ಸಾರಾಂಶ
ತನ್ನ ಮೇಲೆ ಹಾಕಿದ್ದ ಕೇಸ್ ಹಿಂಪಡೆಯುವಂತೆ ಒತ್ತಾಯಿಸಿ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ, ಆಕೆಯನ್ನು ಕೊಲೆ ಮಾಡಲು ಯತ್ನಿಸಿದ್ದ ಅಪರಾಧಿ ಪತಿಗೆ 10 ವರ್ಷ ಕಾರಾಗೃಹ ಶಿಕ್ಷೆ ಹಾಗೂ ₹24 ಸಾವಿರ ದಂಡ ವಿಧಿಸಿ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ದಾವಣಗೆರೆಯಲ್ಲಿ ಸೋಮವಾರ ತೀರ್ಪು ನೀಡಿದೆ.
- ಕೇಸ್ ಹಿಂಪಡೆಯುವಂತೆ ಪತ್ನಿ, ಆಕೆಯ ಸೋದರನಿಗೆ ಹಲ್ಲೆ ಪ್ರಕರಣ
- - - ಕನ್ನಡಪ್ರಭ ವಾರ್ತೆ ದಾವಣಗೆರೆತನ್ನ ಮೇಲೆ ಹಾಕಿದ್ದ ಕೇಸ್ ಹಿಂಪಡೆಯುವಂತೆ ಒತ್ತಾಯಿಸಿ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ, ಆಕೆಯನ್ನು ಕೊಲೆ ಮಾಡಲು ಯತ್ನಿಸಿದ್ದ ಅಪರಾಧಿ ಪತಿಗೆ 10 ವರ್ಷ ಕಾರಾಗೃಹ ಶಿಕ್ಷೆ ಹಾಗೂ ₹24 ಸಾವಿರ ದಂಡ ವಿಧಿಸಿ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸೋಮವಾರ ತೀರ್ಪು ನೀಡಿದೆ.
ಚಿತ್ರದುರ್ಗದ ಮಂಡಕ್ಕಿ ಭಟ್ಟಿಯ ಸಲೀಂ (40) ಶಿಕ್ಷೆಗೆ ಗುರಿಯಾದ ಅಪರಾಧಿ. ಸಲೀಂ ಮದ್ಯ ಸೇವಿಸಿ ಬಂದು ಪತ್ನಿ ಆಸ್ಮಾ ಖಾನಂಗೆ ದೈಹಿಕ, ಮಾನಸಿಕ, ದೈಹಿಕ ಹಿಂಸೆ ಮಾಡುತ್ತಿದ್ದ. 2024ರ ಏಪ್ರಿಲ್ 11ರಂದು ಮಧ್ಯಾಹ್ನ ಸಲೀಂ ಮನಗೆ ಬಂದು ಗಲಾಟೆ ಮಾಡುತ್ತಿದ್ದ. ಆಗ ಅಕ್ಕ ಆಸ್ಮಾ ಖಾನಂಗೆ ಬ್ಲೇಡ್‌ನಿಂದ ದಾಳಿ ಮಾಡಿದ್ದನು. ಸಹೋದರಿ ಹಾಗೂ ತನ್ನ ಮೇಲೆ ಹಲ್ಲೆ, ಮನೆಯಿಂದ ಹೊರಹಾಕಿ ದೌರ್ಜನ್ಯ ನಡೆಸಿದ್ದ ಸಲೀಂ ವಿರುದ್ಧ ಸಹೋದರ, ಚನ್ನಗಿರಿಯ ರಾಜರಾಜೇಶ್ವರಿ ನಗರದ ಗೌಸ್ ಖಾನ್ ಚನ್ನಗಿರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.ಪ್ರಕರಣ ದಾಖಲಿಸಿದ ತನಿಖಾಧಿಕಾರಿ, ಚನ್ನಗಿರಿ ಸಿಪಿಐ ಮಹಮ್ಮದ್ ಸೈಫುದ್ದೀನ್ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎಂ.ಎಚ್. ಅಣ್ಣಯ್ಯನವರ್ ವಿಚಾರಣೆ ಆಲಿಸಿ, ಸಲೀಂನನ್ನು ಅಪರಾಧಿ ಎಂದು ತೀರ್ಮಾನಿಸಿ ತೀರ್ಪು ಪ್ರಕಟಿಸಿದರು. ಪಿರ‍್ಯಾದಿ ಪರ ಸರ್ಕಾರಿ ವಕೀಲ ಕೆ.ಎಸ್.ಸತೀಶ ವಾದ ಮಂಡಿಸಿದ್ದರು.
- - -(ಸಾಂದರ್ಭಿಕ ಚಿತ್ರ)