ಕನ್ನಡ ನನ್ನ ಬಹಳಷ್ಟು ಇಷ್ಟವಾದ ಭಾಷೆ, ಕನ್ನಡದ ಬಗ್ಗೆ ಬಹಳಷ್ಟು ಅಭಿಮಾನವಿದೆ. ಹೀಗಾಗಿ ತಮ್ಮ ಮನವಿ ಮೇರೆಗೆ ಪಟ್ಟಣದಲ್ಲಿ ತಾಯಿ ಭುವನೇಶ್ವರಿ ಸರ್ಕಲ್ ಮಾಡಲು ಮುಂದಿನ ದಿನಗಳಲ್ಲಿ ಕ್ರಮ ಜರುಗಿಸಲಾಗುವುದು ಎಂದು ಶಾಸಕ ಯಾಸೀರ್ ಅಹ್ಮದ್ ಖಾನ್ ಪಠಾಣ್ ಹೇಳಿದರು.

ಶಿಗ್ಗಾಂವಿ: ಕನ್ನಡ ನನ್ನ ಬಹಳಷ್ಟು ಇಷ್ಟವಾದ ಭಾಷೆ, ಕನ್ನಡದ ಬಗ್ಗೆ ಬಹಳಷ್ಟು ಅಭಿಮಾನವಿದೆ. ಹೀಗಾಗಿ ತಮ್ಮ ಮನವಿ ಮೇರೆಗೆ ಪಟ್ಟಣದಲ್ಲಿ ತಾಯಿ ಭುವನೇಶ್ವರಿ ಸರ್ಕಲ್ ಮಾಡಲು ಮುಂದಿನ ದಿನಗಳಲ್ಲಿ ಕ್ರಮ ಜರುಗಿಸಲಾಗುವುದು ಎಂದು ಶಾಸಕ ಯಾಸೀರ್ ಅಹ್ಮದ್ ಖಾನ್ ಪಠಾಣ್ ಹೇಳಿದರು.ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಆಡಳಿತ ಭವನದ ಸಂಕೀರ್ಣದಲ್ಲಿ ರಾಜ್ಯ ಕನ್ನಡ ಜಾಗೃತಿ ಹಿತರಕ್ಷಣಾ ವೇದಿಕೆ ತಾಲೂಕು ಘಟಕದ ವತಿಯಿಂದ ಹಮ್ಮಿಕೊಂಡ ಕನ್ನಡ ಜಾಗೃತಿ ಸಮಾವೇಶ ಮತ್ತು ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಕನ್ನಡ ಸಾಹಿತ್ಯಕ್ಕೆ ಬಸವಣ್ಣನವರ ಕೊಡುಗೆ ಬಹಳಷ್ಟು ಇದೆ. ಸಮಾನತೆಯ ಸಂದೇಶ ನಮ್ಮ ಸಂತರು, ಶರಣರು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಮಹಿಳಾ ಮೀಸಲಾತಿಯಲ್ಲ, ಪುರುಷ ಮೀಸಲಾತಿ ಕೇಳುವ ಕಾಲ ಸನ್ನಿಹಿತವಾಗಿದೆ ಎಂದ ಅವರು, ಇತಿಹಾಸ ನೋಡಿದಾಗ ಹೆಣ್ಣಿಗೆ ಗೌರವ ನೀಡುತ್ತ ಬಂದಿದೆ, ಸಮಾಜಕ್ಕೆ ಒಳ್ಳೆಯ ಹೆಸರು ಬರಬೇಕೆಂದರೆ ಮಹಿಳೆಯರಿಗೆ ಗೌರವ ನೀಡಬೇಕು ಎಂದರು.ಕೆಪಿಎಸ್‌ಸಿ ಶಾಲೆ ಮಾಡಿದರೆ ಕನ್ನಡ ಶಾಲೆಗಳು ಮುಚ್ಚುತ್ತವೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ, ಅಪಪ್ರಚಾರಗಳಿಗೆ ಕಿವಿಗೊಡಬೇಡಿ, ಯಾವುದೇ ಕಾರಣಕ್ಕೂ ಕನ್ನಡ ಶಾಲೆಗಳನ್ನ ಮುಚ್ಚುವುದಿಲ್ಲ ಎಂದು ಭರವಸೆ ನೀಡಿದರು. ನಮ್ಮ ಸರಕಾರ ಆರೋಗ್ಯ, ಶಿಕ್ಷಣ, ಉದ್ಯೋಗಕ್ಕೆ ಒತ್ತು ಕೊಡುತ್ತಿದೆ. ಬಡ ಜನರ ಕಲ್ಯಾಣಕ್ಕಾಗಿ ಪಣ ತೊಟ್ಟಿದೆ ಎಂದರು.ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಸರಸ್ವತಿ ಗಜಕೋಶ ವಿಶೇಷ ಉಪನ್ಯಾಸ ನೀಡಿದರು.ರಾಜ್ಯ ಕನ್ನಡ ಜಾಗೃತಿ ಹಿತರಕ್ಷಣಾ ವೇದಿಕೆಯ ರಾಜ್ಯಾದ್ಯಕ್ಷ ಮಂಜುನಾಥ ದುಗ್ಗತ್ತಿ, ಸಾಹಿತಿ ಶಿವಾನಂದ ಮ್ಯಾಗೇರಿ, ಮಹಿಳಾ ಜಿಲ್ಲಾದ್ಯಕ್ಷೆ ಗಂಗಮ್ಮ ಕೋರಿ, ರಾಜ್ಯ ಸಹ ಕಾರ್ಯದರ್ಶಿ ಮಲ್ಲಿಕಾರ್ಜುನ ಹಡಪದ ಮಾತನಾಡಿದರು.

ತಾಲೂಕಾದ್ಯಕ್ಷ ಮಂಜುನಾಥ ಕ್ಷೌರದ ಅದ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಹಳೆ ಬಸ್ ನಿಲ್ದಾಣಕ್ಕೆ ತಾಯಿ ಭುವನೇಶ್ವರಿ ಹೆಸರು ನಾಮಕರಣ ಮಾಡುವಂತೆ ಮನವಿ ಅರ್ಪಿಸಲಾಯಿತು.ವೇದಿಕೆಯ ರಾಜ್ಯ ಮಹಿಳಾ ಅಧ್ಯಕ್ಷೆ ಮಧು ಬಿಸೆಟ್ಟಿ, ಮಹಿಳಾ ಜಿಲ್ಲಾದ್ಯಕ್ಷೆ ಗಂಗಮ್ಮ ಕೋರಿ, ಶಿವಾನಂದ ಮ್ಯಾಗೇರಿ, ಎಸ್ ಎಫ್. ಮಣಕಟ್ಟಿ, ಮಂಜುನಾಥ ಕಾರಡಗಿ, ಹನುಮಂತ ಚಳಗೇರಿ, ಅಶೋಕ ಕಾಳೆ, ಬಸವರಾಜ ಜೇಕಿನಕಟ್ಟಿ, ಮಲ್ಲಮ್ಮ ಸೋಮನಕಟ್ಟಿ, ಫಯಾಜ್ ಸವಣೂರ, ನಿರ್ಮಲಾ ಯಡಪ್ಪನವರ, ನೀಲವ್ವ ವನಹಳ್ಳಿ, ಲಕ್ಷ್ಮಿ ವಿ ಎಚ್., ಶಂಭು ಮಡಿವಾಳರ ಸೇರಿದಂತೆ ವಿವಿಧ ಮುಖಂಡರು, ಮಹಿಳೆಯರು ಹಾಗೂ ರಾಜ್ಯ ಕನ್ನಡ ಜಾಗೃತಿ ಹಿತರಕ್ಷಣಾ ವೇದಿಕೆಯ ಪದಾಧಿಕಾರಿಗಳು ಇದ್ದರು.