ಸಾರಾಂಶ
ಪತಿಯೊಬ್ಬ ಪತ್ನಿಯ ಕುತ್ತಿಗೆ ಸೀಳಿ ಭರ್ಬರ ಹತ್ಯೆ ಮಾಡಿ ಓಡಿ ಹೋಗಲು ಯತ್ನಿಸಿದಾಗ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಘಟನೆ ಭಟ್ಕಳ ತಾಲೂಕಿನ ಕಾಯ್ಕಿಣಿ ಸಭಾತಿಯಲ್ಲಿ ನಡೆದಿದೆ.
ಭಟ್ಕಳ:
ಪತಿಯೊಬ್ಬ ಪತ್ನಿಯ ಕುತ್ತಿಗೆ ಸೀಳಿ ಭರ್ಬರ ಹತ್ಯೆ ಮಾಡಿ ಓಡಿ ಹೋಗಲು ಯತ್ನಿಸಿದಾಗ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಘಟನೆ ತಾಲೂಕಿನ ಕಾಯ್ಕಿಣಿ ಸಭಾತಿಯಲ್ಲಿ ನಡೆದಿದೆ.ಮುರ್ಡೇಶ್ವರದ ಮಾವಳ್ಳಿ-2 ಗ್ರಾಪಂ ವ್ಯಾಪ್ತಿಯ ನಾಡವರಕೇರಿಯ ನಿವಾಸಿ ನಂದಿನಿ ಲೋಕೇಶ ನಾಯ್ಕ (30) ಹತ್ಯೆಯಾದ ಮಹಿಳೆ. ಕೌಟುಂಬಿಕ ಕಲಹದಿಂದಲೇ ಪತಿ ಲೋಕೇಶ ನಾಯ್ಕ ಈ ದುಷ್ಕೃತ್ಯ ಎಸಗಲು ಕಾರಣ ಎನ್ನಲಾಗಿದೆ. ಇವರಿಗೆ ಒಂದು ಗಂಡು, ಒಂದು ಹೆಣ್ಣು ಮಗುವಿದೆ. ಪ್ರೀತಿ ಮದುವೆ ಆಗಿದ್ದ ಇವರು ಕಳೆದ ಮೂರು ದಿನಗಳ ಹಿಂದಷ್ಟೇ ನಂದಿನಿ ಮತ್ತು ಲೋಕೇಶ ದಂಪತಿ ಮಾವಳ್ಳಿಯ ನಾಡವರಕೇರಿಯಿಂದ ಕಾಯ್ಕಿಣಿಯ ಸಭಾತಿ ಕ್ರಾಸ್‌ನಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸ್ತವ್ಯ ಮಾಡುತ್ತಿದ್ದರು. ಮಂಗಳವಾರ ಸಂಜೆ ಪತ್ನಿಯ ಹೊಟ್ಟೆಗೆ ಚಾಕುವಿನಿಂದ ತಿವಿದು ನಂತರ ಕತ್ತಿಯಿಂದ ಕುತ್ತಿಗೆ ಸೀಳಿ ಪರಾರಿಯಾಗಿದ್ದಾನೆ. ರಕ್ತದ ಮಡುವಿನಲ್ಲಿ ಮನೆಯಿಂದ ಹೊರಬಂದ ನಂದಿನಿ ಅಸ್ವಸ್ಥಳಾಗಿ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಅಕ್ಕಪಕ್ಕದ ಮನೆಯವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ತಕ್ಷಣ ಸ್ಥಳಕ್ಕಾಗಮಿಸಿದ್ದ ಗ್ರಾಮೀಣ ಸರ್ಕಲ್ ಇನ್‌ಸ್ಪೆಕ್ಟರ್ ಸಂತೋಷ ಕಾಯ್ಕಿಣಿ ಹಾಗೂ ಸಿಬ್ಬಂದಿ ಆರೋಪಿ ಪತಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ, ಡಿವೈಎಸ್ಪಿ ಶ್ರೀಕಾಂತ ಕೆ. ಭೇಟಿ ನೀಡಿ ಪರಿಶೀಲಿಸಿದರು.ಆರೋಪಿ 14 ದಿನ ಪೊಲೀಸ್ ಕಸ್ಟಡಿಗೆ
ಪತ್ನಿ ಹತ್ಯೆ ಮಾಡಿರುವ ಆರೋಪಿ ಲೋಕೇಶ ನಾಯ್ಕನನ್ನು ಬುಧವಾರ ಸಂಜೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಆತನನ್ನು ೧೪ ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಬುಧವಾರ ಕೊಲೆಯಾದ ಸ್ಥಳಕ್ಕೆ ಜಿಲ್ಲಾ ಹೆಚ್ಚುವರಿ ಎಸ್ಪಿ ಸಿ.ಟಿ. ಜಯಕುಮಾರ ಭೇಟಿ ನೀಡಿ ಪರಿಶೀಲಿಸಿದರು.ಇಬ್ಬರು ಪ್ರೀತಿಸಿ ವಿವಾಹವಾಗಿದ್ದು, ನಂದಿನ ಮಂಗಳೂರ ಮೂಲದವಳು. ಒಂದುವರೆ ತಿಂಗಳ ಹಿಂದೆ ಪತಿಯೊಂದಿಗೆ ಇಲ್ಲ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಇಬ್ಬರನ್ನು ಕರೆಸಿ ರಾಜಿ ಮಾಡಿ ಸ್ಥಳೀಯ ಪೊಲೀಸರು ಕಳಿಸಿದ್ದರು. ಮಂಗಳವಾರ ರಾತ್ರಿ ಊಟ ಬಡಿಸುವ ವೇಳೆ ಪತಿ-ಪತ್ನಿಗೆ ಮಾತು ಬೆಳೆದಿದೆ. ಪತ್ನಿ ಮೊಬೈಲ್‌ನಲ್ಲಿ ಮಾತನಾಡುವುದನ್ನು ಲೋಕೇಶ ಪ್ರಶ್ನಿಸಿ ಹಲ್ಲೆ ಮಾಡಲು ಹೋಗಿದ್ದಾನೆ. ತಪ್ಪಿಸಿಕೊಳ್ಳಲು ಓಡುವಾಗ ನಂದಿನಿ ಬಿದ್ದಿದ್ದು, ಮಚ್ಚಿನಿಂದ ಕತ್ತಿಗೆ ಹೊಡೆದಿದ್ದಾನೆ. ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ ಸಿ.ಟಿ. ಜಯಕುಮಾರ ತಿಳಿಸಿದ್ದಾರೆ.