"ನಾನು ಮೊದಲ ಬಾರಿ ಶಾಸಕರಾಗಿದ್ದ ಸಂದರ್ಭದಲ್ಲಿ ಮಾಜಿ ಸಚಿವ ದಿವಂಗತ ಎಚ್.ಎಸ್. ಮಹಾದೇವ ಪ್ರಸಾದ್ ಅವರೊಂದಿಗೆ ಜರ್ಮನಿ ಪ್ರವಾಸ ಕೈಗೊಂಡಿದ್ದೆ.
ಬಿಳಿಗಿರಿ ರಂಗನ ಬೆಟ್ಟದ ಬಂಗ್ಲೆ ಪೋಡಿನಲ್ಲಿ ಜೆಎಸ್ಎಸ್ ಮಹಿಳಾ ಪಿಯು ಕಾಲೇಜಿನ ಎನ್.ಎಸ್.ಎಸ್ ಶಿಬಿರ ಉದ್ಘಾಟನೆ ಕನ್ನಡಪ್ರಭ ವಾರ್ತೆ, ಚಾಮರಾಜನಗರ
ಮಾನವ ಧರ್ಮವೇ ಎಲ್ಲಕ್ಕಿಂತ ಮಿಗಿಲಾದದ್ದು. ಜಾತಿ, ಮತ, ಧರ್ಮದ ತಾರತಮ್ಯಗಳನ್ನು ಮರೆತು ನಾವೆಲ್ಲರೂ ಒಟ್ಟಾಗಿ ಬಾಳುವುದೇ ನಿಜವಾದ ಮಾನವೀಯತೆ ಎಂದು ಕೊಳ್ಳೆಗಾಲ ವಿಧಾನಸಭಾ ಕ್ಷೇತ್ರದ ಶಾಸಕ ಎ. ಆರ್. ಕೃಷ್ಣಮೂರ್ತಿ ತಿಳಿಸಿದರು.ಚಾಮರಾಜನಗರದ ಜೆಎಸ್ಎಸ್ ಮಹಿಳಾ ಪದವಿಪೂರ್ವ ಕಾಲೇಜಿನ ವತಿಯಿಂದ ಬಿಳಿಗಿರಿ ರಂಗನ ಬೆಟ್ಟದ ಬಂಗ್ಲೆ ಪೊಡುವಿನಲ್ಲಿ ಆಯೋಜಿಸಲಾಗಿದ್ದ 2026-27ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ತಾವು ವಿದ್ಯಾರ್ಥಿಯಾಗಿದ್ದ ದಿನಗಳಲ್ಲಿ ಎನ್.ಎಸ್.ಎಸ್ ನಂತಹ ಸಮಾಜಸೇವಾ ಮಾರ್ಗಗಳನ್ನು ಹೇಗೆ ಸದುಪಯೋಗಪಡಿಸಿಕೊಳ್ಳುತ್ತಿದ್ದೆವು ಎಂಬುದನ್ನು ನೆನಪಿಸಿಕೊಂಡ ಅವರು, "ನಾನು ಮೊದಲ ಬಾರಿ ಶಾಸಕರಾಗಿದ್ದ ಸಂದರ್ಭದಲ್ಲಿ ಮಾಜಿ ಸಚಿವ ದಿವಂಗತ ಎಚ್.ಎಸ್. ಮಹಾದೇವ ಪ್ರಸಾದ್ ಅವರೊಂದಿಗೆ ಜರ್ಮನಿ ಪ್ರವಾಸ ಕೈಗೊಂಡಿದ್ದೆ. ಅಲ್ಲಿನ ಜನರು ಸ್ವಚ್ಛತೆಗೆ ನೀಡುವ ಮಹತ್ವ ಹಾಗೂ ಅವರ ಆಹಾರ ಪದ್ಧತಿ ನಮಗೆ ದೊಡ್ಡ ಮಾದರಿ, " ಎಂದು ಹೇಳಿದರು.ಅಮೇರಿಕ ಸೇರಿ ವಿವಿಧ ದೇಶಗಳಲ್ಲಿ ನೆಲೆಸಿರುವ ವಲಸಿಗರು ತಾವು ''''''''''''''''ಏಷ್ಯಾ ಖಂಡದವರು'''''''''''''''' ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾ ಒಟ್ಟಾಗಿ ಬಾಳುತ್ತಾರೆ. ಅದೇ ರೀತಿ ನಾವೂ ಒಗ್ಗಟ್ಟಿನಿಂದ ಇರಬೇಕು ಎಂದು ಕರೆ ನೀಡಿದರು.
ಮೊದಲು ನಮ್ಮ ಸ್ವಂತ ಮನೆಯಲ್ಲಿ ತಾಯಿಗೆ ಸಹಾಯ ಮಾಡುವುದನ್ನು, ಮನೆಗೆಲಸ ಮಾಡುವುದನ್ನು ರೂಢಿಸಿಕೊಳ್ಳಬೇಕು. ಆಗ ಸಮಾಜ ಸೇವೆಯೂ ಸುಲಭವಾಗಿ ರೂಢಿಯಾಗುತ್ತದೆ ಎಂದ ಶಾಸಕರು, ತಾವು ಸಣ್ಣವರಿದ್ದಾಗಿನ ಜಂಟಿ ಕುಟುಂಬದ ವ್ಯವಸ್ಥೆಯನ್ನು ಸ್ಮರಿಸಿದರು. ನಮ್ಮ ಕುಟುಂಬದಲ್ಲಿ 25 ರಿಂದ 30 ಜನ ಒಟ್ಟಿಗೆ ವಾಸಿಸುತ್ತಿದ್ದೆವು. ನನ್ನ ತಾಯಿ-ತಂದೆ ರಾಜಕೀಯ ಜೀವನದಲ್ಲಿದ್ದರೂ, ಮನೆ ಕೆಲಸಗಳನ್ನು ಅಷ್ಟೇ ಪ್ರೀತಿಯಿಂದ ಮಾಡುತ್ತಿದ್ದರು ಎಂದು ತಮ್ಮ ಬಾಲ್ಯದ ದಿನಗಳನ್ನು ಹಂಚಿಕೊಂಡರು.ಜಿಪಂ ಮಾಜಿ ಉಪಾಧ್ಯಕ್ಷೆ ಕೇತಮ್ಮ ಮಾತನಾಡಿ, ಹೆಣ್ಣುಮಕ್ಕಳು ತಮಗೆ ಸಿಗುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ರಾಜಕೀಯ ಕ್ಷೇತ್ರದಲ್ಲೂ ಮುಂಚೂಣಿಗೆ ಬರಬೇಕು ಎಂದರು. ಕಾಡಿನ ನಿವಾಸಿಯಾದ ನನ್ನಂತಹ ಗಿರಿಜನ ಮಹಿಳೆಯನ್ನು ಗುರುತಿಸಿ ಅವಕಾಶ ನೀಡಿದ ಮುಖಂಡರನ್ನು ನಾನು ಸದಾ ಸ್ಮರಿಸುತ್ತೇನೆ. ನಾಡಿನ ಜನತೆ ಕಾಡು, ಕಾಡಿನ ಜೀವಿಗಳು ಹಾಗೂ ಅಲ್ಲಿನ ಜನರ ಹಕ್ಕುಗಳನ್ನು ಗೌರವಿಸಬೇಕು ಮತ್ತು ರಕ್ಷಿಸಬೇಕು ಎಂದು ತಿಳಿಸಿದರು.ವಿಶ್ವ ಶಾಂತಿನಿಕೇತನ ಆಶ್ರಮದ ಶ್ರೀಗಳಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳು ಆಶೀರ್ವಚನ ನೀಡಿ, ಶಿಬಿರಾರ್ಥಿಗಳು ಶಿಸ್ತು ಹಾಗೂ ಸೇವಾಮನೋಭಾವವನ್ನು ಮೈಗೂಡಿಸಿಕೊಳ್ಳುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಬೇಕು ಎಂದು ಪ್ರೇರೇಪಿಸಿದರು.
ವೇದಿಕೆಯಲ್ಲಿ ಬಂಗ್ಲೆ ಪೋಡು ಮುಖಂಡರಾದ ಬೊಮ್ಮಯ್ಯ, ಯಳಂದೂರು ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಮಾರುತಿ ಹಾಗೂ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ಉಪಸ್ಥಿತರಿದ್ದರು.ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿಗಳಾದ ಗಿರೀಶ್ ಹರವೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಭೂಮಿಕಾ ಮತ್ತು ತಂಡದವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ವಿಜಯಲಕ್ಷ್ಮಿ ಎಲ್ಲರನ್ನೂ ಸ್ವಾಗತಿಸಿದರು. ಮಿಂಚು ಕಾರ್ಯಕ್ರಮ ನಿರೂಪಿಸಿದರೆ, ಸರಸ್ವತಿ ವಂದನಾರ್ಪಣೆ ಮಾಡಿದರು.
--------------------29ಸಿಎಚ್ಎನ್16
ಬಿಳಿಗಿರಿ ರಂಗನ ಬೆಟ್ಟದ ಬಂಗ್ಲೆ ಪೊಡುವಿನಲ್ಲಿ ಆಯೋಜಿಸಲಾಗಿದ್ದ 2026-27ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವನ್ನು ಶಾಸಕ ಎ.ಆರ್. ಕೃಷ್ಣಮೂರ್ತಿ ಉದ್ಘಾಟಿಸಿದರು.