ಬದುಕಿನಲ್ಲಿ ಮಾನವೀಯತೆ ಬಹಳ ಮುಖ್ಯ: ಡಾ.ಆಶಾ ಜ್ಯೋತಿ ರೈ

| Published : Oct 22 2024, 12:00 AM IST

ಸಾರಾಂಶ

ಕೊಡಿಯಾಲ್ ಬೈಲ್ ಎಕ್ಸ್ ಪರ್ಟ್ ಕಾಲೇಜಿನಲ್ಲಿ ನವದೀಪಗಳನ್ನು ಹಚ್ಚುವ ಮೂಲಕ ಮತ್ತು ಕದಿರನ್ನು ಪೂಜಿಸುವ, ಮಡಕೆಗೆ ಹೊಸ ಅಕ್ಕಿಯನ್ನು ತುಂಬುವ, ಸಿರಿಯನ್ನು ಅರಳಿಸುವ ಬಣ್ಣದ ಕೊಡೆಗಳ ಮೆರವಣಿಗೆ ಹೀಗೆ ನವಶಕ್ತಿ ಕಾರ್ಯಕ್ರಮದ ವರ್ಣರಂಜಿತ ಉದ್ಘಾಟಿಸುವ ಶೈಲಿಯು ಎಲ್ಲರ ಗಮನ ಸೆಳೆಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಅಖಂಡ ಭಾರತದಲ್ಲಿ ಭೂಮಿ ಮೇಲೆ ಮಾನವ ಜನ್ಮ ತಾಳಿರುವುದು ನಮ್ಮೆಲ್ಲರ ಪುಣ್ಯ. ಈ ಶ್ರೇಷ್ಠವಾದ ಜನ್ಮವನ್ನು ನಾವೆಲ್ಲರೂ ಸಾರ್ಥಕ್ಯ ಮಾಡಿಕೊಳ್ಳಬೇಕು. ಆ ಮೂಲಕ ನಾವು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಆಸರೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಡಾ.ಆಶಾಜ್ಯೋತಿ ರೈ ಹೇಳಿದರು.ಕೊಡಿಯಾಲ್‌ಬೈಲ್‌ ಎಕ್ಸ್‌ಪರ್ಟ್‌ ಪದವಿ ಪೂರ್ವ ಕಾಲೇಜಿನ ಎಕ್ಸ್‌ಪೋಡಿಯಂನಲ್ಲಿ ನಡೆದ ‘ನವಶಕ್ತಿ’ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಅವರುಮಾತನಾಡಿದರು.ಮನುಷ್ಯನು ಸಂಘ ಜೀವಿಯಾಗಿದ್ದು ಸಮಾಜದೊಂದಿಗೆ ಬದುಕುವಾಗ ತನ್ನಲ್ಲಿರುವ ಋಣಾತ್ಮಕವಾದ ಗುಣಗಳನ್ನು ತೊಲಗಿಸಿ ಧನಾತ್ಮಕವಾದ ಗುಣಗಳನ್ನು ಅಳವಡಿಸಿಕೊಳ್ಳಬೇಕು. ಹೀಗೆ ನವರಾತ್ರಿ ಆಚರಣೆಯ ಮಹತ್ವವೂ ಇದೆ ಆಗಿದೆ ಎಂದರು.

ಎಕ್ಸ್‌ಪರ್ಟ್‌ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ.ನರೇಂದ್ರ ಎಲ್. ನಾಯಕ್ ಅಧ್ಯಕ್ಷತೆ ವಹಿಸಿ, ಬದುಕಿನಲ್ಲಿ ಶ್ರಮ, ಪ್ರಾಮಾಣಿಕತೆ, ಗುರು ಹಿರಿಯರನ್ನು ಗೌರವಿಸುವ ಮೂಲಕ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬದುಕನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದರು.

ಎಕ್ಸ್‌ಪರ್ಟ್‌ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ಡಾ.ಉಷಾಪ್ರಭಾ ಎನ್. ನಾಯಕ್ ಮಾತನಾಡಿ, ಪುರಾಣಗಳಲ್ಲಿ ಸ್ತ್ರೀಯ ಶಕ್ತಿ ಧೈರ್ಯ ಶ್ರೇಷ್ಠವಾಗಿ ಕಾಣುತ್ತದೆ. ಅಂತೆಯೇ ಪ್ರಸಕ್ತ ಸಮಾಜದಲ್ಲಿಯೂ ಹೆಣ್ಣಿನ ಸಾಧನೆಯನ್ನು ಎಲ್ಲ ಕ್ಷೇತ್ರಗಳಲ್ಲಿ ಅರ್ಥ ಮಾಡಿಕೊಳ್ಳವ ಕೆಲಸ ಆಗಬೇಕಿದೆ ಎಂದರು.

ಎಕ್ಸ್‌ಪರ್ಟ್‌ ಶಿಕ್ಷಣ ಸಂಸ್ಥೆಯ ಐಟಿ ನಿರ್ದೇಶಕ ಅಂಕುಶ್ ಎನ್. ನಾಯಕ್, ಸಂಸ್ಥೆಯ ಅರ್ಕಿಟೆಕ್ಟ್ ದೀಪಿಕಾ ಎ. ನಾಯಕ್ ಇದ್ದರು.

ಕಾಲೇಜು ಪ್ರಾಂಶುಪಾಲ ಪ್ರೊ.ರಾಮಚಂದ್ರ ಭಟ್ ಪ್ರಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಶ್ರೇಯಾ ಮತ್ತು ನಿತಿನ್ ನಿರೂಪಿಸಿದರು.

ನವದೀಪಗಳನ್ನು ಹಚ್ಚುವ ಮೂಲಕ ಮತ್ತು ಕದಿರನ್ನು ಪೂಜಿಸುವ, ಮಡಕೆಗೆ ಹೊಸ ಅಕ್ಕಿಯನ್ನು ತುಂಬುವ, ಸಿರಿಯನ್ನು ಅರಳಿಸುವ ಬಣ್ಣದ ಕೊಡೆಗಳ ಮೆರವಣಿಗೆ ಹೀಗೆ ನವಶಕ್ತಿ ಕಾರ್ಯಕ್ರಮದ ವರ್ಣರಂಜಿತ ಉದ್ಘಾಟಿಸುವ ಶೈಲಿಯು ಎಲ್ಲರ ಗಮನ ಸೆಳೆಯಿತು.