ವೀರಶೈವರನ್ನು ಅಲ್ಪಸಂಖ್ಯಾತರನ್ನಾಗಿಸುವ ಹುನ್ನಾರ

| Published : Oct 16 2023, 01:45 AM IST

ವೀರಶೈವರನ್ನು ಅಲ್ಪಸಂಖ್ಯಾತರನ್ನಾಗಿಸುವ ಹುನ್ನಾರ
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ರಾಜ್ಯದಲ್ಲಿ ಹೆಚ್ಚಿನ ಜನ ಸಂಖ್ಯೆ ಹೊಂದಿರುವ ವೀರಶೈವ ಸಮಾಜದವರನ್ನು ಜಾತಿ ಗಣತಿ ಹೆಸರಿನಲ್ಲಿ ಅಲ್ಪಸಂಖ್ಯಾತರನ್ನಾಗಿ ಮಾಡುವ ಹುನ್ನಾರ ನಡೆಯುತ್ತಿದೆ ಎಂದು ಬೇವೂರು ಮಠದ ಶ್ರೀ ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು.
ರಾಮನಗರ: ರಾಜ್ಯದಲ್ಲಿ ಹೆಚ್ಚಿನ ಜನ ಸಂಖ್ಯೆ ಹೊಂದಿರುವ ವೀರಶೈವ ಸಮಾಜದವರನ್ನು ಜಾತಿ ಗಣತಿ ಹೆಸರಿನಲ್ಲಿ ಅಲ್ಪಸಂಖ್ಯಾತರನ್ನಾಗಿ ಮಾಡುವ ಹುನ್ನಾರ ನಡೆಯುತ್ತಿದೆ ಎಂದು ಬೇವೂರು ಮಠದ ಶ್ರೀ ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು. ನಗರದ ಶ್ರೀ ಬಸವೇಶ್ವರ ಸ್ವಾಮಿ ಪ್ರಾರ್ಥನಾ ಮಂದಿರದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಮತ್ತು ತಾಲೂಕು ಘಟಕ ವತಿಯಿಂದ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿದ ಅವರು, ವೀರಶೈವ ಸಮಾಜ ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದೆ ಅಂತ ಎಲ್ಲರು ಹೇಳುತ್ತಾರೆ. ಆದರೆ, ಜಾತಿಗಣತಿ ಶುರುವಾದರೆ ಯಾರ್ಯಾರು ಏನೇನು ಬರೆಸುತ್ತಾರೆಯೊ ಗೊತ್ತಿಲ್ಲ. ಆದರೆ, ವೀರಶೈವರನ್ನು ಅಲ್ಪಸಂಖ್ಯಾತರನ್ನಾಗಿ ಮಾಡುವ ಪ್ರಯತ್ನಗಳು ನಡೆಯುತ್ತವೆ ಎಂದು ಹೇಳಿದರು. 3 - 4 ಸಾವಿರ ಇದ್ದ ವೀರಶೈವ ಮಠಗಳ ಸಂಖ್ಯೆ 800ಕ್ಕೆ ಸೀಮಿತವಾಗಿವೆ. ಇದಕ್ಕೆ ಪ್ರತಿಯೊಂದು ಮಠದ ಶ್ರೀಗಳ ವಿಭಿನ್ನವಾದ ಚಿಂತನೆ, ವ್ಯವಸ್ಥೆಯೇ ಕಾರಣ. ಇದರ ಜೊತೆಗೆ ಸಮಾಜದಲ್ಲಿ ಐಕ್ಯತೆ ಮತ್ತು ಒಗ್ಗಟ್ಟು ಇಲ್ಲದಿರುವುದರಿಂದ ವೀರಶೈವ ಧರ್ಮ ಕ್ಷೀಣಿಸುತ್ತಿದೆ. ಎಲ್ಲಿವರೆಗೆ ಸ್ವಾಮೀಜಿಗಳು, ರಾಜಕಾರಣಿಗಳು ಹಾಗೂ ಸಂಘ ಸಂಸ್ಥೆಗಳನ್ನು ಕ್ರೂಢೀಕರಿಸಿ ಒಮ್ಮತ ಮೂಡಿದಾಗ ಮಾತ್ರ ವೀರಶೈವ ಧರ್ಮ ಮೇಲೇಳಲು ಸಾಧ್ಯ ಎಂದು ಹೇಳಿದರು. ಸಮಾಜದ ಬಗೆಗೆ ತಿಳಿವಳಿಕೆ ಕಡಿಮೆಯಾಗುತ್ತಿರುವುದು ಹಾಗೂ ಆಚರಣೆಗಳಿಂದ ವಿಮುಖರಾಗುತ್ತಿರುವುದು ಕೂಡ ಧರ್ಮ ಶೂನ್ಯಕ್ಕೆ ಹೋಗಲು ಕಾರಣವಾಗಿದೆ. ಮಕ್ಕಳಿಗೆ ಓದಿನ ಜೊತೆಗೆ ಸಂಸ್ಕಾರ ಕಲಿಸುವ ಕೆಲಸ ಆಗಬೇಕು. ಆಗ ಮಾತ್ರ ಧರ್ಮ ವ್ಯವಸ್ಥೆ ಸರಿಯಾಗಲು ಸಾಧ್ಯ. ಅಂತಹ ಚಿಂತನೆ ಇಟ್ಟುಕೊಂಡು ಮುನ್ನಡೆದಾಗ ಮಾತ್ರ ಸಂಸ್ಕಾರಯುತ ಕುಟುಂಬಗಳಾಗಲು ಸಾಧ್ಯ ಎಂದು ಶ್ರೀಗಳು ತಿಳಿಸಿದರು. ಸಂಘಟನೆ ಅಂದರೆ ಶಕ್ತಿ. ಸಂಘಟನೆಯಲ್ಲಿ ಬಲ ಇದ್ದರೆ ಅಭಿವೃದ್ಧಿ ಹೊಂದಬಹುದು. ನಮ್ಮ ಸಮಾಜವನ್ನು ಮಾತ್ರ ಅಭಿವೃದ್ಧಿಯತ್ತ ಕೊಂಡೊಯ್ದರೆ ಸಾಲದು. ಇತರೆ ಸಮಾಜದವರನ್ನು ಜೊತೆಯಲ್ಲಿ ಅಭಿವೃದ್ಧಿಯತ್ತ ಕೊಂಡೊಯ್ಯಬೇಕು. ಆಗ ಮಾತ್ರ ಬಸವಣ್ಣರವರು ಕಂಡಿದಂತಹ ಸಮಸಮಾಜದ ನಿರ್ಮಾಣ ಸಾಧ್ಯವಾಗಲಿದೆ ಎಂದು ಹೇಳಿದರು. ಸಮಾಜದ ಬೆಳವಣಿಗೆಗೆ ಶ್ರಮಿಸಿ : ಸಂಸ್ಕೃತ ವಿದ್ವಾಂಸ ಚಂದ್ರಶೇಖರ್ ಮಾತನಾಡಿ, ಪ್ರಸ್ತುತ ವ್ಯವಸ್ಥೆಯಲ್ಲಿ ಜಾತಿ ಸಮಾಜಗಳ ಅಗತ್ಯ ಇದಿಯಾ ಎಂಬ ಪ್ರಶ್ನೆಸಹಜವಾಗಿಯೇ ಕಾಡುತ್ತಿದೆ. ಕೆಲವರು ಜಾತ್ಯತೀತದ ಬಗ್ಗೆ ಮಾತನಾಡುತ್ತಾರೆ. ಆದರೆ, ಅವರೆಲ್ಲರ ನಡೆ ನುಡಿಗೆ ಸಂಬಂಧವೇ ಇಲ್ಲ. ಮನುಷ್ಯನ ಹುಟ್ಟಿನಿಂದ ಸಾವಿನವರೆಗೂ ಜಾತಿ ವ್ಯವಸ್ಥೆಯಲ್ಲಿಯೇ ಬದುಕುವ ವಾತಾವರಣ ನಿರ್ಮಾಣ ವಾಗಿದೆ ಎಂದು ಬೇಸರ ವ್ಯಕ್ತ ಪಡಿಸಿದರು. ಶಾಲೆ ಪ್ರವೇಶಾತಿಯಿಂದ ಹಿಡಿದು ಉದ್ಯೋಗ, ಸಚಿವ ಸ್ಥಾನ, ಗೌರವ ಸನ್ಮಾನಕ್ಕೂ ಜಾತಿಯೇ ಮಾನದಂಡವಾಗಿದೆ. ಹೀಗಾಗಿ ಜಾತ್ಯಾತೀತತೆ ಎಲ್ಲಿ ಉಳಿದಿದೆ ಪ್ರಶ್ನೆ ಯೂ ಎದುರಾಗುತ್ತದೆ. ಆದರೆ, ವೀರಶೈವರು ಮಾತ್ರ ಜಾತ್ಯಾತೀತರಾಗಿ ಉಳಿದಿದ್ದಾರೆ. ಆದ್ದರಿಂದ ಮಕ್ಕಳು ಸಮಾಜದ ಮೇಲೆ ಗೌರವ ಪ್ರೀತಿ ಇಟ್ಟುಕೊಳ್ಳಬೇಕು. ಸಮಾಜದ ಕಲ್ಯಾಣ ಕ್ಕಾಗಿ ನಾವೇನು ಮಾಡಬಹುದು ಎಂಬುದನ್ನು ಆಲೋಚನೆ ಮಾಡಬೇಕು. ನೀವು ಬೆಳೆದು ಸರ್ವ ಸಮಾಜದ ಬೆಳವಣಿಗೆಗೆ ಶ್ರಮಿಸಿ ಕೊಡುಗೆ ನೀಡಬೇಕು ಎಂದು ಕಿವಿಮಾತು ಹೇಳಿದರು. ಈಗ ಪ್ರತಿ ಮಠಗಳಲ್ಲಿ ತ್ರಿವಿಧ ದಾಸೋಹ ಶುರುವಾಗಿದೆ. ಆದರೆ, ಬೇರೆ ಮಠಗಳಿಗೆ ಹೋಲಿಸಿದರೆ ವೀರಶೈವ ಮಠಗಳಲ್ಲಿ ಜಾತಿಮತ ಬೇಧ ಇಲ್ಲ. ಜಗತ್ತಿಗೆ ಶ್ರೇಷ್ಠವಾದ ಧರ್ಮ ನೀಡಿದ್ದು ವೀರಶೈವ ಸಮಾಜ. ವೀರಶೈವ ಧರ್ಮ ತತ್ವ ಸಿದ್ದಾಂತಗಳನ್ನು ಬೆಳೆಸಲು ಪೈಪೋಟಿ ಇರಬೇಕು. ಅದಕ್ಕಾಗಿ ಸಮಾಜದ ಸಂಘಟನೆ ಅಗತ್ಯವಿದೆ ಎಂದು ಚಂದ್ರಶೇಖರ್ ತಿಳಿಸಿದರು. ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚುಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಶಿವಗಂಗೆಯ ಶ್ರೀ ಮೇಲಣಗವಿಮಠದ ಶ್ರೀ ಮಲಯ ಶಾಂತಮುನಿ, ಶಿವಾಚಾರ್ಯ ಸ್ವಾಮೀಜಿ, ನಗರಸಭೆ ಅಧ್ಯಕ್ಷ ವಿಜಯಕುಮಾರಿ, ಬಿಡದಿ ಪುರಸಭೆ ಸದಸ್ಯ ಬಿ.ಜಿ.ಲೋಹಿತ್ ಕುಮಾರ್ , ಮಹಾಸಭಾ ಜಿಲ್ಲಾ ಕೋಶಾಧ್ಯಕ್ಷ ಸರಸ್ವತಮ್ಮ, ಶಿವರುದ್ರಪ್ಪ, ಮಾದಪುರ ರಾಜಶೇಖರ್ , ವಿಭೂತಿಕೆರೆ ಶಿವಲಿಂಗಪ್ರಸಾದ್ , ಅಂಜನಾಪುರ ಕಿರಣ್ , ಚಂದ್ರಯ್ಯ, ಜಗದೀಶ್‌, ಅನಿಲ್‌ , ಮಂಜುನಾಥ್ , ಶಿವಸ್ವಾಮಿ, ಶಾಂತಪ್ಪ, ರೇವಣ್ಣ ಅಂಜನಾಪುರ, ಮಹದೇವಶಾಸ್ತ್ರಿ, ರೈತಸಂಘದ ಉಮೇಶ್‌ ಮತ್ತಿತರರು ಉಪಸ್ಥಿತರಿದ್ದರು. ಬಾಕ್ಸ್‌.......... ಮಹಿಳಾ-ಯುವ ಘಟಕಗಳ ರಚನೆ ಮಹಾಸಭಾ ಜಿಲ್ಲಾಧ್ಯಕ್ಷ ರುದ್ರೇಶ್‌ ಮಾತನಾಡಿ, ಹಿಂದಿನ ದಿನಗಳಲ್ಲಿ ಶಿಕ್ಷಣ ಪಡೆಯುವುದು ಕಷ್ಟವಾಗಿತ್ತು. ಆದರೀಗ ಶಿಕ್ಷಣ ಕಡ್ಡಾಯವಾದ ಮೇಲೆ ಪ್ರತಿಯೊಂದು ಮಗುವೂ ಅಕ್ಷರ ಜ್ಞಾನ ಪಡೆಯಲು ಅನುಕೂಲವಾಗಿದೆ. ಅಲ್ಲದೆ, ವಿದ್ಯಾವಂತರಾಗಿ ಕೋಟಿಂಗ್‌ ಸೆಂಟರ್‌ ಗಳಲ್ಲಿ ತರಬೇತಿ ಪಡೆದು ಐಎಎಸ್‌ ,ಐಪಿಎಸ್‌ ನಂತಹ ಉನ್ನತ ಹುದ್ದೆಗಳನ್ನು ಅಲಂಕರಿಸಲು ವಿಫುಲ ಅವಕಾಶಗಳಿವೆ ಎಂದು ತಿಳಿಸಿದರು. ಮಹಾಸಭಾದಲ್ಲಿ ಮಹಿಳಾ ಮತ್ತು ಯುವ ಘಟಕಗಳನ್ನು ರಚನೆ ಮಾಡುವ ಆಲೋಚನೆ ಮಾಡಿದ್ದೇವೆ. ಇದರ ಉದ್ದೇಶ ಮಹಿಳೆಯರು ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಹಾಗೂ ಯುವಕರು ಮುಂಚೂಣಿಗೆ ಬಂದು ಸಮಾಜದ ತೇರು ಎಳೆದುಕೊಂಡು ಹೋಗಬೇಕು ಎಂಬುದಾಗಿದೆ. ಅಲ್ಲದೆ, ಸಮಾಜದ ಉನ್ನತಿಗಾಗಿ ಕಾಯ ವಾಚ ಮನಸ ಶ್ರಮಿಸುತ್ತಿರುವ ವ್ಯಕ್ತಿ ಗಳನ್ನು ಗುರುತಿಸಿ ಗೌರವಿಸುವ ಕೆಲಸವೂ ಆಗಬೇಕಿದೆ ಎಂದು ರುದ್ರೇಶ್‌ ತಿಳಿಸಿದರು. 15ಕೆಆರ್ ಎಂಎನ್‌ 2.ಜೆಪಿಜಿ ರಾಮನಗರದ ಶ್ರೀ ಬಸವೇಶ್ವರ ಸ್ವಾಮಿ ಪ್ರಾರ್ಥನಾ ಮಂದಿರದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಬೇವೂರು ಮಠದ ಶ್ರೀ ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು.