ಟ್ಯೂನಿಷಿಯದಲ್ಲಿ ಐ-ಫೆಸ್ಟ್: ಆಳ್ವಾಸ್ ವಿದ್ಯಾರ್ಥಿಗೆ ಬಹುಮಾನ

| Published : Apr 03 2024, 01:32 AM IST

ಟ್ಯೂನಿಷಿಯದಲ್ಲಿ ಐ-ಫೆಸ್ಟ್: ಆಳ್ವಾಸ್ ವಿದ್ಯಾರ್ಥಿಗೆ ಬಹುಮಾನ
Share this Article
  • FB
  • TW
  • Linkdin
  • Email

ಸಾರಾಂಶ

ಸೈನ್ಸ್ ಸೊಸೈಟಿ ಆಫ್ ಇಂಡಿಯಾ ವತಿಯಿಂದ ನಡೆದ ವಿಜ್ಞಾನ ಮೇಳದಲ್ಲಿ ಗೆಲ್ಲುವುದರ ಮೂಲಕ ಅಮೋಘ ಹೆಬ್ಬಾರ್ ಅಂತರಾಷ್ಟ್ರೀಯ ಮಟ್ಟದ ಈ ಸಮ್ಮೇಳನಕ್ಕೆ ಆಯ್ಕೆಯಾಗಿದ್ದರು.

ಮೂಡುಬಿದಿರೆ: ಇತ್ತೀಚಿಗೆ ಆಫ್ರಿಕಾದ ಟ್ಯೂನಿಷಿಯ ದೇಶದಲ್ಲಿ ಜರುಗಿದ ಅಂತರಾಷ್ಟ್ರೀಯ ಮಟ್ಟದ ಹಾಗೂ ಆಫ್ರಿಕಾದ ಅತೀ ದೊಡ್ಡ ವಿಜ್ಞಾನ ಎಂಜಿನಿಯರಿಂಗ್ ತಂತ್ರಜ್ಞಾನ ಸಮ್ಮೇಳನ ಐ-ಫೆಸ್ಟ್ ೨೦೨೪ರಲ್ಲಿ ಮೂಡುಬಿದಿರೆಯ ಆಳ್ವಾಸ್ ಸೆಂಟ್ರಲ್ ಸ್ಕೂಲ್ ವಿದ್ಯಾರ್ಥಿ ಅಮೋಘ ಹೆಬ್ಬಾರ್ ಪ್ರದರ್ಶಶಿಸಿದ ವಿಜ್ಞಾನ ಪ್ರಾಜೆಕ್ಟ್‌ಗೆ ಬೆಳ್ಳಿ ಪದಕ ಲಭಿಸಿದೆ.

ಈ ಸಮ್ಮೇಳನದಲ್ಲಿ ವಿಶ್ವದ ಸುಮಾರು ೩೫ ದೇಶಗಳಿಂದ ೪೦೦ಕ್ಕೂ ಅಧಿಕ ವಿದ್ಯಾರ್ಥಿಗಳು ವಿವಿಧ ವೈಜ್ಞಾನಿಕ ಪ್ರಾಜೆಕ್ಟ್‌ ಪ್ರದರ್ಶಿಸಿದ್ದರು. ಆಳ್ವಾಸ್ ಎಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಡಾ. ಅಜಿತ್ ಹೆಬ್ಬಾರ್ ಮಾರ್ಗದರ್ಶನ ನೀಡಿದ್ದರು. ಈ ಹಿಂದೆ ಸೈನ್ಸ್ ಸೊಸೈಟಿ ಆಫ್ ಇಂಡಿಯಾ ವತಿಯಿಂದ ನಡೆದ ವಿಜ್ಞಾನ ಮೇಳದಲ್ಲಿ ಗೆಲ್ಲುವುದರ ಮೂಲಕ ಅಮೋಘ ಹೆಬ್ಬಾರ್ ಅಂತರಾಷ್ಟ್ರೀಯ ಮಟ್ಟದ ಈ ಸಮ್ಮೇಳನಕ್ಕೆ ಆಯ್ಕೆಯಾಗಿದ್ದರು. ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ವಿದ್ಯಾರ್ಥಿಯ ಸಾಧನೆಯನ್ನು ಶ್ಲಾಘಿಸಿದ್ದಾರೆ.