ಹುಸೇನಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಆಂಜನೇಯ ದೇವಸ್ಥಾನದ ಉದ್ಘಾಟನೆ ಸಮಾರಂಭ ಹಾಗೂ ಆಂಜನೇಯ, ಈಶ್ವರ ಮತ್ತು ಬಸವಣ್ಣನ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನಾ ಅದ್ಧೂರಿಯಾಗಿ ನಡೆಯಿತು.
ಕನ್ನಡಪ್ರಭ ವಾರ್ತೆ ಕವಿತಾಳ
ಹುಸೇನಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಆಂಜನೇಯ ದೇವಸ್ಥಾನದ ಉದ್ಘಾಟನೆ ಸಮಾರಂಭ ಹಾಗೂ ಆಂಜನೇಯ, ಈಶ್ವರ ಮತ್ತು ಬಸವಣ್ಣನ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನಾ ಅದ್ಧೂರಿಯಾಗಿ ನಡೆಯಿತು.ನೂತನ ದೇವಾಸ್ಥಾನದಲ್ಲಿ ಚಂಡಿ ಹೋಮ, ಗಣ ಹೋಮ, ರುದ್ರಹೋಮ, ನವಗ್ರಹ ಪೂಜೆ, ಆಂಜನೇಯ ಮೂರ್ತಿಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಕಳಸಾರೋಹಣ ಹಾಗೂ ಮಹಾಮಂಗಳಾರತಿ ಸಹಿತ ವಿಶೇಷ ಪೂಜೆಗಳು ನೆರವೇರಿದವು.
ನವಕಲ್ ಮಠದ ಅಭಿನವ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪುಟ್ಟ ಗ್ರಾಮದಲ್ಲಿ ಭಕ್ತರು ಒಗ್ಗೂಡಿ ಸುಂದರ ದೇವಾಲಯ ನಿರ್ಮಿಸಿ, ಮೂರ್ತಿ ಪ್ರತಿಷ್ಠಾಪನೆ ಹಾಗೂ ಹೋಮ ಹವನಗಳನ್ನು ನಡೆಸಿರುವುದು ಶ್ಲಾಘನೀಯ. ಧಾರ್ಮಿಕ ಕಾರ್ಯಗಳಿಂದ ಸಮಾಜಕ್ಕೆ ಒಳ್ಳೆಯದಾಗುತ್ತದೆ ಯುವ ಜನತೆ ದುಶ್ಚಟಗಳಿಂದ ದೂರವಿದ್ದು, ಹಿರಿಯರಿಗೆ ಗೌರವ ನೀಡುವುದನ್ನು ಕಲಿಯಬೇಕು ಎಂದು ಹೇಳಿದರು.ಕವಿತಾಳ ಕಲ್ಮಠದ ಅಭಿನವ ಸಿದ್ದಲಿಂಗ ಸ್ವಾಮೀಜಿ, ನಾಗಯ್ಯ ಗುರುವಿನ ಜಾಲಹಳ್ಳಿ, ಅಯ್ಯಪ್ಪ ತಾತ ಹೀರಾ, ತ್ರಯಂಬಕೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಸಿದ್ದಯ್ಯ ಸ್ವಾಮಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು.
ವಿಧಾನಪರಿಷತ್ ಸದಸ್ಯ ಎನ್.ಎಸ್. ಬೋಸರಾಜು ಮತ್ತು ಶಾಸಕ ಜಿ. ಹಂಪಯ್ಯ ನಾಯಕ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದರು.ಈ ಸಂದರ್ಭ ಶಿವಲಿಂಗಪ್ಪಗೌಡ, ಯಮನಪ್ಪ ದಿನ್ನಿ, ಮಲ್ಲಿಕಾರ್ಜುನ ಜಕ್ಕಲದಿನ್ನಿ, ಕಿರಲಿಂಗಪ್ಪ, ಈರಣ್ಣ ಸಾಹುಕಾರ, ದೇವಣ್ಣ ನಾಯಕ, ಲಿಂಗಯ್ಯ ಪೂಜಾರಿ, ನಾಗಪ್ಪ ಪೂಜಾರಿ, ಮೋನುದಿನ್, ದುರುಗಪ್ಪ ಮಳೆರ್, ರಾಜ ಸಾಬ್ ನೀಲಗಲ್, ಲಕ್ಷ್ಮಣ ಸಿಂಗ್, ಚಿದಾನಂದ ಪೂಜಾರಿ, ಸಂಜೀವರೆಡ್ಡಿ, ಅಯ್ಯಳಪ್ಪ, ರಮೇಶ ನಾಯಕ, ಲಿಂಗರಾಜ ನಾಯಕ ಎಚ್ ಬಸವರಾಜ ಸೇರಿದಂತೆ ಗ್ರಾಮದ ಹಿರಿಯರು, ಯುವಕರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತಾದಿಗಳು ಭಾಗವಹಿಸಿದ್ದರು.