ನಾನು ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದಲ್ಲಿ ಹಿಂದಿ ‍ವಿಷಯ (ಭಾಷೆ) ಸರಿಯಾಗಿ ಕಲಿಯದೆ ಇರುವುದರಿಂದ ಸಚಿವನಾಗಿ ದೆಹಲಿಗೆ ತೆರಳಿದಾಗ ಅಲ್ಲಿ ಭಾಷಾ ತೊಂದರೆ ಅನುಭವಿಸುವಂತಾಗಿದೆ. ಈಗಿನ ವಿದ್ಯಾರ್ಥಿಗಳು ಮಾತೃಭಾಷೆ ಜೊತೆಗೆ ಇತರೆ ಭಾಷೆ ಕಲಿಯಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕನ್ನಡಪ್ರಭ ವಾರ್ತೆ ಮುಧೋಳ

ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತಿ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಾರ್ಯಾಲಯ ಬಾಗಲಕೋಟೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮತ್ತು ಸಮನ್ವಯಾಧಿಕಾರಿಗಳ ಕಾರ್ಯಾಲಯ, ಕೆ.ಆರ್.ಲಕ್ಕಂ ವಿದ್ಯಾಸಂಸ್ಥೆ ಮುಧೋಳ ಇವರ ಸಹಯೋಗದಲ್ಲಿ ಸೋಮವಾರ ನಗರದ ಕೆ.ಆರ್. ಲಕ್ಕಂ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ 2025-26ನೇ ಸಾಲಿನ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿ ಜೀವನ ಬಂಗಾರದ ಜೀವನ. ಇದನ್ನು ಎಂದಿಗೂ ವ್ಯರ್ಥ ಮಾಡಿಕೊಳ್ಳಬೇಡಿ. ಶಿಕ್ಷಕರು ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಗುರುತಿಸಿ ಅವರಿಗೆ ಸೂಕ್ತ ಅವಕಾಶ ಕಲ್ಪಿಸಿ, ಪ್ರೊತ್ಸಾಹ ನೀಡಿ, ಪ್ರಿತಿ, ವಿಶ್ವಾಸ ಮತ್ತು ಮಮತೆಯಿಂದ ಕಾಣಬೇಕು. ವಿದ್ಯಾರ್ಥಿಗಳಿಗೆ ಸಂಸ್ಕೃತಿ ಮತ್ತು ಸಂಸ್ಕಾರ ಕಲಿಸಬೇಕು. ವಿದ್ಯಾರ್ಥಿಗಳು ತಾಯಿ, ತಂದೆ ಮತ್ತು ಶಿಕ್ಷಕರನ್ನು ಗೌರವದಿಂದ ಕಾಣಬೇಕು ಮತ್ತು ಕಲಿಯುವಂತ ಸಂದರ್ಭದಲ್ಲಿ ಚೆನ್ನಾಗಿ ಕಲಿಯಬೇಕು. ಶಿಕ್ಷಕರು ಮಕ್ಕಳಲ್ಲಿರುವ ಅದ್ಬುತ ಕಲಾ ಪ್ರತಿಭಾ ಶಕ್ತಿಗುರುತಿಸಿ ಬೆಂಬಲಿಸಬೇಕು, ಜಾತೀಯತೆ ಮತ್ತು ಧರ್ಮಾಂಧತೆಯಿಂದ ದೂರ ಇರುವಂತೆ ಮಕ್ಕಳಿಗೆ ತಿಳಿ ಹೇಳಬೇಕೆಂದರು.

ಡಿಡಿಪಿಐ ಎ.ಸಿ.ಮನ್ನಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಬಿಇಒ ಎಸ್.ಎಮ್.ಮುಲ್ಲಾ ಸ್ವಾಗತಿಸಿದರು, ದುಂಡಪ್ಪ ಲಕ್ಕಂ, ಎ.ಆರ್.ಲಕ್ಕಂ, ಡಾ.ಮೋಹನ ಬಿರಾದಾರ, ಅಶೋಕ ಕಿವಡಿ, ಸುನಂದಾ ಲಕ್ಕಂ ಸೇರಿದಂತೆ ಇತರರು ವೇದಿಕೆ ಮೇಲೆ ಉಪಸ್ಥಿತರಿರುವರು.