ನನಗೂ ಕಿಡ್ನಾಪ್ ಪ್ರಕರಣಕ್ಕೂ ಸಂಬಂಧವಿಲ್ಲ: ಕಾಂಗ್ರೆಸ್ ಶಾಸಕ ಡಿ. ರವಿಶಂಕರ್ ಸ್ಪಷ್ಟನೆ

| Published : May 07 2024, 01:04 AM IST

ನನಗೂ ಕಿಡ್ನಾಪ್ ಪ್ರಕರಣಕ್ಕೂ ಸಂಬಂಧವಿಲ್ಲ: ಕಾಂಗ್ರೆಸ್ ಶಾಸಕ ಡಿ. ರವಿಶಂಕರ್ ಸ್ಪಷ್ಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಎಚ್.ಡಿ. ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ವಿರುದ್ಧ ಕೆ.ಆರ್. ನಗರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತ ಮಹಿಳೆಯ ಪುತ್ರ ದೂರು ನೀಡಿರುವುದಕ್ಕೆ ಸ್ಥಳೀಯ ಶಾಸಕ ಡಿ. ರವಿಶಂಕರ್ ಕಾರಣ ಎಂದು ಹಾಸನ ಜೆಡಿಎಸ್ ಮುಖಂಡ ಆರೋಪಿಸಿರುವದಕ್ಕೆ ಪ್ರತಿಕ್ರಿಯಿಸಿರುವ ಅವರು, ನನ್ನ ವಿರುದ್ಧ ಆರೋಪಿಸಿರುವವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ

ಕನ್ನಡಪ್ರಭ ವಾರ್ತೆ ಮೈಸೂರು

ನನಗೂ ಕಿಡ್ನಾಪ್ ಪ್ರಕರಣಕ್ಕೂ ಸಂಬಂಧವಿಲ್ಲ. ನಾನು ಆ ದಿನ ಕೆ.ಆರ್. ನಗರದಲ್ಲಿ ಇರಲೇಇಲ್ಲ. ಚುನಾವಣಾ ಪ್ರಚಾರಕ್ಕಾಗಿ ಚಿಕ್ಕೋಡಿಯಲ್ಲಿದ್ದೆ ಎಂದು ಕೆ.ಆರ್. ನಗರದ ಕಾಂಗ್ರೆಸ್ ಶಾಸಕ ಡಿ. ರವಿಶಂಕರ್ ಸ್ಪಷ್ಟಪಡಿಸಿದರು.ಎಚ್.ಡಿ. ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ವಿರುದ್ಧ ಕೆ.ಆರ್. ನಗರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತ ಮಹಿಳೆಯ ಪುತ್ರ ದೂರು ನೀಡಿರುವುದಕ್ಕೆ ಸ್ಥಳೀಯ ಶಾಸಕ ಡಿ. ರವಿಶಂಕರ್ ಕಾರಣ ಎಂದು ಹಾಸನ ಜೆಡಿಎಸ್ ಮುಖಂಡ ಆರೋಪಿಸಿರುವದಕ್ಕೆ ಪ್ರತಿಕ್ರಿಯಿಸಿರುವ ಅವರು, ನನ್ನ ವಿರುದ್ಧ ಆರೋಪಿಸಿರುವವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ ಎಂದರು.ನನ್ನ ಹೆಸರನ್ನು ತಳುಕು ಹಾಕಿ ಕೆಲವರು ಆರೋಪಿಸುತ್ತಿದ್ದಾರೆ. ನನಗೆ ಆ ಸಂತ್ರಸ್ತೆ ಆಗಲಿ, ಅವರ ಮಗನಾಗಲಿನೇರ ಸಂಪರ್ಕ ಇಲ್ಲ. ನಾನು ದೂರವಾಣಿ ಹಾಗೂ ನೇರವಾಗಿಯೂ ಎಂದೂ ಕೂಡ ಅವರನ್ನು ಭೇಟಿಆಗಿಲ್ಲ. ನನ್ನ ವಿರುದ್ಧ ಅಪಪ್ರಚಾರ ಮಾಡಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸುತ್ತೇನೆ ಎಂದು ಅವರು ಹೇಳಿದರು.