ದೊಡ್ಡಬಳ್ಳಾಪುರ: ಸ್ವಾರ್ಥ ತುಂಬಿರುವ ಜಗತ್ತಿನಲ್ಲಿ ಇನ್ನೊಬ್ಬರ ಕಷ್ಟಕ್ಕೆ ಮರುಗುವ ಸಂಗತಿ ಅಪರೂಪವಾಗುತ್ತಿವೆ. ಈ ದಿಸೆಯಲ್ಲಿ ಮಾನವೀಯ ನೆಲೆಗಟ್ಟಿನಲ್ಲಿ ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ ಸಮಾಜದ ಋಣವನ್ನು ತೀರಿಸಬೇಕಿದೆ ಎಂದು ಬೆಟ್ಟೇನಹಳ್ಳಿಯ ಆಚಾರ್ಯ ರಾಕುಂ ಪ್ರೌಢಶಾಲೆಯ ಆಚಾರ್ಯ ರಾಕುಂಜಿ ಮಹಾರಾಜ್ ತಿಳಿಸಿದರು

ದೊಡ್ಡಬಳ್ಳಾಪುರ: ಸ್ವಾರ್ಥ ತುಂಬಿರುವ ಜಗತ್ತಿನಲ್ಲಿ ಇನ್ನೊಬ್ಬರ ಕಷ್ಟಕ್ಕೆ ಮರುಗುವ ಸಂಗತಿ ಅಪರೂಪವಾಗುತ್ತಿವೆ. ಈ ದಿಸೆಯಲ್ಲಿ ಮಾನವೀಯ ನೆಲೆಗಟ್ಟಿನಲ್ಲಿ ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ ಸಮಾಜದ ಋಣವನ್ನು ತೀರಿಸಬೇಕಿದೆ ಎಂದು ಬೆಟ್ಟೇನಹಳ್ಳಿಯ ಆಚಾರ್ಯ ರಾಕುಂ ಪ್ರೌಢಶಾಲೆಯ ಆಚಾರ್ಯ ರಾಕುಂಜಿ ಮಹಾರಾಜ್ ತಿಳಿಸಿದರು.

ಚಿರಋಣಿ ಕನ್ನಡಾಂಬೆ ಹೋರಾಟ ಸಮಿತಿಯಿಂದ ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸದೃಢ ದೇಹ ಮತ್ತು ಸದೃಢ ಮನಸ್ಸು ನಮ್ಮ ಚಟುವಟಿಕೆಗಳಿಗೆ ಪೂರಕವಾಗಿದ್ದು, ನಾವು ಆರೋಗ್ಯಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕು. ಹಣ್ಣು ತರಕಾರಿ ಮೊದಲಾ ಪೌಷ್ಟಿಕ ಆಹಾರ ಸೇವನೆ, ನಿಯಮಿತ ಧ್ಯಾನ ಹಾಗೂ ವ್ಯಾಯಾಮಗಳನ್ನು ಮಾಡುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ನಾವು ವೈದ್ಯರ ಬಳಿ ಹೋಗುವುದಕ್ಕೂ ಮುನ್ನ ನಾವೇ ನಮ್ಮ ಆರೋಗ್ಯದ ನಿಯಂತ್ರಣ ಮಾಡುವುದು ಅವಶ್ಯವಾಗಿದೆ. ಚಿರಋಣಿ ಕನ್ನಡಾಂಬೆ ಹೋರಾಟ ಸಮಿತಿಯಿಂದ ಶಿಕ್ಷಕರನ್ನು ಅಭಿನಂದಿಸುತ್ತಿರುವುದು ಅಭಿನಂದನೀಯ ಎಂದರು.

ಚಿರಋಣಿ ಕನ್ನಡಾಂಬೆ ಹೋರಾಟ ಸಮಿತಿ ಸಂಸ್ಥಾಪಕ ರವಿ ಮಾವಿನಕುಂಟೆ ಮಾತನಾಡಿ, ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದ್ದು, ಅಂತಹ ಶಿಕ್ಷಕರನ್ನು ಗೌರವಿಸುವುದು ನಮ್ಮ ಸೌಭಾಗ್ಯ. ಶಿಕ್ಷಕರು ಸಹ ಸಮಾಜಕ್ಕೆ ಮಾದರಿಯಾಗಿರಬೇಕಿದೆ. ಗಾಂಧಿಯಂತಹ ಮಹಾತ್ಮ ಮಹನೀಯರು ಗಳಿಸಿಕೊಟ್ಟ ಸ್ವಾತಂತ್ರ್ಯ ಅರ್ಥಪೂರ್ಣವಾಗಬೇಕಿದ್ದರೆ ಇಂದಿನ ಪೀಳಿಗೆ ದೇಶ ಭಕ್ತಿ ಮೂಡಿಸಬೇಕು. ಸಮಾಜಕ್ಕೆ ನಮ್ಮ ಕೈಲಾದ ಸೇವೆ ಮಾಡಬೇಕು ಎಂದು ಸಲಹೆ ನೀಡಿದರು.

ರಾಜ್ಯ ಕಾರ್ಯಾಧ್ಯಕ್ಷ ಎಸ್.ಎಂ.ಬಸವರಾಜು ಮಾತನಾಡಿ, ಸಂಘಟನೆಗಳು ಮತ್ತು ಸಮುದಾಯ ಕೈಜೋಡಿಸಿ ದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ ವಿದೆ. ವಿಶೇಷವಾಗಿ ಶಿಕ್ಷಣದ ಕಾರ್ಯಕ್ರಮವನ್ನು ಉತ್ತೇಜಿಸಿದರೆ ದೇಶದ ಭವಿಷ್ಯ ಉಜ್ವಲವಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ವಿವಿಧ ಶಾಲಾ ಕಾಲೇಜುಗಳ ಶಿಕ್ಷಕರು, ಉಪನ್ಯಾಸಕರನ್ನು ಸನ್ಮಾನಿಸಲಾಯಿತು.

ಚಿರಋಣಿ ಕನ್ನಡಾಂಬೆ ಹೋರಾಟ ಸಮಿತಿ ತಾಲೂಕು ಅಧ್ಯಕ್ಷ ಡಿ.ಶ್ರೀರಾಮ್ ಅಧ್ಯಕ್ಷತೆ ವಹಿಸಿದ್ದರು. ಸಮಿತಿ ರಾಜ್ಯ ಅಧ್ಯಕ್ಷ ಎಸ್.ಎನ್.ಸುಬ್ರಹ್ಮಣಿ, ಸಮಾಜ ಸೇವಕ ಸುರೇಶ್ ಬಾಬು, ಡಿ.ಆರ್.ಲೋಕೇಶ್, ಚಿತ್ರನಟಿ ಲಕ್ಷ್ಮೀ, ಕನ್ನಡ ಜಾಗೃತ ಸಮಿತಿ ಜಿಲ್ಲಾ ಸದಸ್ಯೆ ನಾಗರತ್ನಮ್ಮ, ಕರವೇ ಜಿಲ್ಲಾ ಉಪಾಧ್ಯಕ್ಷ ಮಂಜುನಾಥ್ ನಾಯಕ್, ಬಿಜೆಪಿ ಮುಖಂಡ ರಾಜಶ್ರೀ ರಂಗ ಯಾದವ್, ಸಮಿತಿ ನಗರಾಧ್ಯಕ್ಷ ಕೆ. ಸುನಿಲ್ ಕುಮಾರ್, ಮುಖಂಡ ಅನಿಲ್ ರೆಡ್ಡಿ ಮತ್ತಿತರರು ಭಾಗವಹಿಸಿದ್ದರು.

4ಕೆಡಿಬಿಪಿ7-

ದೊಡ್ಡಬಳ್ಳಾಪುರದಲ್ಲಿ ಚಿರಋಣಿ ಕನ್ನಡಾಂಬೆ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆದ ಗುರುವಂದನಾ ಕಾರ್ಯಕ್ರಮಕ್ಕೆ ಬೆಟ್ಟೇನಹಳ್ಳಿಯ ಆಚಾರ್ಯ ರಾಕುಂ ಪ್ರೌಢಶಾಲೆಯ ರಾಕುಂಜಿ ಮಹಾರಾಜ್ ಚಾಲನೆ ನೀಡಿದರು.