ಸಾರಾಂಶ
ಹುಣಸಗಿ ಪಟ್ಟಣ ಪಂಚಾಯ್ತಿಯ 16 ವಾರ್ಡ್‌ಗಳಿಗೆ ಡಿ.27ರಂದು ಸಾರ್ವತ್ರಿಕ ಚುನಾವಣೆ ನಡೆದಿದ್ದು, ಇಂದು ಮತ ಎಣಿಕೆ ಕಾರ್ಯ ನಡೆಯಲಿದೆ.
ಕನ್ನಡಪ್ರಭ ವಾರ್ತೆ ಹುಣಸಗಿ
ಡಿ.27ರಂದು ನಡೆದ ಪಟ್ಟಣ ಪಂಚಾಯ್ತಿ 16 ವಾರ್ಡ್ ಗಳಿಗೆ ನಡೆದ ಚುನಾವಣೆಗೆ ಡಿ.30 ರಂದು ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.ಪಟ್ಟಣ ಪಂಚಾಯ್ತಿ ಚುನಾವಣೆ ಮುಗಿದು ಸದ್ಯ ಮತಪೆಟ್ಟಿಗೆಗಳನ್ನು ಪಟ್ಟಣದ ಸರಕಾರಿ ಪದವಿ ಮಹಾವಿದ್ಯಾಲಯದಲ್ಲಿ ಭದ್ರತಾ ಕೋಣೆಯಲ್ಲಿ ಇರಿಸಲಾಗಿದ್ದು, ಸೂಕ್ತ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಒಂದು ಕೋಣೆಯಲ್ಲಿ ಹಿಂದಿನ ಕಿಡಕಿ ಹಾಗೂ ಬಾಗಿಲು ಸಂಪೂರ್ಣ ಮುಚ್ಚಿ ಸೂಕ್ತ ಭದ್ರತೆಯೊಂದಿಗೆ ಮತಪೆಟ್ಟಿಗೆಗಳನ್ನು ಕಾಯ್ದುಕೊಳ್ಳುವುದು ನಡೆದಿದೆ.
ಡಿಆರ್ ಪೊಲೀಸ್ ಎಹೆಚ್‌ಸಿ-1, ಎರಡು ಎಪಿಸಿ-2ಹಾಗೂ ಎಎಸ್‌ಐ-1, ಸಿಹೆಚ್‌ಸಿ-1, ಸಿಪಿಸಿ-1 ಸಿಬ್ಬಂದಿಗಳನ್ನು ನೇಮಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಡಿ.30ರಂದು ಶನಿವಾರ ಮಹಾವಿದ್ಯಾಲಯದಲ್ಲಿಯೇ ಮತ ಎಣಿಕೆ ಕಾರ್ಯ 8 ಗಂಟೆಗೆ ಪ್ರಾರಂಭವಾಗಲಿದೆ. ಎರಡು ಟೇಬಲ್ ಮಾಡಿದ್ದು, ಮೇಲ್ವಿಚಾರಕರು ಒಬ್ಬರು ಹಾಗೂ ಸಹಾಯಕರೊಬ್ಬರು, ಸಹಾಯಕ ಎಣಿಕೆಯನ್ನು ಪ್ರಾಥಮಿಕ ಶಿಕ್ಷಕರು, ಮೇಲ್ವಿಚಾರಕರನ್ನು ಕೆಬಿಜೆಎನ್‌ಎಲ್ ಇಂಜಿನಿಯರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಚುನಾವಣಾ ಅಧಿಕಾರಿ ಜಗದೀಶ ಅವರು ತಿಳಿಸಿದ್ದಾರೆ.
ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸುವ ಮತಪೆಟ್ಟಿಗೆಗಳು ಭದ್ರವಾಗಿದ್ದರೂ ಗೆಲುವು ಯಾರಿಗೆ ಎಂಬ ಲೆಕ್ಕಾಚಾರ ಒಳಗೊಳಗೆ ಶುರುಗೊಂಡಿವೆ. ಹೀಗಾಗಿ ಮತದಾರರ ತೀರ್ಪು ಮಣಿ ಯಾರಿಕೆ ಹಾಕಿದ್ದಾರೆಂಬದು ಡಿ.30ರಂದು ಹೊರಬೀಳುವ ಫಲಿತಾಂಶದಿಂದ ಗೊತ್ತಾಗಲಿದೆ.;Resize=(128,128))
;Resize=(128,128))
;Resize=(128,128))