ಮಾನವೀಯ ಮೌಲ್ಯ, ಶರಣರ ಸಂದೇಶ ಸಾರುವ ಕೆಲಸವಾಗಬೇಕು: ಸಾಲೂರು ಶ್ರೀ

| Published : Jul 15 2024, 01:48 AM IST

ಮಾನವೀಯ ಮೌಲ್ಯ, ಶರಣರ ಸಂದೇಶ ಸಾರುವ ಕೆಲಸವಾಗಬೇಕು: ಸಾಲೂರು ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಮಾನವೀಯ ಮೌಲ್ಯಗಳು ಹಾಗೂ ಶರಣರ ಸಂದೇಶಗಳನ್ನು ಹಳ್ಳಿ ಹಳ್ಳಿಗಳಲ್ಲಿ ಸಾರುವ ಕೆಲಸ ಮಾಡುವಂತಾಗಬೇಕಿದೆ. ಅಂತಹ ಕೆಲಸವನ್ನು ಜಾಗತಿಕ ಲಿಂಗಾಯಿತ ಮಹಾಸಭೆ ಮಾಡಬೇಕಿದೆ ಎಂದು ಮಲೆ ಮಹದೇಶ್ವರ ಬೆಟ್ಟದ ಸಾಲೂರು ಮಠಾಧ್ಯಕ್ಷ ಶಾಂತಮಲ್ಲಿಕಾರ್ಜುನ ಸ್ವಾಮಿಜಿ ಹೇಳಿದರು. ಕೊಳ್ಳೇಗಾಲದಲ್ಲಿ ಫ.ಗು.ಹಳಕಟ್ಟಿಯವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಫ.ಗು.ಹಳಕಟ್ಟಿ ಜಯಂತಿ । ವಿದ್ಯಾರ್ಥಿಗಳ ಅಭ್ಯುದಯಕ್ಕೆ ಕೆಲಸ ಮಾಡಿ

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಬಸವ ಜಯಂತಿ ಆಚರಿಸುವುದು, ಕೆಲ ಸಭೆ, ಸಮಾರಂಭ ಮಾಡುವುದೇ ಲಿಂಗಾಯಿತ ಸಂಘಟನೆಗಳ ಕೆಲಸವಾಗಬಾರದು, ಮಾನವೀಯ ಮೌಲ್ಯಗಳು ಹಾಗೂ ಶರಣರ ಸಂದೇಶಗಳನ್ನು ಹಳ್ಳಿ ಹಳ್ಳಿಗಳಲ್ಲಿ ಸಾರುವ ಕೆಲಸ ಮಾಡುವಂತಾಗಬೇಕಿದೆ. ಅಂತಹ ಕೆಲಸವನ್ನು ಜಾಗತಿಕ ಲಿಂಗಾಯಿತ ಮಹಾಸಭೆ ಮಾಡಬೇಕಿದೆ ಎಂದು ಮಲೆ ಮಹದೇಶ್ವರ ಬೆಟ್ಟದ ಸಾಲೂರು ಮಠಾಧ್ಯಕ್ಷ ಶಾಂತಮಲ್ಲಿಕಾರ್ಜುನ ಸ್ವಾಮಿಜಿ ಹೇಳಿದರು.

ಪಟ್ಟಣದ ಗುರುಮಲ್ಲೇಶ್ವರ ಶಾಲಾ ಆವರಣದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕು ಘಟಕ ವತಿಯಿಂದ ಫ.ಗು.ಹಳಕಟ್ಟಿಯವರ ಜಯಂತ್ಯುತ್ಸವ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ಇಡೀ ಕರ್ನಾಟಕದಲ್ಲಿ ಅತ್ಯಂತ ಕಡಿಮೆ ಜನಸಂಖ್ಯೆಯುಳ್ಳ ಸಮಾಜದ ಹಲವು ಮಂದಿ ವಿದ್ಯಾವಂತರು ಒಗ್ಗೂಡಿ ತಮ್ಮ ಸಮಾಜದ ವಿದ್ಯಾರ್ಥಿಗಳ ಅಭ್ಯುದಯದ ಜೊತೆ ಅವರಿಗೆ ಉನ್ನತ ಹುದ್ದೆ, ಭವಿಷ್ಯ ರೂಪಿಸುವಲ್ಲಿ ಕಾರ್ಯಪ್ರವೖತ್ತರಾಗುತ್ತಿದ್ದಾರೆ. ಅದೇ ನಿಟ್ಟಿನಲ್ಲಿ ಜಾಗತಿಕ ಲಿಂಗಾಯಿತ ಮಹಾಸಭಾ ಕಾರ್ಯಪ್ರವೖತ್ತರಾಗಬೇಕಿದೆ ಎಂದು ಹೇಳಿದರು.

ಕುಂದೂರು ಮಠಾಧ್ಯಕ್ಷ ಶರತ್ಚಂದ್ರ ಸ್ವಾಮೀಜಿ ಮಾತನಾಡಿ, ಜಗಜ್ಯೋತಿ ಬಸವೇಶ್ವರರು ಇಂದು ಬಹಳ ಮಂದಿಗೆ ಕಾಲಹರಣದ ಜತೆಗೆ ಹೊಟ್ಟೆಪಾಡಿನ ಸರಕಾಗಿಬಿಟ್ಟಿದ್ದಾರೆ. ಸಮಾಜದಲ್ಲಿನ ಬಿಕ್ಕಟ್ಟು ಸೖಷ್ಟಿಮಾಡುವ ನಮ್ಮ ಜಗಳಕ್ಕೆ ಸಾಧನವಾಗಿಬಿಟ್ಟಿದ್ದಾರೆ ಎಂದು ವಿಷಾದಿಸಿದರು

ಇಂದು ಜಾಗತಿಕ ಲಿಂಗಾಯಿತ ತಾಲೂಕು ಘಟಕ ಪ್ರಾರಂಭ, ಪದಾಧಿಕಾರಿಗಳ ಪದಗ್ರಹಣ ಮತ್ತು ಇವೆರಡರ ಜತೆಗೆ ವಚನ ಸಾಹಿತ್ಯದ ಪಿತಾಮಹ ಫ.ಗು. ಹಳಗಟ್ಟಿಯವರ ಜಯಂತಿ ಮಹೋತ್ಸವ ನಡೆಯುತ್ತಿರುವುದು ಉತ್ತಮ ಸಂಗತಿಯಾಗಿದೆ. ಫ.ಗು. ಹಳಕಟ್ಟಿ ಯವರು ವಚನ ಶಾಸ್ತ್ರ ಪಿತಾಮಹರು, ಅವರು ಇಲ್ಲದಿದ್ದರೆ ಬಸವಣ್ಣ ಮತ್ತು ವಚನ ಸಾಹಿತ್ಯ ಹಿಂದುಳಿಯುತ್ತಿತ್ತು. ಹೆಸರಾಂತ ಸಿಟಿ, ಪಟ್ಟಣಗಳಲ್ಲೆ ಇಂತಹ ಕೆಲಸ ಆಗುತ್ತಿದೆ, ನಾವು ಇಂದಿನ ದಿನಗಳಲ್ಲಿ ಧರ್ಮ ಸಾಹಿತ್ಯವನ್ನೆ ಮರೆಯುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಜಾಗತಿಕ ಲಿಂಗಾಯಿತ ಮಹಾಸಭೆ ತಾಲೂಕು ಅದ್ಯಕ್ಷ ಬಿಂದು ಲೋಕೇಶ್, ಪದಾಧಿಕಾರಿಗಳಾಗಿ ಮಹದೇವಸ್ವಾಮಿ, ಪಾಳ್ಯ ರಘು, ಕಜ್ಜಿಹುಂಡಿ ಮಹದೇವಪ್ರಭು, ಬಸವರಾಜು, ಶಿವಸ್ವಾಮಿ, ಶಾಂತಮಲ್ಲು, ಉಗನಿಯ ಮಹೇಶ್, ನಾಗೇಶ್, ಪ್ರಸಾದ್, ನಟೇಶ್, ಧನಂಜಯ, ಪ್ರಕಾಶ್, ಜಿನಕನಹಳ್ಳಿ ಮಲ್ಲಣ್ಣ, ಆಲಹಳ್ಳಿ ಕೂಸಪ್ಪ, ಸಿದ್ದೇಶ್, ನಾಗಸುಂದ್ರ, ಗಿರೀಶ್, ವಿಶ್ವ, ಲಿಂಗರಾಜು ಅವರು ಗಣ್ಯರು ಹಾಗೂ ಸ್ವಾಮಿಜಿಗಳ ಸಮ್ಮುಖದಲ್ಲಿ ಪದಗ್ರಹಣ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಮುಡಿಗುಂಡ ಮಠಾಧ್ಯಕ್ಷ ಶ್ರೀಕಂಠ ಸ್ವಾಮೀಜಿ, ಕಾಮಗೆರೆ ಪಟ್ಟದಮಠದ ಮಮ್ಮುಡಿ ಶಾಂತ ಮಲ್ಲಿಕಾರ್ಜುನ ಸ್ವಾಮಿ, ಗುಂಡೇಗಾಲ ಪಟ್ಟದ ಮಠ ಮಲ್ಲಿಕಾರ್ಜುನ ಸ್ವಾಮೀಜಿ, ಆಲಹಳ್ಳಿ ಪಟ್ಟದಮಠ ಶಿವಕುಮಾರ ಸ್ವಾಮೀಜಿ, ಕುಂತೂರು ಮಠ ವೀರಸಿಂಹಾಸನ ಮಠದ ಶಿವ ಪ್ರಭು ಸ್ವಾಮೀಜಿ, ಚಿಲಕವಾಡಿ ಗುರುರಾಮಯೋಗೀಶ್ವರ ಮಠದ ಇಮ್ಮಡಿ ಗುರುಲಿಂಗ ಸ್ವಾಮೀಜಿ, ಹೊಂಡರಬಾಳು ಶಂಖಿನ ಸ್ವಾಮಿ ಮಠದ ಪ್ರಸನ್ನ ಮಲ್ಲಿಕಾರ್ಜುನ ಸ್ವಾಮೀಜಿ, ಚಿಕ್ಕಿಂದುವಾಡಿ ಮಠದ ಬಾಲಷಡಕ್ಷರಿ ಸ್ವಾಮೀಜಿ, ಕೊಳ್ಳೇಗಾಲದ ದಾಸೋಹ ಮಠದ.ಶಿವಪ್ಪಸ್ವಾಮೀಜಿ. ಜಾಗತಿಕ ಲಿಂಗಾಯತ ಮಹಾಸಭೆಯ ಜಿಲ್ಲಾಧ್ಯಕ್ಷ ಜಿ.ಗುರುಸ್ವಾಮಿ, ಕಾನೂನು ಸಲಹೆಗಾರರಾದ ವಕೀಲ ವಿರುಪಾಕ್ಷ, ಕೋಶಾಧ್ಯಕ್ಷ ಶಿವಪ್ರಸಾದ, ಜಿಲ್ಲಾ ಉಪಾಧ್ಯಕ್ಷ ಮುಡಿಗುಂಡ ಸುಂದ್ರಪ್ಪ ಇದ್ದರು.