಡಿದರು. ಗ್ರಾಮಗಳಲ್ಲಿ ಧಾರ್ಮಿಕ ಕೇಂದ್ರಗಳು ಒಗ್ಗಟ್ಟು ಮೂಡಿಸುತ್ತವೆ. ಮನೆಗಳಲ್ಲಿ ಮಕ್ಕಳಿಗೆ ಸಂಸ್ಕಾರ ಕಲಿಸಬೇಕು. ಮನೆ ಕಟ್ಟುವುದು ಸುಲಭ ಆದರೆ ನೆಮ್ಮದಿಯ ವಾತಾವರಣ ಕಲ್ಪಿಸುವ ಮನಸ್ಸುಗಳನ್ನು ಕಟ್ಟುವ ನಿಟ್ಟಿನಲ್ಲಿ ಸೌಹಾರ್ದಯುತ ಬಾಳುವೇ ನಡೆಸುವುದು ಅತಿ ಮುಖ್ಯ, ಹಳ್ಳಿಗಳಲ್ಲಿ ಎಲ್ಲರೂ ಅಣ್ಣ ತಮ್ಮಂದಿರಂತೆ ಬದುಕಬೇಕು. ಹೆಣ್ಣು ಮನೆಯ ಕಣ್ಣು. ಗೌರವಿಸಿ ತಮ್ಮ ಮನೆಗಳನ್ನು ಬೆಳಗಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ರಂಗನಾಥ್, ಭಾರತಿ ದಂಪತಿ ಹಾಗೂ ದೇವಸ್ಥಾನದ ಸಮಿತಿ ಬಸವನಹಳ್ಳಿ ಲೋಕೇಶ್, ರಾಜಕುಮಾರ್, ಶಾಂತಣ್ಣ, ನಾರಾಯಣಪ್ಪ, ಚಿಕ್ಕಪ್ಪಯ್ಯ, ಚಿಕ್ಕರಂಗಪ್ಪ, ತಿಮ್ಮಣ್ಣ, ಪುಟ್ಟದ್ಯಾವಣ್ಣ, ರಂಗಧಾಮಪ್ಪ, ರಂಗನಾಥ್, ಶ್ರೀರಂಗಪ್ಪ, ಊರಿನ ಗ್ರಾಮಸ್ಥರು ಹಾಜರಿದ್ದರು.