ಕೆನಾಲ್ ಕಾಮಗಾರಿಗೂ ನನ್ನ ವಿರೋಧವಿದೆ:ಎಸ್. ಆರ್. ಶ್ರೀನಿವಾಸ್

| Published : Dec 09 2024, 12:45 AM IST

ಕೆನಾಲ್ ಕಾಮಗಾರಿಗೂ ನನ್ನ ವಿರೋಧವಿದೆ:ಎಸ್. ಆರ್. ಶ್ರೀನಿವಾಸ್
Share this Article
  • FB
  • TW
  • Linkdin
  • Email

ಸಾರಾಂಶ

ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿಗೆಗೆ ನನ್ನ ವಿರೋಧವು ಕೂಡ ಇದೆ. ನಾನು ಅವತ್ತಿನಿಂದಲೂ ವಿರೋಧ ಮಾಡಿಕೊಂಡು ಬರುತ್ತಿದೇನೆ. ನನ್ನ ಮೇಲೆ ಇಲ್ಲದ ಸಲ್ಲದ ಆರೋಪ ಮಾಡುವುದು ಸರಿಯಲ್ಲ ಎಂದು ಶಾಸಕ ಎಸ್. ಆರ್. ಶ್ರೀನಿವಾಸ್ ಕಿಡಿಕಾರಿದರು.

ಕನ್ನಡಪ್ರಭ ವಾರ್ತೆ ಗುಬ್ಬಿ

ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿಗೆಗೆ ನನ್ನ ವಿರೋಧವು ಕೂಡ ಇದೆ. ನಾನು ಅವತ್ತಿನಿಂದಲೂ ವಿರೋಧ ಮಾಡಿಕೊಂಡು ಬರುತ್ತಿದೇನೆ. ನನ್ನ ಮೇಲೆ ಇಲ್ಲದ ಸಲ್ಲದ ಆರೋಪ ಮಾಡುವುದು ಸರಿಯಲ್ಲ ಎಂದು ಶಾಸಕ ಎಸ್. ಆರ್. ಶ್ರೀನಿವಾಸ್ ಕಿಡಿಕಾರಿದರು.

ತಾಲೂಕಿನ ಕೊಡಿಯಾಲದಲ್ಲಿ ₹20 ಕೋಟಿ ವೆಚ್ಚದ ನಿಟ್ಟೂರು ಚೇಳೂರು ರಸ್ತೆ ಕಾಮಗಾರಿಗೆ ಭೂಮಿ ಪೂಜೆ ಮಾಡಿ ಮಾತನಾಡಿದರು. ಶಾಸಕನಾಗಿರುವುದರಿಂದ ಪಾದಯಾತ್ರೆಯಲ್ಲಿ ಭಾಗವಹಿಸಲಾಗುತ್ತಿಲ್ಲ. ಯಾರೂ ತಲೆ ಕೆಟ್ಟುವರು ಹೇಳುತ್ತಾರೆ ಅಂದ್ರೆ ನಾನು ತಲೆಕೆಡಿಸಿಕೊಳಲ್ಲ. ನಾನು ಎಲ್ಲಿ ಮಾತಾಡಬೇಕು ಅಲ್ಲಿ‌ ಮಾತನಾಡುತ್ತೇನೆ. ಈಗಾಗಲೇ ಮುಖ್ಯಮಂತ್ರಿಗಳು ,ಉಪಮುಖ್ಯಮಂತ್ರಿ ಹಾಗೂ ಉಸ್ತುವರಿ ಸಚಿವರ ಜತೆ ಮಾತನಾಡಿದೇನೆ. ಹೇಮಾವತಿ ನಮ್ಮ ಜಿಲ್ಲೆಯಲ್ಲಿ ಜೀವನಾಡಿಯಾಗಿದೆ. ರೈತರಿಗೆ ಯಾವುದೇ ಕಾರಣಕ್ಕೂ ಅನ್ಯಾಯ ಮಾಡಲು ಬೀಡುವುದಿಲ್ಲ ಈ ಕಾಮಗಾರಿಗೆ ಬೇಡ ಎಂದು ಹೇಳಿದ ಮೇಲೆ ಕಾಮಗಾರಿಗೆ ಸ್ಥಗಿತಗೊಂಡಿದೆ ಎಂದರು.

ಆಡಳಿತ ಪಕ್ಷದ ಸದಸ್ಯನಾಗಿರುವುದರಿಂದ ಯಾವುದೇ ಪ್ರತಿಭಟನೆಯಲ್ಲಿ ಭಾಗವಹಿಸಲು ಆಗಲ್ಲ. ಆದರೆ ಉಪ ಮುಖ್ಯಮಂತ್ರಿಗಳು ಹಾಗೂ ಉಸ್ತುವರಿ ಸಚಿವರು ಸಭೆ ಕರೆದಾಗಲು ನಾನು ಕೂಡ ಅಲ್ಲೇ ವಿರೋಧ ಮಾಡಿದ್ದೇನೆ. ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್ ಕಾಮಗಾರಿಗೆಗೆ ನನ್ನ ಸಂಪೂರ್ಣ ವಿರೋಧವಿದೆ. ನಾನು ಕೂಡ ಮುಖ್ಯಮಂತ್ರಿಗಳ ಜತೆ ಚರ್ಚಿಸುತ್ತೇನೆ ಎಂದು ತಿಳಿಸಿದರು.

ಚೇಳೂರು ಗ್ರಾಮ ಪಂಚಾಯತಿ ಅಧ್ಯಕ್ಷ ಜಯಮ್ಮ, ಸದಸ್ಯರಾದ ಸಿದ್ದರಾಜು, ಪದ್ಮ ರಂಗಸ್ವಾಮಯ್ಯ, ಬಸವರಾಜು, ಚಂದ್ರಮ್ಮ ಮುಖಂಡರಾದ ಶಿವಣ್ಣ, ರಮೇಶ್, ಮಹದೇವಯ್ಯ, ಶಿವನಂಜಪ್ಪ ನಿರಂಜನ ಮೂರ್ತಿ, ಕೆ ಆರ್ ಕುಮಾರ್ ಗುತ್ತಿಗೆದಾರ ರಾಮಲಿಂಗರೆಡ್ಡಿ ಮುಂತಾದವರು ಉಪಸ್ಥಿತರಿದ್ದರು.