ಮಹಾಪುರುಷರ ಉಪದೇಶಗಳಿಂದ ಮನುಷ್ಯತ್ವ ಉಳಿದಿದೆ : ತಮ್ಮಯ್ಯ

| Published : Mar 24 2025, 12:34 AM IST

ಮಹಾಪುರುಷರ ಉಪದೇಶಗಳಿಂದ ಮನುಷ್ಯತ್ವ ಉಳಿದಿದೆ : ತಮ್ಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಮಹಾಪುರುಷರಾದ ಬಸವಣ್ಣ ಮತ್ತು ಪ್ರವಾದಿ ಮಹಮ್ಮದ್ ಪೈಗಂಬರ್‌ರವರ ಉಪದೇಶಗಳಿಂದ ಮಾನವ ಸಂಕುಲದಲ್ಲಿ ಮನುಷ್ಯತ್ವ ಶಾಶ್ವತವಾಗಿ ಉಳಿದು ಸಾತ್ವಿಕ ಜೀವನ ನಡೆಸಲು ಸಾಧ್ಯವಾಗಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.

- ರಂಜಾನ್ ಹಬ್ಬದ ಪ್ರಯುಕ್ತ ಏರ್ಪಡಿಸಿದ್ದ ಉಚಿತ ಆಹಾರ ಕಿಟ್ ವಿತರಣಾ ಕಾರ್ಯಕ್ರಮ

-

- ಹಣಕಾಸಿನಲ್ಲಿ ಶ್ರೀಮಂತರಾದರೆ ಸಾಲದು ದಾನದ ಗುಣ ಮೈಗೂಡಿಸಿಕೊಳ್ಳಬೇಕು

- ಸಂತರು, ದಾರ್ಶನಿಕರು ಹಾಗೂ ಪ್ರವಾದಿಗರ ಮೂಲ ಆಶಯವೇ ಬಡವರನ್ನು ಗೌರವಿಸುವುದು

- ಉಳ್ಳವರು ದಾನ, ಧರ್ಮದಲ್ಲಿ ತೊಡಗಿದರೆ ಭಗವಂತನ ಪ್ರೀತಿ ಗಳಿಸಲು ಸಾಧ್ಯ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಮಹಾಪುರುಷರಾದ ಬಸವಣ್ಣ ಮತ್ತು ಪ್ರವಾದಿ ಮಹಮ್ಮದ್ ಪೈಗಂಬರ್‌ರವರ ಉಪದೇಶಗಳಿಂದ ಮಾನವ ಸಂಕುಲದಲ್ಲಿ ಮನುಷ್ಯತ್ವ ಶಾಶ್ವತವಾಗಿ ಉಳಿದು ಸಾತ್ವಿಕ ಜೀವನ ನಡೆಸಲು ಸಾಧ್ಯವಾಗಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.

ನಗರದ ಷರೀಫ್‌ ಗಲ್ಲಿಯಲ್ಲಿ ಉದ್ಯಮಿ ಸಿ.ಎನ್.ಅಕ್ಮಲ್ ಅವರು ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ಭಾನುವಾರ ಏರ್ಪಡಿಸಿದ್ದ ಉಚಿತ ಆಹಾರ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಹಸಿದವರಿಗೆ ದಾನ ಮಾಡುವುದು ಹಾಗೂ ಊಟ ಉಣಬಡಿಸುವುದರಿಂದ ಪ್ರವಾದಿ ಪೈಗಂಬರ್ ಆರ್ಶೀವಾದ ಹಾಗೂ ಪ್ರೀತಿಗೆ ಪಾತ್ರರಾಗುತ್ತೇವೆ. ದೇಶದ ಹಲವಾರು ಸಂತರು, ದಾರ್ಶನಿಕರು ಹಾಗೂ ಪ್ರವಾದಿಗರ ಮೂಲ ಆಶಯವೇ ಬಡವರನ್ನು ಗೌರವಿಸುವುದು ಹಾಗೂ ಸತ್ಕರಿಸುವುದು ಎಂದು ತಿಳಿಸಿದರು.

ಹಣಕಾಸಿನಲ್ಲಿ ಶ್ರೀಮಂತರಾದರೆ ಸಾಲದು ದಾನದ ಗುಣ ಮೈಗೂಡಿಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ಉದ್ಯಮಿ ಅಕ್ಮಲ್ ದುಡಿಮೆಯ ಒಂದಿಷ್ಟು ಹಣವನ್ನು ಜಾತಿ, ಧರ್ಮ ಹೊರತಾಗಿ ಸರ್ವರಿಗೂ ಆಹಾರದ ಕಿಟ್ ಹಾಗೂ ದಾನದ ರೂಪದಲ್ಲಿ ಕೊಡುಗೆ ನೀಡುತ್ತಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.ಭಗವಂತ ಪರಮೇಶ್ವರ ಹಾಗೂ ಅಲ್ಲಾನು ಒಂದೇ, ಪೂಜಾ ಪದ್ಧತಿಗಳು ಆಯಾ ಧರ್ಮಗಳನುಸಾರ ನಡೆಯುತ್ತಿವೆ ಎಂದ ಅವರು, ಪವಿತ್ರ ಹಬ್ಬ ರಂಜಾನ್‌ನಲ್ಲಿ ಉಳ್ಳವರು ದಾನ, ಧರ್ಮದಲ್ಲಿ ತೊಡಗಿದರೆ ನೆಚ್ಚಿನ ಭಗವಂತನ ಪ್ರೀತಿ ಗಳಿಸಲು ಸಾಧ್ಯ ಎಂದರು.ಉದ್ಯಮಿ ಮತ್ತು ಕಾಂಗ್ರೆಸ್ ಮುಖಂಡ ಸಿ.ಎನ್.ಅಕ್ಮಲ್ ಮಾತನಾಡಿ, ರಂಜಾನ್ ಪ್ರಯುಕ್ತ ಆಹಾರ ಕಿಟ್ ವಿತರಣಾ ಕಾರ್ಯ ಕಳೆದ ಇಪ್ಪತ್ತು ವರ್ಷಗಳಿಂದ ನಡೆಸಿಕೊಂಡು ಬರಲಾಗಿದೆ. ಅಲ್ಲದೇ ದುಡಿಮೆ ಪಾಲನ್ನು ಸಮಾಜ ಹಾಗೂ ಸಮುದಾಯದ ಏಳಿಗೆಗೆ ಅರ್ಪಿಸಲಾಗುತ್ತಿದೆ ಎಂದು ತಿಳಿಸಿದರು.ರಂಜಾನ್ ಎಂದರೆ ಸರ್ವರನ್ನು ಪ್ರೀತಿಸುವುದು, ಗೌರವಿಸುವುದು ಎಂದರ್ಥ. ಹೀಗಾಗಿ ಷರೀಫ್‌ಗಲ್ಲಿ, ತಮಿಳು ಕಾಲೋನಿ ಸೇರಿದಂತೆ ಸುತ್ತಮುತ್ತಲಿನ ಸುಮಾರು ಸಾವಿರ ಕುಟುಂಬಗಳಿಗೆ ಹಬ್ಬದ ಪ್ರಯುಕ್ತ ಆಹಾರ ಕಿಟ್ ವಿತರಿಸಿದ್ದು ಈ ರೀತಿಯ ಕಾರ್ಯದಲ್ಲಿ ಉಳ್ಳವರು ಸಾಮಾಜಿಕ ಕಾರ್ಯದಲ್ಲಿ ತೊಡಗಲು ವೇದಿಕೆ ಕಾರ್ಯಕ್ರಮ ಆಯೋಜಿಸಿದೆ ಎಂದರು.ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅತಿಕ್‌ ಖೈಸರ್, ಅಂಜುಮಾನ್ ಇಸ್ಲಾಮಿ ಅಧ್ಯಕ್ಷ ಶಿರಾಜ್‌ಖಾನ್, ಸದಸ್ಯರಾದ ಇರ್ಷಾದ್ ಅಹ್ಮದ್, ಮಸೂದ್, ಜೀಯಾ, ನಾಸೀರ್, ಅಜ್ಮಲ್ ಹಾಜರಿದ್ದರು. 23 ಕೆಸಿಕೆಎಂ 1ಚಿಕ್ಕಮಗಳೂರಿನ ಷರೀಫ್‌ ಗಲ್ಲಿಯಲ್ಲಿ ಉದ್ಯಮಿ ಸಿ.ಎನ್.ಅಕ್ಮಲ್ ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ನೀಡಿರುವ ಆಹಾರ ಕಿಟ್‌ಗಳನ್ನು ಶಾಸಕ ಎಚ್‌.ಡಿ. ತಮ್ಮಯ್ಯ ಭಾನುವಾರ ವಿತರಿಸಿದರು. ಅತಿಕ್‌ ಖೈಸರ್‌, ಶಿರಾಜ್‌ಖಾನ್‌, ಇರ್ಷಾದ್‌ ಅಹ್ಮದ್‌ ಇದ್ದರು.

-------------------