ತಮಗೆ ಮೋದಿ ಕಾರ್ಯಕ್ರಮಕ್ಕೆ ಆಹ್ವಾನವನ್ನು ಯಾರು ಯಾಕೆ ತಪ್ಪಿಸಿದರು ಗೊತ್ತಿಲ್ಲ, ತಮಗೆ ಆಹ್ವಾನ ಬಾರದಿರಲು ಬಿಜೆಪಿಯಾಗಲಿ, ಪುತ್ತಿಗೆ ಮಠವಾಗಲಿ ಕಾರಣವಲ್ಲ, ಒಂದು ವೇಳೆ ಯಾರಾದರೂ ರಾಜಕೀಯ ಕಾರಣಕ್ಕೆ ತಪ್ಪಿಸಿದ್ದರೆ ಅದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಸ್ಪಷ್ಟಪಡಿಸಿದ್ದಾರೆ.
ಉಡುಪಿ: ಉಡುಪಿ ಷ್ಣಮಠದ ಕನಕನ ಕಿಂಡಿಗೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಚಿನ್ನದ ಲೇಪನ ಮಾಡಿಸಿದ್ದು, ಇದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದರು. ಆದರೆ ಈ ಕಾರ್ಯಕ್ರಮಕ್ಕೆ ಸೇವಾಕರ್ತ ಪ್ರಮೋದ್ ಮಧ್ವರಾಜ್ ಅವರಿಗೆ ಆಹ್ಪಾನ ಇರಲಿಲ್ಲ. ಇದೀಗ ಇದು ತೀವ್ರ ವಿವಾದಕ್ಕೆ ಕಾರಣವಾಗಿದೆ.
ಸೋಮವಾರ ಈ ಬಗ್ಗೆ ಸುದ್ದಿಗೋಷ್ಠಿ ಕರೆದು ಪ್ರಮೋದ್ ಮಧ್ವರಾಜ್ ಸ್ವಷ್ಟೀಕರಣ ನೀಡಿದ್ದಾರೆ. ಆದರೆ ತಮಗೆ ಮೋದಿ ಕಾರ್ಯಕ್ರಮಕ್ಕೆ ಆಹ್ವಾನವನ್ನು ಯಾರು ಯಾಕೆ ತಪ್ಪಿಸಿದರು ಗೊತ್ತಿಲ್ಲ, ತಮಗೆ ಆಹ್ವಾನ ಬಾರದಿರಲು ಬಿಜೆಪಿಯಾಗಲಿ, ಪುತ್ತಿಗೆ ಮಠವಾಗಲಿ ಕಾರಣವಲ್ಲ, ಒಂದು ವೇಳೆ ಯಾರಾದರೂ ರಾಜಕೀಯ ಕಾರಣಕ್ಕೆ ತಪ್ಪಿಸಿದ್ದರೆ ಅದು ಒಳ್ಳೆಯ ಬೆಳವಣಿಗೆಯಲ್ಲ ಎಂದವರು ಹೇಳಿದರು.ಮೂರು ಬಾರಿ ತಮ್ಮ ಆಧಾರ್ ಕಾರ್ಡ್ ಮತ್ತು ಫೋಟೋಗಳನ್ನು ತೆಗೆದುಕೊಂಡಿದ್ದರು. ಆದ್ದರಿಂದ ತಮಗೆ ಚಿನ್ನದ ಕನಕನ ಕಿಂಡಿ ಉದ್ಘಾಟನೆಗೆ ಆಹ್ವಾನ ಇರುತ್ತದೆ ಎಂದು ನಿರೀಕ್ಷೆ ಮಾಡಿದ್ದೆ, ಮತ್ತು ಬಿಜೆಪಿಯಿಂದ ಪಾಸ್ ನೀಡಲು ಸಿದ್ದರಿದ್ದರೂ ಮಠದಿಂದ ಆಹ್ವಾನ ಬರುತ್ತದೆ, ಆದ್ದರಿಂದ ಪಾಸ್ ಬೇಡ ಎಂದಿದ್ದೆ. ಆದರೆ ತನಗೆ ಆಹ್ವಾನ ಬಂದಿಲ್ಲ. ಆದರೂ ಬೇಸರ ಇಲ್ಲ ಎಂದರು.ಮಠದ ವೇದಿಕೆಯಲ್ಲಿ ಬಿಜೆಪಿ ನಾಯಕರು ಯಾಕೆ ಇರಬೇಕಾಗಿತ್ತು ? ಮಠದ ಕಾರ್ಯಕ್ರಮವನ್ನು ಬಿಜೆಪಿ ಹೈಜಾಕ್ ಮಾಡಿದೆ ಎಂಬ ಆರೋಪಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷರು, ಮಠದ ಕಾರ್ಯಕ್ರಮದ ಮೇಲೆ ತಮಗೆ ನಿಯಂತ್ರಣ ಇರಲಿಲ್ಲ, ವೇದಿಕೆ ಮೇಲೆ ಯಾರಿರಬೇಕು ಎಂದು ಮಠದವರೇ ನಿರ್ಧರಿಸಿ ಪ್ರಧಾನಿ ಕಚೇರಿಗೆ ಹೆಸರುಗಳನ್ನು ಕಳುಹಿಸಿದ್ದರು ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿಗಳಾದ ದಿನಕರ ಶೆಟ್ಟಿ ಹೆರ್ಗ, ರೇಷ್ಮಾ ಉದಯ ಶೆಟ್ಟಿ, ಶ್ರೀಕಾಂತ ನಾಯಕ್, ಕಾರ್ಯದರ್ಶಿ ಶ್ರೀನಿಧಿ ಹೆಗ್ಡೆ ಉಪಸ್ಥಿತರಿದ್ದರು.