ಎಐ ಯುಗದಲ್ಲಿ ಮಾನವೀಯತೆ ಮರೆಯಬಾರದು

| Published : Dec 27 2024, 12:46 AM IST

ಸಾರಾಂಶ

ಜಗತ್ತು ಅತಿ ವೇಗವಾಗಿ ಬೆಳೆಯತ್ತಿದ್ದು ಇಂದು ನಾವು ಆರ್ಟಿಫಿಷಿಯಲ್ ಇಂಟಲಿಜೆನ್ಸ್, ರೊಬೋಟಿಕ್ಸ್ ಹಾಗೂ ಚಾಟ್ ಜಿಪಿಟಿ ಯುಗದಲ್ಲಿದ್ದು ಇಂತಹ ಸ್ಪರ್ಧಾತ್ಮಕ, ತಾಂತ್ರಿಕ ಯುಗದಲ್ಲಿ ಸಾಗುತ್ತಿರುವ ನಾವು ಮೊದಲು ಮಾನವರಾಗುವುದನ್ನು ಕಲಿಯಬೇಕಿದೆ ಎಂದು ತುರುವೇಕೆರೆ ಬದರಿಕಾಶ್ರಮ ರಾಮಕೃಷ್ಣಮಠದ ಸ್ವಾಮಿ ಮಂಗಳನಾಥನಂದ ಮಹಾರಾಜ್ ತಿಳಿಸಿದರು

ಕನ್ನಡಪ್ರಭ ವಾರ್ತೆ ತಿಪಟೂರು

ಜಗತ್ತು ಅತಿ ವೇಗವಾಗಿ ಬೆಳೆಯತ್ತಿದ್ದು ಇಂದು ನಾವು ಆರ್ಟಿಫಿಷಿಯಲ್ ಇಂಟಲಿಜೆನ್ಸ್, ರೊಬೋಟಿಕ್ಸ್ ಹಾಗೂ ಚಾಟ್ ಜಿಪಿಟಿ ಯುಗದಲ್ಲಿದ್ದು ಇಂತಹ ಸ್ಪರ್ಧಾತ್ಮಕ, ತಾಂತ್ರಿಕ ಯುಗದಲ್ಲಿ ಸಾಗುತ್ತಿರುವ ನಾವು ಮೊದಲು ಮಾನವರಾಗುವುದನ್ನು ಕಲಿಯಬೇಕಿದೆ ಎಂದು ತುರುವೇಕೆರೆ ಬದರಿಕಾಶ್ರಮ ರಾಮಕೃಷ್ಣಮಠದ ಸ್ವಾಮಿ ಮಂಗಳನಾಥನಂದ ಮಹಾರಾಜ್ ತಿಳಿಸಿದರು.

ನಗರದ ಕಲ್ಪತರು ಕಾಲೇಜು ಕ್ರೀಡಾಂಗಣದಲ್ಲಿ ನಡೆದ ಕಲ್ಪತರು ಸೆಂಟ್ರಲ್ ಶಾಲೆಯ ವಾರ್ಷಿಕ ಸಮಾರಂಭ ಕಲ್ಪೋತ್ಸವ ಉದ್ಘಾಟಿಸಿ ಮಾತನಾಡಿದ ಅವರು ನಾವು ಎಷ್ಟೇ ಅಭಿವೃದ್ಧಿ ಪಥದತ್ತ ಸಾಗುತ್ತಿದ್ದರೂ ಮಾನವೀಯತೆ ಬಿಡಬಾರದು. ಪ್ರಪಂಚದಲ್ಲಿ ಮಾನವೀಯತೆಗಿಂತಲೂ ದೊಡ್ಡದು ಏನೂ ಇಲ್ಲ. ಎಲ್ಲಾ ಸಾಧನೆಗಳೂ ಅದರ ನಂತರ ಬರುತ್ತದೆ ಎಂದರು.ನಾನು ಸಾವಿರಾರು ಶಾಲೆಗಳಿಗೆ ಭೇಟಿ ನೀಡಿ ಅಲ್ಲಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದೇನೆ. ಎಲ್ಲ ಶಾಲೆಗಳಲ್ಲಿ ಅಧಿಕ ಅಂಕ, ರ‍್ಯಾಂಕ್ ಬಂದಿರುವವರನ್ನು, ಕ್ರೀಡೆಗಳಲ್ಲಿ ಸಾಧನೆ ಮಾಡಿದವರನ್ನು, ಸಾಂಸ್ಕೃತಿಕ ಪ್ರದರ್ಶನ ನೀಡಿದವರನ್ನು ಬಹುಮಾನ ನೀಡಿ ಗೌರವಿಸುತ್ತೇವೆ. ಎಂದರು.ಶಾಸಕ ಕೆ. ಷಡಕ್ಷರಿ ಮಾತನಾಡಿ ಕಲ್ಪತರು ವಿದ್ಯಾಸಂಸ್ಥೆಗೆ ೬೦ ವರ್ಷಗಳ ಇತಿಹಾಸವಿದೆ. ದಾನ, ಧರ್ಮದಿಂದ ಪ್ರಾರಂಭವಾದ ಈ ಸಂಸ್ಥೆ ಇಂದು ನರ್ಸರಿಯಿಂದ ಇಂಜಿನಿಯರಿಂಗ್‌ವರೆಗೂ ವಿಸ್ತಾರಗೊಂಡಿದೆ ಎಂದು ತಿಳಿಸಿದರು. ಸಮಾರಂಭದಲ್ಲಿ ಉಪವಿಭಾಗಾಧಿಕಾರಿ ಸಪ್ತಶ್ರೀ, ತಹಸೀಲ್ದಾರ್ ಪವನ್‌ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಯ್ಯ, ಕೆವಿಎಸ್ ಅಧ್ಯಕ್ಷ ತಿಪ್ಪೇರುದ್ರಪ್ಪ, ಕೆವಿಎಸ್ ಉಪಾಧ್ಯಕ್ಷರಾದ ಉಮೇಶ್, ಬಾಗೇಪಲ್ಲಿ ನಟರಾಜು, ಟಿ.ಎಸ್. ಬಸವರಾಜು, ಜಿ.ಪಿ. ದೀಪಕ್, ಕಾರ್ಯದರ್ಶಿಗಳಾದ ಎಂ.ಆರ್. ಸಂಗಮೇಶ್, ಟಿ.ಯು. ಜಗದೀಶಮೂರ್ತಿ, ಜಿ.ಎಸ್. ಉಮಾಶಂಕರ್, ಎಚ್.ಜಿ. ಸುಧಾಕರ್, ಖಜಾಂಚಿ ಟಿ.ಎಸ್. ಶಿವಪ್ರಸಾದ್ ಪ್ರಾಂಶುಪಾಲೆ ದೇವಿಕ.ಬಿ.ಸ್ವಾಮಿ ಮತ್ತಿತರರಿದ್ದರು. ನಂತರ ಮಕ್ಕಳಿಂದ ವಿವಿಧ ದೇಶಗಳ ಸಂಸ್ಕೃತಿಯ ಪರಂಪರೆಯನ್ನೊಳಗೊಂಡ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

----------------ಕೋಟ್‌..

ತಿಪಟೂರಿಗೆ ಮೆಡಿಕಲ್ ಕಾಲೇಜು ತರಲು ಸರಕಾರದ ಮಟ್ಟದಲ್ಲಿ ಪ್ರಯತ್ನ ಪಡುತ್ತಿದ್ದೇನೆ. ಶೀಘ್ರದಲ್ಲಿಯೇ ತಿಪಟೂರಿಗೆ ೩೦೦ ಕೋಟಿ ವೆಚ್ಚದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಕೆಲಸ ಪ್ರಾರಂಭವಾಗಲಿದೆ. ನಾನು ಯಾವಾಗಲೂ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚು ಒತ್ತು ನೀಡುತ್ತೇನೆ.

- ಕೆ.ಷಡಕ್ಷರಿ, ಶಾಸಕರು.