ಗ್ರಾಮಗಳ ಅಭಿವೃದ್ಧಿಗೆ ನಾನು ಸದಾ ಸಿದ್ಧ: ಶಾಸಕ ಜಿ.ಎಚ್.ಶ್ರೀನಿವಾಸ್

| Published : Nov 15 2024, 12:33 AM IST

ಗ್ರಾಮಗಳ ಅಭಿವೃದ್ಧಿಗೆ ನಾನು ಸದಾ ಸಿದ್ಧ: ಶಾಸಕ ಜಿ.ಎಚ್.ಶ್ರೀನಿವಾಸ್
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ, ಪಂಚಾಯತಿ ಮತ್ತು ಗ್ರಾಮಗಳ ಅಭಿವೃದ್ಧಿಗೆ ನಾನು ಸದಾ ನಿಮ್ಮೊಂದಿಗೆ ಕೈಜೋಡಿಸಿ ಕೆಲಸ ಮಾಡಲು ಸಿದ್ಧ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದ್ದಾರೆ.

ಸರ್ಕಾರಿ ಅಧಿಕಾರಿಗಳೊಂದಿಗೆ ಸಂವಾದ ಕಾರ್ಯಕ್ರಮ, ಸುಗ್ರಾಮ ಒಕ್ಕೂಟದ ಧ್ವನಿ ಪತ್ರಿಕೆ ಬಿಡುಗಡೆ

ಕನ್ನಡಪ್ರಭ ವಾರ್ತೆ, ತರೀಕೆರೆ

ಪಂಚಾಯತಿ ಮತ್ತು ಗ್ರಾಮಗಳ ಅಭಿವೃದ್ಧಿಗೆ ನಾನು ಸದಾ ನಿಮ್ಮೊಂದಿಗೆ ಕೈಜೋಡಿಸಿ ಕೆಲಸ ಮಾಡಲು ಸಿದ್ಧ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದ್ದಾರೆ.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ದಿ ಹಂಗರ್ ಪ್ರಾಜೆಕ್ಟ್ ಕರ್ನಾಟಕ ಮತ್ತು ಸುಗ್ರಾಮ ಚುನಾಯಿತ ಗ್ರಾಪಂ ಮಹಿಳಾ ಸದಸ್ಯರ ಒಕ್ಕೂಟದ ಸಹಯೋಗದಲ್ಲಿ ನಡೆದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸರ್ಕಾರಿ ಅಧಿಕಾರಿಗಳೊಂದಿಗಿನ ಸಂವಾದದಲ್ಲಿ ಸುಗ್ರಾಮ ಒಕ್ಕೂಟದ ಧ್ವನಿ ಪತ್ರಿಕೆ ಬಿಡುಗಡೆ ಮಾಡಿ, ಒಕ್ಕೂಟದ ಮನವಿ ಸ್ವೀಕರಿಸಿ ಮಾತನಾಡಿದರು.ಚುನಾಯಿತ ಗ್ರಾಪಂ ಮಹಿಳಾ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ತಮ್ಮ ಪಂಚಾಯಿತಿಯಲ್ಲಿ ದಕ್ಷತೆಯಿಂದ ಕೆಲಸ ನಿರ್ವಹಿಸಿ ಸರ್ಕಾರದ ಎಲ್ಲಾ ಯೋಜನೆಗಳ ಸಹಕಾರ ಪಡೆಯಿರಿ. ನಿಮ್ಮ ವಾರ್ಡು ಗಳಲ್ಲಿ ಇರುವ ಫಲಾನುಭವಗಳಿಗೂ ಅದನ್ನು ಕೊಡಿಸಿ ನಾನು ಯಾವಾಗಲೂ ಪಂಚಾಯತಿ ಅಭಿವೃದ್ಧಿಗೆ ಸದಾ ಸಿದ್ಧ ಗ್ರಾಮದ ಅಭಿವೃದ್ಧಿ ಮತ್ತು ಅದರ ಏಳಿಗೆಯನ್ನು ನಾನು ಬಯಸುತ್ತೇನೆ ಎಂದು ತಿಳಿಸಿದರು. ನಂತರ ಪ್ರತಿ ಪಂಚಾಯತಿ ಸಮಸ್ಯೆಗಳನ್ನು ಆಲಿಸಿ, ಆ ಸಮಸ್ಯೆಗಳಿಗೆ ಸೂಕ್ತ ಪರಿಹಾರಕ್ಕೆ ಸಂಬಂಧ ಪಟ್ಟಂತ ಅಧಿಕಾರಿಗಳ ಜೊತೆ ಮಾತನಾಡಿ ಕೆಲಸ ಮಾಡುತ್ತೇನೆ. ಗ್ರಾಮ ಮತ್ತು ಪಂಚಾಯತಿ ಅಭಿವೃದ್ಧಿಗೆ ಸದಾ ನಿಮ್ಮೊಂದಿಗೆ ನಾನು ಕೈ ಜೋಡಿಸುತ್ತೇನೆ ಎಂದು ತಿಳಿಸಿದರು.ದಿ ಹಂಗರ್ ಪ್ರಾಜೆಕ್ಟ್ ತಾಲೂಕ್ ಸಂಯೋಜಕ ಶ್ರೀನಿವಾಸ್ ಮಾತನಾಡಿ, ಈಗ ಶಾಸಕ ಜಿ.ಎಚ್. ಶ್ರೀನಿವಾಸ್ ಗೆ ಕೊಟ್ಟ ಮನವಿ ಕುರಿತಂತೆ ಅವರ ಕಚೇರಿಗೆ ಮಹಿಳಾ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು ಸ್ವತಃ ಶಾಸಕರ ಕಚೇರಿಗೆ ಹೋಗಿ ಚರ್ಚೆ ಮಾಡಿ ಕೆಲಸಗಳನ್ನು ಹಾಕಿಸಿಕೊಂಡು ಗ್ರಾಮ- ಪಂಚಾಯಿತಿ ಅಭಿವೃದ್ಧಿ ಮಾಡಿ, ನಿಜವಾದ ಫಲಾನುಭವಿಗಳಿಗೆ ಸೌಲಭ್ಯ ಕೊಡಿಸಿ ಎಂದು ತಿಳಿಸಿದರು.ಯೂನಿಯನ್ ಬ್ಯಾಂಕ್ ನ ಸಾಕ್ಷರತಾ ಅಧಿಕಾರಿ ಎನ್‌.ಎಸ್‌. ಜಯಣ್ಣ ಮಾತನಾಡಿ ಸ್ವ ಸಹಾಯ ಸಂಘ ಗಳಿಗೆ ಸಾಲ ಸೌಲಭ್ಯ, ಅಭಿವೃದ್ಧಿ, ಕೇಂದ್ರ ಸರ್ಕಾರದ ಯೋಜನೆಗಳಾದ ವಾರ್ಡಿನ ಫಲಾನುಭವಿಗಳ ಪಿಂಚಣಿ ಕುರಿತು ಮಾಹಿತಿ ನೀಡಿ ತಾವು ಸಹ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದರು.

ಸುಗ್ರಾಮ ಒಕ್ಕೂಟದ ತಾಲೂಕು ಅಧ್ಯಕ್ಷೆ ಪುಷ್ಪಾ.ಬಿ.ಕೆ. ಅಜ್ಜಂಪುರ ತಾಲೂಕು ಅಧ್ಯಕ್ಷೆ ಶಶಿಕಲಾ, ಚಿಕ್ಕಮಗಳೂರು ಜಿಲ್ಲಾಧ್ಯಕ್ಷೆ ಸುಧಾ, ಪದಾಧಿಕಾರಿಗಳು, ಗ್ರಾಪಂ ಮಹಿಳಾ ಸದಸ್ಯರು, ಅಧ್ಯಕ್ಷ, ಉಪಾಧ್ಯಕ್ಷರು ಕಾರ್ಯಕ್ರಮದಲ್ಲಿದ್ದರು.

13ಕೆಟಿಆರ್.ಕೆ.8ಃ

ತರೀಕೆರೆಯಲ್ಲಿ ದಿ ಹಂಗರ್ ಪ್ರಾಜೆಕ್ಟ್ ಕರ್ನಾಟಕ ಮತ್ತು ಸುಗ್ರಾಮ ಚುನಾಯಿತ ಗ್ರಾಪಂ ಮಹಿಳಾ ಸದಸ್ಯರ ಒಕ್ಕೂಟದ ಸಹಯೋಗದಲ್ಲಿ ನಡೆದ ಸರ್ಕಾರಿ ಅಧಿಕಾರಿಗ ಜತೆಗಿನ ಸಂವಾದದಲ್ಲಿ ಶಾಸಕ ಜಿ.ಎಚ್.ಶ್ರೀನಿವಾಸ್ ಒಕ್ಕೂಟದ ಧ್ವನಿ ಪತ್ರಿಕೆ ಬಿಡುಗಡೆ ಮಾಡಿದರು. ದಿ ಹಂಗರ್ ಪ್ರಾಜೆಕ್ಟ್ ತಾಲೂಕ್ ಸಂಯೋಜಕ ಶ್ರೀನಿವಾಸ್ ಮತ್ತಿತರರು ಇದ್ದರು.