ಕ್ಷೇತ್ರದ ಅಭಿವೃದ್ಧಿ ವಿಚಾರ ಚರ್ಚೆಗೆ ನಾನು ಸಿದ್ದ: ಸುರೇಶ್

| Published : Apr 07 2024, 01:55 AM IST

ಸಾರಾಂಶ

ಮಾಗಡಿ: ನಾನು ಸಂಸದನಾಗಿ 10 ವರ್ಷ 8 ತಿಂಗಳು ಕೆಲಸ ಮಾಡಿದ್ದು ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಚರ್ಚೆಗೆ ಬರುವುದಾದರೆ ನಾನು ಬರಲು ಸಿದ್ಧನಿದ್ದೇನೆ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದರು.

ಮಾಗಡಿ: ನಾನು ಸಂಸದನಾಗಿ 10 ವರ್ಷ 8 ತಿಂಗಳು ಕೆಲಸ ಮಾಡಿದ್ದು ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಚರ್ಚೆಗೆ ಬರುವುದಾದರೆ ನಾನು ಬರಲು ಸಿದ್ಧನಿದ್ದೇನೆ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದರು.

ಪಟ್ಟಣದ ಸೋಮೇಶ್ವರ ಕಾಲೋನಿಯಲ್ಲಿ ಮಾಗಡಿ ವಿಧಾನಸಭಾ ಕ್ಷೇತ್ರದ ಬೂತ್ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ವಿರೋಧಿಗಳು ಭಾಷಣದಲ್ಲಿ ಡಿ.ಕೆ.ಸುರೇಶ್ ಕ್ಷೇತ್ರಕ್ಕೆ ಏನು ಕೊಡುಗೆ ನೀಡಿದ್ದಾರೆ ಎಂದು ನನ್ನನ್ನು ಪ್ರಶ್ನೆ ಮಾಡುತ್ತಿರುವ ಕುಮಾರಸ್ವಾಮಿ ಈ ಕ್ಷೇತ್ರವನ್ನು 20 ವರ್ಷ ಮಾಜಿ ಸಂಸದರಾದ ಚಂದ್ರಶೇಖರ್ ಆಡಳಿತ ಮಾಡಿದ್ದಾರೆ ನಂತರ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ತೇಜಸ್ವಿನಿ ರಮೇಶ್, ಎಂ.ಶ್ರೀನಿವಾಸ್, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದು ಅವರ ಕೊಡುಗೆ ಏನೆಂದು ಅವರನ್ನು ಕೇಳಬೇಕು ಎಂದರು. ಸಚಿವ ಎಚ್.ಕೆ.ಪಾಟೀಲರು ಗದಗದಲ್ಲಿ ಆರಂಭಿಸಿರುವ ಶುದ್ಧ ನೀರು ಘಟಕವನ್ನು ನೋಡಿಕೊಂಡು ಬಂದು ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಶುದ್ಧ ನೀರು ಘಟಕವನ್ನು ಆರಂಭಿಸಿದ್ದೇವೆ. ಹೇಮಾವತಿ ಯೋಜನೆ ಜಾರಿಗೆ ತಂದಿದ್ದೇವೆ. ಮಾಗಡಿಯಿಂದ ಬೆಂಗಳೂರಿನವರೆಗೂ ನಾಲ್ಕು ಪಥದ ರಸ್ತೆ ಕಾಮಗಾರಿ, ಕನಕಪುರ ಕ್ಷೇತ್ರದಲ್ಲಿ ನರೇಗಾ ಯೋಜನೆ ಸಮರ್ಪಕವಾಗಿ ಬಳಕೆ, ಜಿಲ್ಲೆಯ 1.10 ಲಕ್ಷ ರೈತರಿಗೆ ಕೇವಲ 25 ಸಾವಿರ ರು.ಗಳಿಗೆ ಟಿಸಿ ವಿತರಣೆ, ಸುಸಜ್ಜಿತ ಬಸ್ ನಿಲ್ದಾಣ ಸೇರಿದಂತೆ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು ನನ್ನ ವೆಬ್ ಸೈಟ್‌ನಲ್ಲಿ ಎಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ ಎಂಬುದರ ಬಗ್ಗೆ ಮಾಹಿತಿ ಬರುತ್ತದೆ. ಅದೇ ರೀತಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಹೆಚ್.ಡಿ.ದೇವೇಗೌಡರ ಅಭಿವೃದ್ಧಿ ಕೆಲಸವನ್ನು ತೋರಿಸಬೇಕು ಅಲ್ಲವೇ ಎಂದು ಡಿ.ಕೆ.ಸುರೇಶ್ ಪ್ರಶ್ನೆ ಮಾಡಿದರು.

1985ರಿಂದಲೂ ನನ್ನ ಸಹೋದರ ಡಿ.ಕೆ.ಶಿವಕುಮಾರ್ ಅವರನ್ನು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕುಟುಂಬದವರು ರಾಜಕೀಯವಾಗಿ ಯಾವ ರೀತಿ ಮುಗಿಸಬೇಕೆಂದು ಪ್ರಯತ್ನ ಮಾಡುತ್ತಿದ್ದರೂ, ರಾಜ್ಯದ ಜನತೆ ನಮ್ಮನ್ನು ಕೈ ಹಿಡಿದು ಬೆಳೆಸುತ್ತಿದ್ದಾರೆ. ರಿಪಬ್ಲಿಕ್ ಕನಕಪುರ ಅನ್ನುತ್ತಿದ್ದಾರೆ. ರಾಜ್ಯದಲ್ಲೇ ಅತ್ಯುತ್ತಮ ಮಾದರಿ ಜಿಲ್ಲೆಯಾಗಿ ಮಾಡಿ ತೋರಿಸುತ್ತೇವೆ. ರಾಮನಗರದ ಜನತೆ ಇವರನ್ನು ಒಮ್ಮೆ ಪ್ರಧಾನಮಂತ್ರಿ, ಎರಡು ಬಾರಿ ಮುಖ್ಯಮಂತ್ರಿ, ಅವರ ಪತ್ನಿಯನ್ನು ಶಾಸಕರನ್ನಾಗಿ ಮಾಡಿದ ಮೇಲೂ ಕಣ್ಣೀರೇಕೆ ಹಾಕಬೇಕು ಎಂದು ಎಚ್.ಡಿ.ಕುಮಾರಸ್ವಾಮಿ ಅವರನ್ನು ಸಂಸದ ಡಿ.ಕೆ.ಸುರೇಶ್ ಪ್ರಶ್ನಿಸಿದರು.

ನನಗೆ ಜೆಡಿಎಸ್ ಬಿಜೆಪಿ ಸರ್ಟಿಫಿಕೇಟ್ ಬೇಕಿಲ್ಲ. ಜನತೆಯೇ ನನಗೆ ಸರ್ಟಿಫಿಕೇಟ್ ನೀಡುತ್ತಾರೆ ನಾನು ಏನು ಅಭಿವೃದ್ಧಿ ಮಾಡಿದ್ದೇನೆ ಎಂಬುದು ಜನತೆಗೆ ಗೊತ್ತಿದೆ ಎಂದು ಡಿ.ಕೆ.ಸುರೇಶ್ ಹೇಳಿದರು.

ಇದೇ ವೇಳೆ ವಿವಿಧ ಪಕ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಮಾಜಿ ಸಚಿವ ಹೆಚ್.ಎಂ.ರೇವಣ್ಣ, ಶಾಸಕ ಬಾಲಕೃಷ್ಣ, ಎಂಎಲ್ಸಿಗಳಾದ ಸಿ.ಎಂ.ಲಿಂಗಪ್ಪ, ಎಸ್.ರವಿ, ಮಾಜಿ ಶಾಸಕ ರಾಜಣ್ಣ, ಕಾಂಗ್ರೆಸ್ ಮುಖಂಡರಾದ ಎಚ್. ಎಂ. ಕೃಷ್ಣಮೂರ್ತಿ, ಚಿಗಳೂರು ಗಂಗಾಧರ್, ಬಿಡದಿ ಪ್ರಾಧಿಕಾರದ ಅಧ್ಯಕ್ಷ ನಟರಾಜ್, ಮಾಗಡಿ ಪ್ರಾಧಿಕಾರದ ಅಧ್ಯಕ್ಷ ಕೆಂಚೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿಜಯಕುಮಾರ್, ಮಣಿಗಾನಹಳ್ಳಿ ಸುರೇಶ್, ಜೆ.ಪಿ.ಚಂದ್ರೇಗೌಡ, ನರಸಿಂಹಮೂರ್ತಿ, ಪೂಜಾರಿ ಪಾಳ್ಯ ಕೃಷ್ಣಮೂರ್ತಿ, ದೀಪ, ಶೈಲಜಾ ಮತ್ತಿತರರು ಭಾಗವಹಿಸಿದ್ದರು.

(ಲೀಡ್‌ ಬಾಕ್ಸ್‌ನಲ್ಲಿರುವ ಫೋಟೋ ಇದಕ್ಕೆ ಬಳಸಿ)