ಸಾರಾಂಶ
ಲೋಕಾಪುರ ಸಮೀಪದ ಕೇಶವ ಸಿಮೆಂಟ್ ಕಾರ್ಖಾನೆ ಬಳಿ ಬೈಕ್ ಅಪಘಾತವಾಗಿ ನೆಲಕ್ಕೆ ಬಿದ್ದು ನರಳಾಡುತ್ತಿದ್ದ ಸವಾರನನ್ನು ತಮ್ಮ ಕಾರಿನಲ್ಲಿ ಹಾಕಿಕೊಂಡು ಆಸ್ಪತ್ರೆಗೆ ಸೇರಿಸುವ ಮೂಲಕ ಕಾರ್ಮಿಕ ಸಚಿವ ಸಂತೋಷ ಲಾಡ್ ಮಾನವೀಯತೆ ಮೆರೆದಿದ್ದಾರೆ. ಸಚಿವರ ಕಾರ್ಯಕ್ಕೆ ಲೋಕಾಪುರ ಪಟ್ಟಣದ ಜನತೆ ಶ್ಲಾಘಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಲೋಕಾಪುರ
ಸಮೀಪದ ಕೇಶವ ಸಿಮೆಂಟ್ ಕಾರ್ಖಾನೆ ಬಳಿ ಬೈಕ್ ಅಪಘಾತವಾಗಿ ನೆಲಕ್ಕೆ ಬಿದ್ದು ನರಳಾಡುತ್ತಿದ್ದ ಸವಾರನನ್ನು ತಮ್ಮ ಕಾರಿನಲ್ಲಿ ಹಾಕಿಕೊಂಡು ಆಸ್ಪತ್ರೆಗೆ ಸೇರಿಸುವ ಮೂಲಕ ಕಾರ್ಮಿಕ ಸಚಿವ ಸಂತೋಷ ಲಾಡ್ ಮಾನವೀಯತೆ ಮೆರೆದಿದ್ದಾರೆ. ಸಚಿವರ ಕಾರ್ಯಕ್ಕೆ ಲೋಕಾಪುರ ಪಟ್ಟಣದ ಜನತೆ ಶ್ಲಾಘಿಸಿದ್ದಾರೆ.ರಾಮದುರ್ಗ ತಾಲೂಕಿನ ಪಂಚಗಾಂವಿ ಗ್ರಾಮದ ಸತೀಶ ವೆಂಕೆಪ್ಪ ಮಾದರ ಗಾಯಗೊಂಡ ವ್ಯಕ್ತಿ. ಸಚಿವರು ಸಾವಳಗಿಯಲ್ಲಿ ಖಾಸಗಿ ಕಾರ್ಯಕ್ರಮ ಮುಗಿಸಿಕೊಂಡು ಲೋಕಾಪುರ ಮಾರ್ಗವಾಗಿ ಧಾರವಾಡಕ್ಕೆ ತೆರಳುವಾಗ ಸಂಜೆ ೪.೩೦ರ ವೇಳೆಗೆ ಬೈಕ್ ಸ್ಕಿಡ್ ಆಗಿ ಗಾಯಗೊಂಡು ನರಳುತ್ತಿರುವುದನ್ನು ಕಂಡು ವಾಹನ ನಿಲ್ಲಿಸಿದ ಸಚಿವರು ಗಾಯಾಳುವನ್ನು ಲೋಕಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ೧೦೮ ಆ್ಯಂಬುಲೆನ್ಸ್ ಮೂಲಕ ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ರವಾನಿಸಿದರು. ಜಿಲ್ಲಾ ವೈದ್ಯಾಧಿಕಾರಿಗಳಿಗೆ ಕರೆ ಮಾಡಿ ಗಾಯಾಳು ವ್ಯಕ್ತಿಯ ಮಾಹಿತಿ ಪಡೆದರು. ವೈಯಕ್ತಿವಾಗಿ ಹಣಕಾಸಿನ ನೆರವು ನೀಡಲು ತಮ್ಮ ಆಪ್ತಸಹಾಯಕರಿಗೆ ತಿಳಿಸಿದರು. ವೈದ್ಯರಿಗೆ ಸೆಲ್ಯೂಟ್ :
ಗಾಯಗೊಂಡವನಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ತ್ವರಿತವಾಗಿ ಉಪಚರಿಸಿದ್ದನ್ನು ಕಂಡು ವೈದ್ಯರು ಹಾಗೂ ನರ್ಸ್ ಹಾಗೂ ಸಹಾಯಕರಿಗೆ ಸೆಲ್ಯೂಟ್ ಹಾಕಿ ಅಭಿನಂದಿಸಿದರು.