ಸತಿ-ಪತಿ ಅನ್ಯೋನ್ಯವಾಗಿ ಜೀವನ ಸಾಗಿಸಲಿ: ಸಚಿವ ಲಾಡ್‌

| Published : Apr 21 2025, 12:56 AM IST

ಸಾರಾಂಶ

ದಂಪತಿಗಳು ಜೀವನದ ಏರಿಳಿತಗಳಲ್ಲಿ ಸದಾಕೈಜೋಡಿಸಿ ನಡೆದರೆ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಮಾಜಿ ಶಾಸಕ ದಿ. ಗೋವಿಂದಪ್ಪ ಜುಟ್ಟಲ್ ಈ ಹಿಂದೆ ಸಾಮೂಹಿಕ ವಿವಾಹ ಆಯೋಜಿಸುತ್ತಿದ್ದರು. ಅದರಂತೆ ಅವರ ಮಗನಾದ ಚಂದ್ರಶೇಖರ ಜುಟ್ಟಲ್ ಸಹ 23 ವರ್ಷಗಳಿಂದ ಈ ಕಾರ್ಯ ಮಾಡಿಕೊಂಡು ಬಂದಿದ್ದು, ಇದು ರಾಜಕೀಯಕ್ಕೆ ಸೀಮಿತವಾಗಿಲ್ಲ.

ಕುಂದಗೋಳ: ನೂತನ ವಧು-ವರರು ಒಬ್ಬರಿಗೊಬ್ಬರು ಅರಿತು, ಅನ್ಯೋನ್ಯವಾಗಿ ಜೀವನ ಸಾಗಿಸುವಂತೆ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಕಿವಿಮಾತು ಹೇಳಿದರು.

ತಾಲೂಕಿನ ಕಮಡೊಳ್ಳಿ ಗ್ರಾಮದಲ್ಲಿ ಸಂತೋಷ ಲಾಡ್ ಫೌಂಡೇಶನ್, ದಿ. ಗೋವಿಂದಪ್ಪ ಜುಟ್ಟಲ್ ಪ್ರತಿಷ್ಠಾನ ಸಮಿತಿ ಹಾಗೂ ಮಾನವ ಬಂಧುತ್ವ ವೇದಿಕೆ ವತಿಯಿಂದ ನಡೆದ ಸರ್ವಧರ್ಮ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ದಂಪತಿಗಳು ಜೀವನದ ಏರಿಳಿತಗಳಲ್ಲಿ ಸದಾಕೈಜೋಡಿಸಿ ನಡೆದರೆ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಮಾಜಿ ಶಾಸಕ ದಿ. ಗೋವಿಂದಪ್ಪ ಜುಟ್ಟಲ್ ಈ ಹಿಂದೆ ಸಾಮೂಹಿಕ ವಿವಾಹ ಆಯೋಜಿಸುತ್ತಿದ್ದರು. ಅದರಂತೆ ಅವರ ಮಗನಾದ ಚಂದ್ರಶೇಖರ ಜುಟ್ಟಲ್ ಸಹ 23 ವರ್ಷಗಳಿಂದ ಈ ಕಾರ್ಯ ಮಾಡಿಕೊಂಡು ಬಂದಿದ್ದು, ಇದು ರಾಜಕೀಯಕ್ಕೆ ಸೀಮಿತವಾಗಿಲ್ಲ. ಇನ್ನೂ ಹೆಚ್ಚೆಚ್ಚು ಇಂತಹ ಕಾರ್ಯ ಮಾಡಲಿ. ಸದಾ ಅವರ ಬೆಂಬಲಕ್ಕಿರುತ್ತೇವೆ ಎಂದು ಹೇಳಿದರು.

ಎಐಸಿಸಿ ಕಾರ್ಯದರ್ಶಿ ಮಯೂರ ಜಯಕುಮಾರ ಮಾತನಾಡಿ, ನವ ದಂಪತಿಗಳು ಉತ್ತಮ ಆಚಾರ-ವಿಚಾರ ಮೈಗೂಡಿಸಿಕೊಂಡು ಜೀವನ ಸಾಗಿಸಿ ಎಂದು ಕರೆ ನೀಡಿದರು.

ಸರ್ಕಾರದ ಮುಖ್ಯ ಸಚೇತಕ, ವಿಪರಿ ಸದಸ್ಯ ಸಲೀಂ ಅಹಮ್ಮದ ಮಾತನಾಡಿ, ಚಂದ್ರಶೇಖರ ಜುಟ್ಟಲ್ 23 ವರ್ಷಗಳಿಂದ ಸಾಮೂಹಿತ ವಿವಾಹ ನಡೆಸಿಕೊಂಡು ಬರುತ್ತಿದ್ದಾರೆ. ಇಲ್ಲಿಯವರೆಗೆ 2300ಕ್ಕೂ ಅಧಿಕ ಮದುವೆಗಳನ್ನು ಮಾಡಿಸಿದ್ದಾರೆ. ಅವರಿಗೆ ಇಂತಹ ಮತ್ತಷ್ಟು ಕಾರ್ಯ ಮಾಡುವ ಶಕ್ತಿ ದೇವರು ನೀಡಲಿ ಎಂದು ಹಾರೈಸಿದರು.

ಗೋವಿದಂಪ್ಪ ಜುಟ್ಟುಲ್ ಪ್ರತಿಷ್ಟಾನ ಸಮಿತಿ ಸಂಸ್ಥಾಪಕ ಅಧ್ಯಕ್ಷ ಚಂದ್ರಶೇಖರ ಜುಟಲ್‌ ಮಾತನಾಡಿ, ಬಡವರಿಗೆ, ರೈತರಿಗೆ, ಕೂಲಿ ಕಾರ್ಮಿಕರ ಹಿತದೃಷ್ಟಿಯಿಂದ ಸಮಾಜಿಕ ಸೇವೆ ಮಾಡಿಕೊಂಡು ಬರುತ್ತಿರುವುದಾಗಿ ತಿಳಿಸಿದರು.

ಕಾನೂನು ಮತ್ತು ಸಂಸದಿಗಳ ಸಚಿವ ಎಚ್ ಕೆ ಪಾಟೀಲ, ಯುವ ಕಾಂಗ್ರೆಸ್ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಹುಲ್ ಜಾರಕಿಹೊಳಿ ಮಾತನಾಡಿದರು. ರಾಜನಳ್ಳಿ ವಾಲ್ಮೀಕಿ ಗುರು ಪೀಠದ ಡಾ. ಶ್ರೀ ಪ್ರಸನ್ನಾನಂದ ಪುರಿ ಮಹಾಸ್ವಾಮಿಗಳು, ಉಪ್ಪಿನ ಬೇಟಗೆರಿಯ ಶ್ರೀ ಕುಮಾರ ವಿರೂಪಾಕ್ಷೇಶ್ವರ ಮಹಾಸ್ವಾಮಿಗಳು, ಸವಣೂರಿನ ದೊಡ್ಡ ಹುಣಸಿಮಠದ ಶ್ರೀ ಚನ್ನಬಸವೇಶ್ವರ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.

ಪಂಚಗ್ರಹ ಹಿರೇಮಠದ ಶ್ರೀ ಶಿಥಿಕಂಠೇಶ್ವರ ಮಹಾಸ್ವಾಮೀಜಿ, ಕಲ್ಯಾಣಪುರಮಠದ ಶ್ರೀ ಬಸವಣ್ಣಜ್ಜನವರು, ಮಾಜಿ ಸಂಸ ಪ್ರೊ. ಐ.ಜಿ. ಸನದಿ, ಮಾಜಿ ಸಚಿವ ಪಿ.ಸಿ.ಸಿದ್ದನಗೌಡ್ರ, ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅನೀಲಕುಮಾರ ಪಾಟೀಲ, ಮಾಜಿ ಶಾಸಕ ಎಂ.ಎಸ್. ಅಕ್ಕಿ, ಅಜೀಂಪೀರ್‌ ಖಾದ್ರಿ, ಮುಖಂಡರಾದ ಸದಾನಂದ ಡಂಗನವರ, ಇಕ್ಬಾಲ್‌ ತಮಟಗಾರ, ರೇಣುಕಾ ಯಲ್ಲಮ್ಮ ದೇವಸ್ಥಾನದ ಸಮಿತಿ ನಿರ್ದೇಶಕಿ ರೇಣುಕಾ ವಾಲಿಕಾರ ಹಾಗೂ ಗ್ರಾಪಂ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು, ಗ್ರಾಮಸ್ಥರು ಸೇರಿ ಅನೇಕರಿದ್ದರು.