ಅಂಬರೀಷ್ ಅವರ ಅವಧಿಯಲ್ಲಿ ಮಾಡಿದ ಕೆಲಸಗಳಿಂದ ನನಗೆ ತೃಪ್ತ ಮನೋಭಾವ: ಸುಮಲತಾ

| Published : Dec 15 2024, 02:01 AM IST

ಅಂಬರೀಷ್ ಅವರ ಅವಧಿಯಲ್ಲಿ ಮಾಡಿದ ಕೆಲಸಗಳಿಂದ ನನಗೆ ತೃಪ್ತ ಮನೋಭಾವ: ಸುಮಲತಾ
Share this Article
  • FB
  • TW
  • Linkdin
  • Email

ಸಾರಾಂಶ

ಅಂಬರೀಶ್ ಅವರ ರೀತಿಯ ಮಾತಿನ ದಾಟಿ ದೇಶದಲ್ಲಿನ ಬೇರಾವ ರಾಜಕಾರಣಿಗೂ ಇರಲಿಲ್ಲ. ಆ ದಾಟಿಯಲ್ಲಿ ಪತ್ರಕರ್ತರೊಂದಿಗೆ ಬೇರೆ ರಾಜಕಾರಣಿ ಮಾತನಾಡಿದರೆ ಅವರ ಪ್ರತಿಕ್ರಿಯೆಯನ್ನು ಊಹೆಯೂ ಮಾಡಿಕೊಳ್ಳಲಾಗದು. ಅವರ ಮಾತಿನ ರೀತಿಯನ್ನು ಪ್ರೀತಿಯಿಂದ ಅರ್ಥ ಮಾಡಿಕೊಳ್ಳುತ್ತಿದ್ದ ಪತ್ರಕರ್ತರೊಂದಿಗೆ ಅಂಬರೀಶ್ ಅವರಿಗೆ ವಿಶೇಷವಾದ ಸಂಬಂಧವಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಹಿರಿಯ ನಟ, ಮಾಜಿ ಸಚಿವ ದಿ.ಅಂಬರೀಶ್ ಅವರ ಅವಧಿಯಲ್ಲಿ ಮಾಡಿದ ಕೆಲಸಗಳನ್ನು ಕೇಳಿ ತಿಳಿದಾಗ ತೃಪ್ತ ಮನೋಭಾವ ಮೂಡುತ್ತದೆ ಎಂದು ಮಾಜಿ ಸಂಸದೆ ಸುಮಲತಾ ಅಂಬರೀಶ್ ಹೇಳಿದರು.

ನಗರದ ಪತ್ರಕರ್ತರ ಭವನದಲ್ಲಿನ ಮೇಲಂತಸ್ಥಿನ ಕಟ್ಟಡಕ್ಕೆ ಅನುದಾನ ನೀಡಿದ ಹಿನ್ನೆಲೆ ಪತ್ರಕರ್ತರ ಸಂಘದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ಅಂಬರೀಶ್ ಅವರು ಸಣ್ಣ ಸಮುದಾಯ ಭವನದಿಂದ ಹಿಡಿದು ಬೃಹತ್ ಅಭಿವೃದ್ಧಿ ಕಾರ್ಯಗಳ ವರೆಗೂ ಕೆಲಸ ಮಾಡಿದ್ದಾರೆ. ಅವರ ಕೆಲಸದಲ್ಲಿ ಅಪೂರ್ಣತೆ ಇದ್ದ ಕೆಲ ಕಾಮಗಾರಿಗಳನ್ನು ಸಂಪೂರ್ಣಗೊಳಿಸುವ ನಿಟ್ಟಿನಲ್ಲಿ ನನ್ನ ಲೋಕಸಭಾ ಸದಸ್ಯೆ ಅವಧಿಯಲ್ಲಿ ಪ್ರಯತ್ನ ಮಾಡಿದ್ದೇನೆ ಎಂದರು.

ಅಂಬರೀಶ್ ಅವರು ಪತ್ರಕರ್ತರ ಸಂಘದ ಕಟ್ಟಡ ನಿರ್ಮಾಣಕ್ಕೆ ಮೊದಲು ಅನುದಾನ ನೀಡಿದ್ದು, ನನ್ನ ಲೋಕಸಭಾ ಸದಸ್ಯತ್ವದ ಅವಧಿಯ ಕೊನೆಯಲ್ಲಿ ಪತ್ರಕರ್ತರ ಸಂಘವು ಸಹಾಯ ಕೋರಿ ಬಂದಾಗ ಮೇಲಂತಸ್ಥಿನ ಕಟ್ಟಡಕ್ಕೆ ಅನುದಾನ ನೀಡಿದ್ದು ಸಂತಸ ತಂದಿದೆ ಎಂದರು.

ಅಂಬರೀಶ್ ಅವರ ರೀತಿಯ ಮಾತಿನ ದಾಟಿ ದೇಶದಲ್ಲಿನ ಬೇರಾವ ರಾಜಕಾರಣಿಗೂ ಇರಲಿಲ್ಲ. ಆ ದಾಟಿಯಲ್ಲಿ ಪತ್ರಕರ್ತರೊಂದಿಗೆ ಬೇರೆ ರಾಜಕಾರಣಿ ಮಾತನಾಡಿದರೆ ಅವರ ಪ್ರತಿಕ್ರಿಯೆಯನ್ನು ಊಹೆಯೂ ಮಾಡಿಕೊಳ್ಳಲಾಗದು. ಅವರ ಮಾತಿನ ರೀತಿಯನ್ನು ಪ್ರೀತಿಯಿಂದ ಅರ್ಥ ಮಾಡಿಕೊಳ್ಳುತ್ತಿದ್ದ ಪತ್ರಕರ್ತರೊಂದಿಗೆ ಅಂಬರೀಶ್ ಅವರಿಗೆ ವಿಶೇಷವಾದ ಸಂಬಂಧವಿದೆ ಎಂದರು.

ಅಧಿಕಾರ ಇರಲಿ, ಇಲ್ಲದಿರಲಿ, ಪತ್ರಕರ್ತರ ಸಂಘಕ್ಕೆ ಕಡೆಗೆ ನಮ್ಮ ಸಹಕಾರ ಎಂದಿಗೂ ಇರುತ್ತದೆ. ಇದಕ್ಕೆ ಅಂಬರೀಶ್ ಅವರೊಂದಿಗೆ ಪತ್ರಕರ್ತರು ಹೊಂದಿದ್ದ ಪ್ರೀತಿ, ವಿಶ್ವಾಸವನ್ನು ನಿಭಾಯಿಸಿಕೊಂಡು ಮುನ್ನಡೆಸುತ್ತೇನೆ. ನನ್ನ ಕೈಲಾದ ಸಹಕಾರವನ್ನು ಪತ್ರಕರ್ತರಿಗೆ ನೀಡುತ್ತೇನೆ ಎಂದು ಭರವಸೆ ನೀಡಿದರು.

ಈ ವೇಳೆ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಪಿ.ಪ್ರಕಾಶ್, ರಾಜ್ಯ ಕಾರ್ಯದರ್ಶಿ ಸೋಮಶೇಖರ್ ಕೆರಗೋಡು, ಮಾಜಿ ಅಧ್ಯಕ್ಷ ಪಿ.ಜೆ.ಚೈತನ್ಯಕುಮಾರ್, ಉಪಾಧ್ಯಕ್ಷ ನವೀನ್‌ಕುಮಾರ್, ಖಜಾಂಚಿ ನಂಜುಂಡಸ್ವಾಮಿ, ಬಾಲಕೃಷ್ಣ ಸೇರಿದಂತೆ ಇತರರಿದ್ದರು.