ಯೋಧರಿಗೆ ಜಮೀನು ನೀಡಿದ್ದು ನನಗೆ ಸಂತೋಷವಿದೆ

| Published : Mar 02 2025, 01:20 AM IST

ಸಾರಾಂಶ

ಸರಕಾರಿ ಶಾಲೆಗಳಲ್ಲಿ ಓದುತ್ತಿದ್ದೇವೆಂದು ಕೀಳರಿಮೆ ಬೇಡ, ಸರಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿರುವವರು ಇಂದು ದೇಶದ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ ಎಂದು ದಕ್ಷಿಣ ಭಾರತದ ಖ್ಯಾತ ಬಹುಭಾಷಾ ಚಲನಚಿತ್ರ ನಟ ಸುಮನ್ ತಿಳಿಸಿದರು.ದಿ. ಎಚ್.ತಿಪ್ಪಾರೆಡ್ಡಿರವರ ಸ್ಮರಣಾರ್ಥವಾಗಿ ಕ್ಯಾಸಂಬಳ್ಳಿ ಗ್ರಾಮದಲ್ಲಿ ಟಿ.ಕೆ.ಆರ್.ಫೌಂಡೇಷನ್ ಹಾಗೂ ಫೌಂಡೇಷನ್ ನ ಕಿರಣಕುಮಾರ್‌ ರೆಡ್ಡಿ ಅಭಿಮಾನಿ ಬಳಗದ ವತಿಯಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಬ್ಯಾಗ್ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಕೆಜಿಎಫ್

ಸರಕಾರಿ ಶಾಲೆಗಳಲ್ಲಿ ಓದುತ್ತಿದ್ದೇವೆಂದು ಕೀಳರಿಮೆ ಬೇಡ, ಸರಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿರುವವರು ಇಂದು ದೇಶದ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ ಎಂದು ದಕ್ಷಿಣ ಭಾರತದ ಖ್ಯಾತ ಬಹುಭಾಷಾ ಚಲನಚಿತ್ರ ನಟ ಸುಮನ್ ತಿಳಿಸಿದರು.

ದಿ. ಎಚ್.ತಿಪ್ಪಾರೆಡ್ಡಿರವರ ಸ್ಮರಣಾರ್ಥವಾಗಿ ಕ್ಯಾಸಂಬಳ್ಳಿ ಗ್ರಾಮದಲ್ಲಿ ಟಿ.ಕೆ.ಆರ್.ಫೌಂಡೇಷನ್ ಹಾಗೂ ಫೌಂಡೇಷನ್ ನ ಕಿರಣಕುಮಾರ್‌ ರೆಡ್ಡಿ ಅಭಿಮಾನಿ ಬಳಗದ ವತಿಯಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಬ್ಯಾಗ್ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಯೋಧರರಿಗೆ ಉಚಿತ ಭೂಮಿ:

ಹೈದರಾಬಾದ್ ಬಳಿ ಇರುವ ತಮ್ಮ ಕೋಟ್ಯಂತರ ಬೆಲೆ ಬಾಳುವ ಜಮೀನಿನಲ್ಲಿ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದ ನಮ್ಮ ದೇಶದ ಯೋಧರಿಗೆ ಮನೆ ನಿರ್ಮಿಸಲಾಗುತ್ತಿದ್ದು, ಯೋಧರಿಗೆ ಜಮೀನು ನೀಡಿದ್ದರ ಬಗ್ಗೆ ನಮಗೆ ಎಳ್ಳಷ್ಟೂ ಬೇಸರವಿಲ್ಲ, ಬದಲಾಗಿ ಸಂತೋಷ, ಹೆಮ್ಮೆಯಾಗುತ್ತಿದೆ ಎಂದು ತಿಳಿಸಿದರು.

ಕುಂಭಮೇಳದಲ್ಲಿ ಭಾಗವಹಿಸಿದ್ದಕ್ಕೆ ನೆಮ್ಮದಿ:

ನಾನು ಒಬ್ಬ ಹಿಂದೂ ಆಗಿ ಪ್ರಯಾಗ್ ರಾಜ್ ನಲ್ಲಿ ನಡೆದ ಕುಂಭಮೇಳದಲ್ಲಿ ಭಾಗವಹಿಸಿದ್ದೆ. ಆದು ನನಗೆ ನೆಮ್ಮದಿ ನೀಡಿದೆ. ವಿಶ್ವದಲ್ಲೇ ಅತ್ಯಂತ ಹೆಚ್ಚು ಜನರು ಭೇಟಿ ನೀಡಿದ ಪ್ರಯಾಗ್ ರಾಜ್ ಕುಂಭಮೇಳದಲ್ಲಿ ಭಾಗಿಯಾಗಿದ್ದು ನನ್ನ ಪೂರ್ವ ಜನ್ಮದ ಪುಣ್ಯವೆಂದು ಭಾವಿಸುತ್ತೇನೆ ಎಂದು ಹೇಳಿದರು.

ಟಿ.ಕೆ.ಆರ್.ಪೌಂಡೇಷನ್ ಅಧ್ಯಕ್ಷ ಕಿರಣ್‌ ಕುಮಾರ್‌ ರೆಡ್ಡಿ ಮಾತನಾಡಿ, ಭಗವಂತ ನನಗೆ ಎಲ್ಲವನ್ನೂ ನೀಡಿದ್ದಾನೆ. ನನ್ನ ಆದಾಯದ ಕೆಲವು ಭಾಗವನ್ನು ಬಡ ಜನರಿಗೆ ಮೀಸಲಿಟ್ಟಿದ್ದು, ಅದರಲ್ಲೂ ನನ್ನ ತಂದೆಯವರ ಹುಟ್ಟೂರಿನಲ್ಲಿರುವ ಬಡ ಕುಟುಂಬಗಳಿಗೆ ಆರ್ಥಿಕವಾಗಿ ಸಹಾಯ ಮಾಡುವುದು, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಧನ ಸಹಾಯ ಮಾಡುವುದು ನನ್ನ ಮನಸ್ಸಿಗೆ ನೆಮ್ಮದಿ ನೀಡುತ್ತದೆ ಎಂದು ಹೇಳಿದರು.

ನಂತರ ಗಣ್ಯರು ಕ್ಯಾಸಂಬಳ್ಳಿ ಭಾಗದ ೧೮೦೦ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್‌ಗಳನ್ನು ವಿತರಿಸಿದರು.

ಕಿರಣ್‌ ಕುಮಾರ್‌ ರೆಡ್ಡಿ ಅಭಿಮಾನಿ ಬಳಗದ ಯುವ ಮುಖಂಡ ಅರುಣ್‌ ರೆಡ್ಡಿ, ಹಿರಿಯ ಕಾಂಗ್ರೆಸ್ ಮುಖಂಡ ವೆಂಕಟಕೃಷ್ಣರೆಡ್ಡಿ, ರೆಡ್ಡಿ ಸಂಘದ ಅಧ್ಯಕ್ಷ ಪ್ರಸನ್ನರೆಡ್ಡಿ, ಆತ್ಮ ಹಿರೆಮಠ್, ವೇಣು, ಹರ್ಷರೆಡ್ಡಿ, ಅಭಿಲಾಷರೆಡ್ಡಿ, ರವಿರೆಡ್ಡಿ , ಎಪಿಎಂಸಿ ಅಧ್ಯಕ್ಷ ವಿಜಯ ರಾಘವರೆಡ್ಡಿ, ನಿವೃತ್ತ ಶಿಕ್ಷಕ ರವಿರೆಡ್ಡಿ , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಕೃಷ್ಣರೆಡ್ಡಿ, ರಾಮಕೃಷ್ಣರೆಡ್ಡಿ, ಆನಂದರೆಡ್ಡಿ, ಕ್ಯಾಸಂಬಳ್ಳಿ ಪಂಚಾಯ್ತಿ ಅಧ್ಯಕ್ಷೆ ಸುನೀತಾ ಹಾಗೂ ಇತರರು ಹಾಜರಿದ್ದರು.