ಕೆಲವೊಂದು ಸಂದರ್ಭದಲ್ಲಿ ಸರ್ಕಾರ ರಚನೆ ವಿಚಾರದಲ್ಲಿ ಆಯಾ ರಾಜ್ಯದ ರಾಜ್ಯಪಾಲರು ಅವರದ್ದೇ ಆದ ಕಾನೂನು ಪಂಡಿತರ ಸಲಹೆ ಮೇರೆಗೆ ನಿರ್ಧಾರವನ್ನು ತೆಗೆದುಕೊಂಡಿದ್ದನ್ನು ಕಂಡಿದ್ದೇವೆ. ಅವರು ಸ್ಪಷ್ಟ ಬಹುಮತದ ಸಂಖ್ಯೆ ಸ್ಪಷ್ಟಪಡಿಸಿ ಎಂದಿದ್ದಾರೆ. ಡಿಎಂಕೆ-ಎಐಎಡಿಎಂಕೆ ಎರಡು ಪಕ್ಷಗಳು ಸೇರಿ ಸರ್ಕಾರ ಮಾಡುವುದನ್ನು ನಾನಂತೂ ನಿರೀಕ್ಷೆ ಮಾಡಲ್ಲ. ಅದೆಲ್ಲಾ ಉಹಾಪೋಹ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. ತಮಿಳುನಾಡಿನಲ್ಲಿ ಸ್ವಲ್ಪ ಸಿನಿಮಾದ ಪ್ರಭಾವಕ್ಕೆ ಒಳಗಾಗುತ್ತಾರೆ, ಹಲವಾರು ಸಂದರ್ಭದಲ್ಲಿ ನಡೆದಿದೆ, ಈಗಲೂ ನಡೆದಿದೆ. ಒಂದು ಹೊಸ ಮುಖ, ವ್ಯಕ್ತಿ ಅಧಿಕಾರ ಕೊಡಬೇಕು ಎಂದು ಕೊಟ್ಟಿದ್ದಾರೆ ಎಂದರು.
ಕನ್ನಡಪ್ರಭ ವಾರ್ತೆ ಹೊಳೆನರಸೀಪುರಕೆಲವೊಂದು ಸಂದರ್ಭದಲ್ಲಿ ಸರ್ಕಾರ ರಚನೆ ವಿಚಾರದಲ್ಲಿ ಆಯಾ ರಾಜ್ಯದ ರಾಜ್ಯಪಾಲರು ಅವರದ್ದೇ ಆದ ಕಾನೂನು ಪಂಡಿತರ ಸಲಹೆ ಮೇರೆಗೆ ನಿರ್ಧಾರವನ್ನು ತೆಗೆದುಕೊಂಡಿದ್ದನ್ನು ಕಂಡಿದ್ದೇವೆ. ಅವರು ಸ್ಪಷ್ಟ ಬಹುಮತದ ಸಂಖ್ಯೆ ಸ್ಪಷ್ಟಪಡಿಸಿ ಎಂದಿದ್ದಾರೆ. ಡಿಎಂಕೆ-ಎಐಎಡಿಎಂಕೆ ಎರಡು ಪಕ್ಷಗಳು ಸೇರಿ ಸರ್ಕಾರ ಮಾಡುವುದನ್ನು ನಾನಂತೂ ನಿರೀಕ್ಷೆ ಮಾಡಲ್ಲ. ಅದೆಲ್ಲಾ ಉಹಾಪೋಹ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.ತಾಲೂಕಿನ ಹಳೇಕೋಟೆಯ ಬೆಟ್ಟದ ಶ್ರೀ ರಂಗನಾಥಸ್ವಾಮಿ ದೇವಾಲಯದಲ್ಲಿ ಶುಕ್ರವಾರ ಪೂಜೆ ಸಲ್ಲಿಸಿ ಮಾತನಾಡಿದರು. ವಿಜಯ್ ಅವರು ಸಹ ಬಹುಮತ ಸಾಬೀತುಪಡಿಸಲು ಪ್ರಯತ್ನ ಮಾಡುತ್ತಿದ್ದಾರೆ ಮತ್ತು ಎರಡು ದಿನದಲ್ಲಿ ಅಸ್ಪಷ್ಟತೆ ಸರಿಪಡಿಸುವ ಸಾಧ್ಯತೆ ಇದೆ. ಜತೆಗೆ ಸ್ಟಾಲಿನ್ ಅವರು ಆರು ತಿಂಗಳು ಸರ್ಕಾರ ನಡೆಸಲಿ ತೊಂದರೆ ಕೊಡಲ್ಲ ಎಂದಿದ್ದಾರೆ. ಟಿವಿಕೆಗೆ ಕಾಂಗ್ರೆಸ್ ಬೆಂಬಲ ಕುರಿತು ಮಾತನಾಡಿ, ಕಾಂಗ್ರೆಸ್ ಪಕ್ಷದ ನಡವಳಿಕೆ ಬಗ್ಗೆ ಸಾಕಷ್ಟು ಕಂಡಿದ್ದೇವೆ, ಕಾಂಗ್ರೆಸ್ ಪಕ್ಷ ಯಾವ್ಯಾವ ಸಂದರ್ಭದಲ್ಲಿ, ಯಾವ್ಯಾವ್ಯ ರೀತಿ ಸರ್ಕಾರಗಳನ್ನು ಅಸ್ಥಿರಗೊಳಿಸಿದ್ದಾರೆ. ಕೇಂದ್ರದಲ್ಲಿದ್ದಂತಹ ಚರಣ್ ಸಿಂಗ್ ಅವರಿಂದ ಪ್ರಾರಂಭವಾಗಿ ವಿಪಿ ಸಿಂಗ್, ಚಂದ್ರಶೇಖರ್, ಅದೇ ರೀತಿ ದೇವೇಗೌಡರು ಅಧಿಕಾರದಲ್ಲಿದ್ದಾಗ ಯಾವ ಕಾರಣಗಳನ್ನು ಕೊಟ್ಟು ಸರ್ಕಾರ ತೆಗೆದರು. ಕಾಂಗ್ರೆಸ್‌ನಲ್ಲಿ ಅವರಿಗೆ ಬೇಕಾದ ರೀತಿಯಲ್ಲಿ ತೀರ್ಮಾನ ಮಾಡುವ ಹಲವಾರು ಉಧಾಹರಣೆಗಳನ್ನು ಕೊಡಬಹುದು. ಇವತ್ತು ಡಿಎಂಕೆ ಜೊತೆ ಇಪ್ಪತ್ತು ವರ್ಷದ ಸಂಬಂಧ ಕಡಿದು ವಿಜಯ್ ಅವರ ಜೊತೆ ಸೇರಿದ್ದಾರೆ. ಅವರ ಪಕ್ಷದ ಮುಂದಿನ ಭವಿಷ್ಯದ ದೃಷ್ಟಿಯಿಂದ ತೀರ್ಮಾನ ತೆಗೆದುಕೊಂಡಿದ್ದಾರೆ. ಅದರ ಬಗ್ಗೆ ನಾನೇಕೆ ಚರ್ಚೆ ಮಾಡಲಿ. ಕಾಲ ಅದಕ್ಕೆ ಉತ್ತರ ಕೊಡುತ್ತದೆ ಎಂದರು. ಗ್ಯಾರಂಟಿ ನೀಡಲು ೬ರಿಂದ ೭ ಲಕ್ಷ ಕೋಟಿ ಬೇಕು:
ತಮಿಳುನಾಡಿನಲ್ಲಿ ನಾನಂತೂ ನಿರೀಕ್ಷೆ ಮಾಡಿದ್ದೆ, ಒಂದು ತಿಂಗಳ ಹಿಂದೆ ನಮ್ಮ ಸ್ನೇಹಿತರಿಗೆ ಹೇಳಿದ್ದೆ. ಕಳೆದ ಐವತ್ತು ವರ್ಷಗಳಿಂದ ಎರಡು ದ್ರಾವಿಡ ಪಕ್ಷಗಳ ಆಡಳಿತ ಏನೆಂದು ಅಲ್ಲಿಯ ಜನ ನೋಡಿದ್ರು, ಆದ್ದರಿಂದ ಒಂದು ಹೊಸ ವ್ಯವಸ್ಥೆ ತರಲು ಜನಸಾಮಾನ್ಯರು ನಿರ್ಧಾರ ಮಾಡ್ತಾರೆ ಎನ್ನುವ ನಿರೀಕ್ಷೆ ಇಟ್ಟಿದ್ದೆ ಎಂದರು. ತಮಿಳುನಾಡಿನಲ್ಲಿ ಸ್ವಲ್ಪ ಸಿನಿಮಾದ ಪ್ರಭಾವಕ್ಕೆ ಒಳಗಾಗುತ್ತಾರೆ, ಹಲವಾರು ಸಂದರ್ಭದಲ್ಲಿ ನಡೆದಿದೆ, ಈಗಲೂ ನಡೆದಿದೆ. ಒಂದು ಹೊಸ ಮುಖ, ವ್ಯಕ್ತಿ ಅಧಿಕಾರ ಕೊಡಬೇಕು ಎಂದು ಕೊಟ್ಟಿದ್ದಾರೆ. ಉಚಿತ ಗ್ಯಾರಂಟಿಗಳ ಬಗ್ಗೆ ದೇವರು ಕಾಪಾಡಬೇಕು, ವಿಜಯ್ ಅವರಿಗೆ ಯಾರು ಉಚಿತ ಗ್ಯಾರಂಟಿಗಳನ್ನು ಘೋಷಣೆ ಮಾಡಲು ಯಾರು ಪ್ರಭಾವ ಬೀರಿದ್ರೊ ಗೊತ್ತಿಲ್ಲ, ಅಲ್ಲಿಯ ಬಜೆಟ್ ವರ್ಷಕ್ಕೆ ೩.೪೦ ಲಕ್ಷ ಕೋಟಿ ಇದೆ ಮತ್ತು ಅವರ ಉಚಿತ ಗ್ಯಾರಂಟಿಗಳನ್ನು ನೀಡಲು ೬ ರಿಂದ ೭ ಲಕ್ಷ ಕೋಟಿ ಬೇಕು ಎಂದು ತಿಳಿಸಿ, ಅದ್ಯಾವ ತರ ಹಣ ಹೊಂದಿಸುತ್ತಾರೆ ಕಾದು ನೋಡಬೇಕು ಎಂದು ಮಾರ್ಮಿಕವಾಗಿ ನುಡಿದರು. ಈಗೀನ ಪಂಚರಾಜ್ಯಗಳ ಫಲಿತಾಂಶವನ್ನು ಬಹಳ ಜನ ನಿರೀಕ್ಷೆ ಮಾಡಿದ್ರುಆದರೆ ತಮಿಳುನಾಡಿನಲ್ಲಿ ಡಿಎಂಕೆ ಬರುತ್ತೆ ಅಂಥ ಮಾಧ್ಯಮಗಳಲ್ಲಿ ಬರುತ್ತಿತ್ತು, ಆದರೆ ಯಾರೂ ಸಹ ವಿಜಯ್ ಅವರ ಈಗೀನ ಸಾಧನೆಯನ್ನು ನಿರೀಕ್ಷೆ ಮಾಡಿರಲಿಲ್ಲ, ಅದೊಂದು ಮಾತ್ರ ಎಲ್ಲರಿಗೂ ಅಚ್ಚರಿ ಉಂಟು ಮಾಡಿದೆ ಎಂದರು.
ಶೃಂಗೇರಿ ಮರುಎಣಿಕೆ ಸಂಬಂಧ ಪ್ರತಿಕ್ರಿಯಿಸಿ, ಎಫ್‌ಐಆರ್ ಆಗಿದೆ, ರಾಜೇಗೌಡ್ರು ಚುನಾವಣೆ ಆಯೋಗಕ್ಕೆ ಮತ್ತೊಂದು ದೂರು ಕೊಟ್ಟಿದ್ದಾರೆ. ಏನೇನು ಬೆಳವಣಿಗೆ ಆಗುತ್ತೆ ಅಂಥ ಮುಂದೆ ನೋಡೋಣ. ಈಗಿನ ಪರಿಸ್ಥಿತಿಯಲ್ಲಿ ಓಟ್ ಚೋರಿ ಬಗ್ಗೆ ಚರ್ಚೆ ಮಾಡ್ತರಲ್ಲಾ ಅದಕ್ಕೆ ಯಾವುದೇ ಅರ್ಥ ಇಲ್ಲ. ಓಟ್ ಚೋರಿ ಬಗ್ಗೆ ಚರ್ಚೆ ಮಾಡುವ ನೈತಿಕತೆಯೂ ಇಲ್ಲ. ಕರ್ನಾಟಕದಲ್ಲಿ ಮುಂದಿನ ಚುನಾವಣೆಯಲ್ಲಿ ಬದಲಾವಣೆ ಆಗಬಹುದು ಎಂಬುದು ಜನಸಾಮಾನ್ಯರ ಚರ್ಚೆ ಇದೆ. ಕಾದು ನೋಡೋಣ ಏನೇನು ಆಗುತ್ತೆ ಅಂಥ ಮತ್ತು ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳು ಸ್ವತಂತ್ರವಾಗಿ ಅಧಿಕಾರಕ್ಕೆ ಬರುವ ವಾತಾವರಣ ಇಲ್ಲ, ಇಲ್ಲಿಯ ರಾಜಕಾರಣಕ್ಕೂ, ಬೇರೆ ರಾಜ್ಯಗಳ ರಾಜಕಾರಣಕ್ಕೂ ಬಹಳಷ್ಟು ವ್ಯತ್ಯಾಸವಿದೆ ಎಂದರು.ದೀದಿಯದ್ದು ಬಾಲಿಶ ಹೇಳಿಕೆ:ಇಡಿ, ಐಟಿ ದುರುಪಯೋಗ ಎಂಬ ಕಾಂಗ್ರೆಸ್ ಆರೋಪ ಸಂಬಂಧ ಕೇಳಿದ ಪ್ರಶ್ನೆಗೆ ಉತ್ತರಿಸಿ, ಅವರಿಗೆ ಬೇಕಾದಂತೆ ಕಾಂಗ್ರೆಸ್‌ನವರು ವ್ಯಾಖ್ಯಾನ ಮಾಡ್ತಾರೆ, ಅವರಿಗೆ ಬೇಕಾದಾಗ ಚೆನ್ನಾಗಿದೆ ಅಂತರೆ, ಸೋತಾಗ ಚೆನ್ನಾಗಿಲ್ಲ ಅಂತಾರೆ, ಪಶ್ಚಿಮ ಬಂಗಾಳದಲ್ಲಿ ಸ್ಪಷ್ಟ ಬಹುಮತ ಬಂದಿದೆ ಎಂದು ಎಲೆಕ್ಷನ್ ಕಮಿಷನ್‌ನಿಂದ ಘೋಷಣೆ ಆದ ಮೇಲೆ ಮುಗಿತು, ಮಮತಾ ಬ್ಯಾನರ್ಜಿಯವರು ರಾಜೀನಾಮೆ ಕೊಡಲ್ಲ ಎನ್ನುವುದು ಬಾಲಿಶವಾದ ಹೇಳಿಕೆ, ಆ ರೀತಿಯ ವಾತಾವರಣ ನಮ್ಮ ಸಂವಿಧಾನದಲ್ಲಿ ಇಲ್ಲ ಮದು ಮಮತ ಬ್ಯಾನರ್ಜಿ ವರ್ತನೆಗೆ ಬೇಸರ ವ್ಯಕ್ತಪಡಿಸಿದರು.ಯಡಿಯೂರಪ್ಪ ಅವರ ಅಭಿಮಾನೋತ್ಸವ ಕಾರ್ಯಕ್ರಮ ವಿಚಾರದಲ್ಲಿ ಮಾತನಾಡಿ, ಯಡಿಯೂರಪ್ಪ ಅವರ ಐವತ್ತು ವರ್ಷದ ಸಾಧನೆ ಬಗ್ಗೆ, ರಾಜ್ಯಕ್ಕೆ ಕೊಟ್ಟಿರುವ ಕೊಡುಗೆ ಬಗ್ಗೆ ಬಿಜೆಪಿ ಪಕ್ಷದಿಂದ ಕಾರ್ಯಕ್ರಮ ನಡೀತಿದೆ ಮತ್ತು ಬೇರೆ ಕಾರ್ಯಕ್ರಮ ಇರುವುದರಿಂದ ಹೋಗ್ತಾ ಇಲ್ಲ ಎಂದು ತಿಳಿಸಿದರು.