ನಾನು ಕಾಂಗ್ರೆಸ್ಸಿಗೆ ಸೇರಿಲ್ಲ, ಇಂದಿಗೂ ಜೆಡಿಎಸ್ ಕಾರ್ಯಕರ್ತ: ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷ ಸ್ಪಷ್ಟನೆ

| Published : Mar 29 2024, 12:51 AM IST

ನಾನು ಕಾಂಗ್ರೆಸ್ಸಿಗೆ ಸೇರಿಲ್ಲ, ಇಂದಿಗೂ ಜೆಡಿಎಸ್ ಕಾರ್ಯಕರ್ತ: ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷ ಸ್ಪಷ್ಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಇತ್ತೀಚೆಗೆ ಕೆ.ಎಂ.ಗಣೇಶ್, ಕಾಂಗ್ರೆಸ್ ಪರ ಮತಪ್ರಚಾರ ಮಾಡುತ್ತಿದ್ದಾರೆ ಎಂದು ಕೆಲವು ಕಾಂಗ್ರೆಸ್ ಮುಖಂಡರು ಪ್ರಚಾರ ಮಾಡುತ್ತಿದ್ದಾರೆ, ಇದು ಸರಿಯಲ್ಲ. ಈ ಹಿಂದೆ ಕಾಂಗ್ರೆಸ್ ಸೇರ್ಪಡೆ ಎಂದು ಚುನಾವಣೆ ಸಂದರ್ಭ ಕೆಲಸ ಮಾಡಿಸಿಕೊಂಡಿದ್ದಾರೆ. ನಂತರ ಮೂಲೆಗುಂಪು ಮಾಡಿದ್ದಾರೆ. ಕಾಂಗ್ರೆಸ್ ಎಂದಿಗೂ ಎಲ್ಲರನ್ನು ಒಟ್ಟಿಗೆ ಹೊಂದಾಣಿಕೆ ಮಾಡಿಕೊಂಡು ಸಾಗುವುದಿಲ್ಲ. ಒಟ್ಟಿಗೆ ಸೇರಿಸುವ ಶಕ್ತಿಯೂ ಕಾಂಗ್ರೆಸ್ಸಿಗಿಲ್ಲ ಎಂದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕಳೆದ ವಿಧಾನಸಭಾ ಚುನಾವಣೆ ಸಂದರ್ಭ ಕಾಂಗ್ರೆಸ್ ಪರ ಕೆಲಸ ಮಾಡಿದ್ದು ನಿಜ, ಆದರೆ ಎಂದಿಗೂ ಕಾಂಗ್ರೆಸ್ ಸೇರ್ಪಡೆಯಾಗುವುದಿಲ್ಲ. ನಾನು ಇಂದಿಗೂ ಜೆಡಿಎಸ್ ಕಾರ್ಯಕರ್ತನಾಗಿದ್ದು, ತಟಸ್ಥವಾಗಿರುತ್ತೇನೆ ಎಂದು ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಸ್ಪಷ್ಟಪಡಿಸಿದ್ದಾರೆ.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯಿಂದ ಕೆಲಸಗಳು, ಅಭಿವೃದ್ಧಿಯಾಗದ ಪರಿಣಾಮ ಅಂದು ಕಾಂಗ್ರೆಸ್‌ನೊಂದಿಗೆ ಕೈಜೋಡಿಸುವ ಪರಿಸ್ಥಿತಿ ನಿರ್ಮಾಣವಾಯಿತು. ಇದರ ಭಾಗವಾಗಿ ಅಂದು ಡಿ.ಕೆ.ಶಿವಕುಮಾರ್‌ ಕೂಡ ತಮ್ಮ ಕಚೇರಿಗೆ ಕರೆಸಿ, ಶಾಲು ಹೊದಿಸಿ, ನೀವು ಏಕಾಏಕಿ ಕಾಂಗ್ರೆಸ್ ಸೇರ್ಪಡೆಯಾಗಿದ್ದೀರಿ ಎಂದು ಹೇಳಿದರು. ಆ ಸಂದರ್ಭ ನನಗೂ ಏನು ಉತ್ತರ ನೀಡಲಾಗಲಿಲ್ಲ. ನಂತರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಕೆಲಸ ಮಾಡಿದ್ದೇವೆ. ಇದರಿಂದ ಜೆಡಿಎಸ್‌ನ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಿದ್ದೇನೆ. ಆದರೆ, ಜೆಡಿಎಸ್‌ನಲ್ಲಿ ಕಾರ್ಯಕರ್ತನಾಗಿ ಮುಂದುವರಿದಿದ್ದು, ಕಾಂಗ್ರೆಸ್ ಸೇರ್ಪಡೆಯಾಗಿಲ್ಲ. ತಟಸ್ಥವಾಗಿರುತ್ತೇನೆ ಎಂದು ಹೇಳಿದರು.ಇತ್ತೀಚೆಗೆ ಕೆ.ಎಂ.ಗಣೇಶ್, ಕಾಂಗ್ರೆಸ್ ಪರ ಮತಪ್ರಚಾರ ಮಾಡುತ್ತಿದ್ದಾರೆ ಎಂದು ಕೆಲವು ಕಾಂಗ್ರೆಸ್ ಮುಖಂಡರು ಪ್ರಚಾರ ಮಾಡುತ್ತಿದ್ದಾರೆ, ಇದು ಸರಿಯಲ್ಲ. ಈ ಹಿಂದೆ ಕಾಂಗ್ರೆಸ್ ಸೇರ್ಪಡೆ ಎಂದು ಚುನಾವಣೆ ಸಂದರ್ಭ ಕೆಲಸ ಮಾಡಿಸಿಕೊಂಡಿದ್ದಾರೆ. ನಂತರ ಮೂಲೆಗುಂಪು ಮಾಡಿದ್ದಾರೆ. ಕಾಂಗ್ರೆಸ್ ಎಂದಿಗೂ ಎಲ್ಲರನ್ನು ಒಟ್ಟಿಗೆ ಹೊಂದಾಣಿಕೆ ಮಾಡಿಕೊಂಡು ಸಾಗುವುದಿಲ್ಲ. ಒಟ್ಟಿಗೆ ಸೇರಿಸುವ ಶಕ್ತಿಯೂ ಕಾಂಗ್ರೆಸ್ಸಿಗಿಲ್ಲವೆಂದರು.ಕೊಡಗು ಜೆಡಿಎಸ್ ಮಾಜಿ ಸಂಘಟನಾ ಕಾರ್ಯದರ್ಶಿ ಗಣೇಶ್, ಮಾಜಿ ಖಜಾಂಚಿ ಡೆನ್ನಿಬರೋಸ್, ಮಾಜಿ ಕಾರ್ಯದರ್ಶಿ ಸುನೀಲ್, ಮಾಜಿ ಸದಸ್ಯರಾದ ಜಗನ್ ಸುದ್ದಿಗೋಷ್ಠಿಯಲ್ಲಿದ್ದರು.