ಕ್ಯಾಮೇನಹಳ್ಳಿ ಆಂಜನೇಯಸ್ವಾಮಿ ದೇಗುಲದ ಹುಂಡಿ ಎಣಿಕೆ: 7 ಲಕ್ಷ ಹಣ ಸಂಗ್ರಹ

| Published : Jan 12 2024, 01:45 AM IST

ಕ್ಯಾಮೇನಹಳ್ಳಿ ಆಂಜನೇಯಸ್ವಾಮಿ ದೇಗುಲದ ಹುಂಡಿ ಎಣಿಕೆ: 7 ಲಕ್ಷ ಹಣ ಸಂಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಕ್ಯಾಮೇನಹಳ್ಳಿ ಆಂಜನೇಯಸ್ವಾಮಿ ದೇಗುಲದ ಹುಂಡಿ ಎಣಿಕೆ.

ಕನ್ನಡಪ್ರಭ ವಾರ್ತೆ ಹೊಳವನಹಳ್ಳಿ

ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿಯ ಇತಿಹಾಸ ಪ್ರಸಿದ್ಧ ಪುಣ್ಯ ಕ್ಷೇತ್ರವಾದ ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿ ದೇವಸ್ಥಾನದ ಹುಂಡಿಯ ಹಣವನ್ನ ಉಪ ತಹಸೀಲ್ದಾರ್ ಜಯಪ್ರಕಾಶ್ ನೇತೃತ್ವದಲ್ಲಿ ಎಣಿಸಲಾಯಿತ್ತು.

ವರ್ಷಕ್ಕೆ ಎರಡು ಬಾರಿ ಹುಂಡಿಯಲ್ಲಿರುವ ಹಣವನ್ನ ತೆಗೆಯಲಾಗುತ್ತದೆ. ಪ್ರತಿವರ್ಷ ದನಗಳ ಜಾತ್ರೆ ನಡೆಯುವ ಒಂದು ತಿಂಗಳ ಮುಂಚಿತವಾಗಿ ಕ್ಯಾಮೇನಹಳ್ಳಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿರುವ ಹುಂಡಿಯನ್ನ ಹೊಡೆದು ದೇವಸ್ಥಾನದ ಖಾತೆಗೆ ಹಾಕಲಾಗುತ್ತದೆ. ಈ ಬಾರಿ ದೇವಸ್ಥಾನದ ಹುಂಡಿಯಲ್ಲಿ ಸುಮಾರು ೭ ಲಕ್ಷ ರು. ಹಣ ಸಂಗ್ರಹವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹುಣಸೆ ಮರ ಹಣ್ಣಿನ ಹರಾಜು: ಕ್ಯಾಮೇನಹಳ್ಳಿ ಆಂಜನೇಯಸ್ವಾಮಿ ದೇವಸ್ಥಾನದ ಸುತ್ತಮುತ್ತ ಸುಮಾರು ೨೫ ಕ್ಕೂ ಹೆಚ್ಚು ಹುಣಸೆ ಮರಗಳು ಇದ್ದು, ಪ್ರತಿವರ್ಷದಂತೆ ಈ ವರ್ಷವು ಸಹ ಹುಣಸೆ ಮರಗಳ ಹಣ್ಣನ್ನ ಹರಾಜು ಮಾಡಲಾಗಿದೆ. ಹರಾಜಿನಲ್ಲಿ ೭೬ ಸಾವಿರಕ್ಕೆ ಹರಾಜು ಮಾಡಲಾಗಿದೆ ಎಂದು ತಿಳಿದುಬಂದಿದೆ.

ದನಗಳ ಜಾತ್ರೆ ಹರಾಜು: ೨೦೨೪ ರ ದನಗಳ ಜಾತ್ರೆ, ವಾಹನದ ಸುಂಕ, ಅಂಗಡಿಗಳ ಸುಂಕ ಹಾಗೂ ಬ್ರಹ್ಮರಥೋತ್ಸವದ ದಿನದೊಂದು ಹಣ್ಣುಕಾಯಿಯ ಸುಂಕದ ಹರಾಜು ಪ್ರಕ್ರಿಯೆ ನಡೆದಿದೆ. ದನಗಳಿಗೆ ಸುಂಕ ಹಾಗೂ ವಾಹನದ ಸುಂಕವನ್ನ 1.30 ಲಕ್ಷ ರು ವರೆಗೂ. ಹರಾಜು ನಡೆದಿದೆ. ದೇವಸ್ಥಾನದ ಸುತ್ತಮುತ್ತ ಇರುವ ಅಂಗಡಿಗಳ ಸಂಕವನ್ನ ೧.೫೨ ಲಕ್ಷ ರು. ಹರಾಜು ನೆಡೆದಿದೆ. ಬ್ರಹ್ಮರಥೋತ್ಸವದ ದಿನದೊಂದು ಹಣ್ಣುಕಾಯಿ ಸುಂಕವನ್ನ ೧೫ ಸಾವಿರಕ್ಕೆ ಹರಾಜು ನಡೆದಿದೆ ಎಂದು ತಿಳಿದುಬಂದಿದೆ.

ಹರಾಜು ಪ್ರಕ್ರಿಯೆಯಲ್ಲಿ ಗ್ರೇಟ್ ೨ ತಹಸೀಲ್ದಾರ್ ನರಸಿಂಹಮೂರ್ತಿ, ಕಂದಾಯ ಅಧಿಕಾರಿ ಜಯಪ್ರಕಾಶ್, ಸತ್ಯನಾರಾಯಣ್ ರಾವ್ ಮುಖಂಡರಾದ ಜಯರಾಮ್, ರಾಮಕೃಷ್ಣಯ್ಯ, ಸುಬಾನ್, ಬಾಲರಾಜು, ಕೇಶವಮೂರ್ತಿ, ಕಾಳಿಚರಣ್, ಜಯರಾಜ್, ಶಶಿಧರ್, ಚಂದ್ರಣ್ಣ, ಹನುಮಂತರಾಜು, ಉಮಾಶಂಕರ್, ಸಣ್ಣರಂಗಯ್ಯ, ಮಂಜಣ್ಣ, ರಂಗರಾಜು, ಶ್ರೀನಿವಾಸ್ ಸೇರಿದಂತೆ ಸಾರ್ವಜನಿಕರು ಹಾಜರಿದ್ದರು.