ಸ್ವಸ್ಥ ಸಮಾಜಕ್ಕೆ ಬುನಾದಿ ಹಾಕಿದ ಕೀರ್ತನೆಗಳು

| Published : Nov 09 2025, 01:45 AM IST

ಸ್ವಸ್ಥ ಸಮಾಜಕ್ಕೆ ಬುನಾದಿ ಹಾಕಿದ ಕೀರ್ತನೆಗಳು
Share this Article
  • FB
  • TW
  • Linkdin
  • Email

ಸಾರಾಂಶ

ಕನಕಪುರ: ಕೀರ್ತನೆಗಳ ಮೂಲಕ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಬುನಾದಿ ಹಾಕಿದ ಮಹಾನ್ ಸಂತ ಕನಕದಾಸರು ಎಂದು ಜಯ ಕರ್ನಾಟಕ ಜನಪರ ಸಂಘಟನೆಯ ರಾಜ್ಯ ಸಲಹೆಗಾರ ಕುಮಾರಸ್ವಾಮಿ ಬಣ್ಣಿಸಿದರು.

ಕನಕಪುರ: ಕೀರ್ತನೆಗಳ ಮೂಲಕ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಬುನಾದಿ ಹಾಕಿದ ಮಹಾನ್ ಸಂತ ಕನಕದಾಸರು ಎಂದು ಜಯ ಕರ್ನಾಟಕ ಜನಪರ ಸಂಘಟನೆಯ ರಾಜ್ಯ ಸಲಹೆಗಾರ ಕುಮಾರಸ್ವಾಮಿ ಬಣ್ಣಿಸಿದರು.

ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಭಕ್ತ ಕನಕದಾಸರ 538ನೇ ಜಯಂತಿ ಸಮಾರಂಭದಲ್ಲಿ ಮಾತನಾಡಿದ ಅವರು, ದೇವರ ಮುಂದೆ ಎಲ್ಲರೂ ಸಮಾನರು ದೇವರನ್ನು ಒಲಿಸಿಕೊಳ್ಳಲು ಭಕ್ತಿಯೊಂದೇ ಮಾರ್ಗ ಎಂದು ತೋರಿಸಿಕೊಟ್ಟ ಮಹಾಪುರುಷ ಕನಕದಾಸರು. ಸಮಾಜದ ಎಲ್ಲಾ ವರ್ಗಗಳ ಜನರಿಗೆ ತಮ್ಮ ಕೀರ್ತನೆಗಳ ಮೂಲಕ ಸಹಬಾಳ್ವೆ ಹಾಗು ಸನ್ಮಾರ್ಗಗಳಲ್ಲಿ ನಡೆಯುವಂತೆ ತಿಳಿಸಿರುವ ಅವರ ಕೀರ್ತನೆಗಳು ಎಂದಿಗೂ ಪ್ರಸ್ತುತ ಎಂದು ತಿಳಿಸಿದರು. ಸಾಹಿತಿ ಕೂ.ಗಿ.ಗಿರಿಯಪ್ಪ ಮಾತನಾಡಿ, ಭಕ್ತ ಕನಕದಾಸರು ಅಂದು ತಮ್ಮ ಕೀರ್ತನೆಗಳ ಮೂಲಕ ಸಮಾಜಕ್ಕೆ ನೀಡಿದ ಸಂದೇಶ ಇಂದಿಗೂ ಯಾರು ಮರೆಯದೆ ಪರಿಪಾಲಿಸಿಕೊಂಡು ಬರಬೇಕೆಂದು ತಿಳಿಸಿ ಕನಕದಾಸರ ಬದುಕಿನ ಗುಣಗಾನ ಮಾಡಿದರು.

ಕಾರ್ಯಕ್ರಮದಲ್ಲಿ ತಾಲೂಕು ಕುರುಬರ ಸಂಘದ ಅಧ್ಯಕ್ಷರು ಹಾಗು ಪದಾಧಿಕಾರಿಗಳು, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಮುನಿಹುಚ್ಚೇಗೌಡ, ತಾಪಂ ಇಒ ಮೋಹನ್‌ಬಾಬು, ತಾಲೂಕು ಭೂಮಾಪನಾ ಅಧಿಕಾರಿ ನಂದೀಶ್, ಶಿರಸ್ತೇದಾರ್ ರಘು, ತಾಲೂಕು ಗ್ಯಾರಂಟಿ ಸಮಿತಿ ಸದಸ್ಯ ಚಿಕ್ಕಣ್ಣ, ನಗರಸಭಾ ಆಶ್ರಯ ಸಮಿತಿ ಸದಸ್ಯ ಮಾರುತಿ, ಕನ್ನಡ ಸಂಘಟನೆಯ ಭಾಸ್ಕರ್, ವಿವಿಧ ಇಲಾಖೆಗಳ ಅಧಿಕಾರಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.