ಮಾಜಿ ಶಾಸಕರ ಕಾರಿಗೂ ನನಗೂ ಸಂಬಂಧವಿಲ್ಲ: ಕೃಷ್ಣಮೂರ್ತಿ ಸ್ಪಷ್ಟನೆ

| Published : Sep 16 2025, 12:03 AM IST

ಮಾಜಿ ಶಾಸಕರ ಕಾರಿಗೂ ನನಗೂ ಸಂಬಂಧವಿಲ್ಲ: ಕೃಷ್ಣಮೂರ್ತಿ ಸ್ಪಷ್ಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಮಾಗಡಿ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮನೆ ಬಳಿ ಇತ್ತೀಚಿಗೆ ಮಾಜಿ ಶಾಸಕ ಎ.ಮಂಜುನಾಥ್‌ಗೆ ಸೇರಿದ ಕಾರು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಸದಾಶಿವನಗರ ಪೊಲೀಸರು ವಶಕ್ಕೆ ಪಡೆದಿದ್ದು ಆ ಕಾರಿಗೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ಮಾಗಡಿ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪೂಜಾರಿ ಪಾಳ್ಯ ಕೃಷ್ಣಮೂರ್ತಿ ಸ್ಪಷ್ಟನೆ ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎ.ಮಂಜುನಾಥ್ ಶಾಸಕರಾಗಿದ್ದ ಅವಧಿಯಲ್ಲಿ ಚುನಾವಣಾ ಸಂದರ್ಭದಲ್ಲಿ ಫಾರ್ಚುನೂರ್ ಕಾರನ್ನು ನನಗೆ ಓಡಾಡಲು ಕೊಟ್ಟಿದ್ದರು. 2023ರಲ್ಲೇ ನಾನು ಆ ಕಾರನ್ನು ವಾಪಸ್ ಕೊಟ್ಟಿದ್ದೇನೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮನೆ ಬಳಿ ಯಾರು ಕಾರು ಬಿಟ್ಟಿದ್ದಾರೆ ಮತ್ತು ಕಾರಿನ ನಂಬರ್ ಪ್ಲೇಟ್ ಬದಲಿಸಿ ಓಡಿಸುತ್ತಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಮಾಜಿ ಶಾಸಕರು ಪೊಲೀಸರಿಗೆ ನನ್ನ ಹೆಸರನ್ನು ಹೇಳಿ ನನಗೆ ತೇಜೋವಧೆ ಮಾಡಲು ಈ ಕೃತ್ಯ ಮಾಡಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಜಿ ಶಾಸಕರ ಆರೋಪ ನಿರಾಧಾರ. ನಾನು ಜೆಡಿಎಸ್ ಪಕ್ಷ ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಮೇಲೆ ಎಲ್ಲೂ ಕೂಡ ಮಾಜಿ ಶಾಸಕರ ಮೇಲೆ ಆರೋಪ ಮಾಡಿಲ್ಲ. ಈಗ ಈ ರೀತಿ ನನ್ನ ಹೆಸರನ್ನು ತಂದು ತಳಕು ಹಾಕುತ್ತಿರುವುದು ಸರಿಯಲ್ಲ. ಪೊಲೀಸ್ ಠಾಣೆಯಲ್ಲಿ ಸ್ಪಷ್ಟ ಮಾಹಿತಿ ಕೊಟ್ಟಿದ್ದೇನೆ. ಆ ಕಾರಿಗೂ ನನಗೂ ಸಂಬಂಧವಿಲ್ಲ. ಈ ರೀತಿ ನನ್ನ ಮೇಲೆ ಮಾಜಿ ಶಾಸಕರು ಆರೋಪ ಮಾಡುವುದನ್ನು ನಿಲ್ಲಿಸಬೇಕು. ನನಗೂ ಆ ಕಾರಿಗೂ ಸಂಬಂಧ ಇಲ್ಲ ಎಂದು ಕೃಷ್ಣಮೂರ್ತಿ ಹೇಳಿದ್ದಾರೆ.ಇದೇ ವೇಳೆ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಕುಮಾರ್, ಸದಸ್ಯರಾದ ಅಶ್ವತ್ಥ್, ಮಾಜಿ ಸದಸ್ಯರಾದ ರೂಪೇಶ್, ಮುಖಂಡರಾದ ಚಿಕ್ಕಣ್ಣ, ಅಶೋಕ್, ತೇಜು, ಶಾಂತರಾಜು, ನರಸಿಂಹಮೂರ್ತಿ‌ ಇತರರು ಹಾಜರಿದ್ದರು.