ಮಾನವ ಕಳ್ಳ ಸಾಗಾಣಿಕೆ ಅತಿ ದೊಡ್ಡ ಪಿಡುಗು: ವಕೀಲ ಪರಮೇಶ್

| Published : Jul 31 2024, 01:01 AM IST

ಮಾನವ ಕಳ್ಳ ಸಾಗಾಣಿಕೆ ಅತಿ ದೊಡ್ಡ ಪಿಡುಗು: ವಕೀಲ ಪರಮೇಶ್
Share this Article
  • FB
  • TW
  • Linkdin
  • Email

ಸಾರಾಂಶ

ಮಾನವ ಕಳ್ಳ ಸಾಗಾಣಿಕೆ ಹೆಸರಿನಲ್ಲಿ ಮನುಷ್ಯನ ಅಂಗಾಂಗ ತೆಗೆದು ಮಾರಾಟ ಮಾಡುವುದು, ಭಿಕ್ಷಾಟನೆ, ಹೆಣ್ಣು ಮಕ್ಕಳನ್ನು ವೇಶ್ಯಾವಾಟಿಕೆಗೆ ದೂಡುವುದು ಹಾಗೂ ಜೀತಪದ್ಧತಿ ಸೇರಿ ಇನ್ನಿತರ ಕಾನೂನು ಬಾಹಿರ ಕಾರ್ಯಗಳಿಗೆ ಬಳಸಿಕೊಳ್ಳಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಮಾನವ ಕಳ್ಳ ಸಾಗಾಣಿಕೆ ಅತಿ ದೊಡ್ಡ ಪಿಡುಗಾಗಿದೆ. ದೇಶವಲ್ಲದೇ ಪ್ರಪಂಚದಾದ್ಯಂತ ನಡೆಯುತ್ತಿದೆ ಎಂದು ವಕೀಲ ಪರಮೇಶ್ ಆತಂಕ ವ್ಯಕ್ತಪಡಿಸಿದರು.

ಪಟ್ಟಣದ ಕಾವೇರಿ ಪ್ರೌಢ ಶಾಲೆಯಲ್ಲಿ ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ವಿರೋಧಿ ಸಂಸ್ಥೆಯಿಂದ ಆಯೋಜಿಸಿದ್ದ ಮಾನವ ಕಳ್ಳ ಸಾಗಾಣೆ ತಡೆ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಪಂಚದಾದ್ಯಂತ ಮಾನವ ಕಳ್ಳ ಸಾಗಾಣಿಕೆ ಎಗಿಲ್ಲದೆ ನಡೆಯುತ್ತಿದೆ. ಕುರಿ, ಕೋಳಿ ಇತರೆ ಪ್ರಾಣಿ-ಪಕ್ಷಗಳ ಕಳ್ಳತನದ ರೀತಿ ಮನುಷ್ಯರ ಕಳ್ಳತನವಾಗುತ್ತಿದೆ. ಮಾನವ ಕಳ್ಳ ಸಾಗಾಣಿಕೆ ಹೆಸರಿನಲ್ಲಿ ಮನುಷ್ಯನ ಅಂಗಾಂಗ ತೆಗೆದು ಮಾರಾಟ ಮಾಡುವುದು, ಭಿಕ್ಷಾಟನೆ, ಹೆಣ್ಣು ಮಕ್ಕಳನ್ನು ವೇಶ್ಯಾವಾಟಿಕೆಗೆ ದೂಡುವುದು ಹಾಗೂ ಜೀತಪದ್ಧತಿ ಸೇರಿ ಇನ್ನಿತರ ಕಾನೂನು ಬಾಹಿರ ಕಾರ್ಯಗಳಿಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ಬಗ್ಗೆ ಪ್ರಕರಣಗಳು ಕಂಡ ಬಂದರೆ ವಿದ್ಯಾರ್ಥಿಗಳು ತಮ್ಮ ಹತ್ತಿರದ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಬೇಕು.14 ವರ್ಷದ ಮಕ್ಕಳಿಂದ ದುಡಿಸಿಕೊಳ್ಳುವಂತಿಲ್ಲ ಮತ್ತು ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ತಡೆಯುವಂತಹ ಪ್ರೌವೃತ್ತಿಯನ್ನು ವಿದ್ಯಾರ್ಥಿ ದೆಸೆಯಲ್ಲೇ ಮೈಗೂಡಿಸಿಕೊಳ್ಳಬೇಕು ಎಂದು ಕರೆಕೊಟ್ಟರು.

ತಾಲೂಕು ಘಟಕ ಅಧ್ಯಕ್ಷ ಎಸಿಸಿ ಪ್ರಕಾಶ್ ಮಾತನಾಡಿ, ಮಾನವ ಕಳ್ಳ ಸಾಗಾಣಿಕೆ ಕಾನೂನು ರೀತಿ ಶಿಕ್ಷಾರ್ಹ ಅಪರಾಧ. ಇದನ್ನು ಎಲ್ಲರ ಕರ್ತವ್ಯ. ಪ್ರಕರಣಗಳು ಕಂಡು ಬಂದಲ್ಲಿ ಸಹಾಯವಾಣಿ 15100 ಕರೆ ಮಾಡಿ ಮಾಹಿತಿ ನೀಡುವಂತೆ ತಿಳಿಸಿದರು.

ಈ ವೇಳೆ ಸಂಸ್ಥೆ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಜಯ್ ಕುಮಾರ್ (ಮಾವ), ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿ ಎನ್.ಸರಸ್ವತಿ, ಜಿಲ್ಲಾಧ್ಯಕ್ಷೆ ಪಿ. ಆಶಾಲತ, ರಾಜ್ಯ ಆರೋಗ್ಯ ಪ್ರಧಾನ ಕಾರ್ಯದರ್ಶಿ ಡಾ.ಆರ್.ಕೆ ನಾಗರಾಜು, ರಾಜ್ಯ ಕೃಷಿ ಪ್ರಧಾನ ಕಾರ್ಯದರ್ಶಿ ವಿಜೇಂದ್ರ, ಮಾಧ್ಯಮ ವಿಭಾಗ ರಾಜ್ಯ ಪ್ರಧಾನ ಕಾರ್ಯದರ್ಶಿ ಎಲ್.ವಿ ನವೀನ್‌ಕುಮಾರ್, ರಾಜ್ಯ ಘಟಕ ಸದಸ್ಯ ಶಿವಕುಮಾರ್, ತಾಲೂಕು ಉಪಾಧ್ಯಕ್ಷ ಬಿ.ಸಿ ರವಿ, ತಾಲೂಕು ಘಟಕ ಆರೋಗ್ಯ ಪ್ರಧಾನ ಕಾರ್ಯದರ್ಶಿ ಡಾ.ಅಪ್ಪಾಜಿ, ಮಹೋನ್‌ಕುಮಾರ್, ತಾಲೂಕು ಘಟಕ ಮಾಧ್ಯಮ ಸಂಚಾಲಕ ಗಂಜಾಂ ಮಂಜು, ಕಾರೇಕುರ ಮಂಜುನಾಥ, ಆನಂದ್, ಕಾವೇರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಮುತ್ತುರಾಜ್, ಬಿಜಿಎಸ್ ಶಾಲಾ ಮುಖ್ಯ ಶಿಕ್ಷಕಿ ರಮ್ಯಶ್ರೀ, ಶಿಕ್ಷಕಿ ತನುಜ, ನೂರಾರು ವಿದ್ಯಾರ್ಥಿಗಳು ಇದ್ದರು.