ದಾವಣಗೆರೆ ಕ್ಷೇತ್ರದಲ್ಲಿ ಸ್ವಾಭಿಮಾನ ಅಲೆ ಎಬ್ಬಿಸಿದ್ದೇನೆ: ವಿನಯಕುಮಾರ

| Published : May 08 2024, 01:01 AM IST

ದಾವಣಗೆರೆ ಕ್ಷೇತ್ರದಲ್ಲಿ ಸ್ವಾಭಿಮಾನ ಅಲೆ ಎಬ್ಬಿಸಿದ್ದೇನೆ: ವಿನಯಕುಮಾರ
Share this Article
  • FB
  • TW
  • Linkdin
  • Email

ಸಾರಾಂಶ

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ 2024ರ ಚುನಾವಣೆಯಲ್ಲಿ ಕ್ರಾಂತಿಯಾಗಿದೆ. ರಾಜಕೀಯ ಹಿನ್ನೆಲೆ ನನಗಿಲ್ಲದಿದ್ದರೂ ಕ್ಷೇತ್ರ ವ್ಯಾಪ್ತಿಯಲ್ಲಿ ಸಂಚರಿಸಿ, ನಾನು ಸ್ವಾಭಿಮಾನಿ ಅಲೆಯನ್ನೇ ಎಬ್ಬಿಸಿದ್ದೇನೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯಕುಮಾರ ಹೇಳಿದ್ದಾರೆ.

- ಆನ್‌ಲೈನ್ ಮತದಾನ ಪ್ರಕ್ರಿಯೆ ನಡೆಸಲು ಆಯೋಗಕ್ಕೆ ಸಲಹೆ - - - ಕನ್ನಡಪ್ರಭ ವಾರ್ತೆ, ದಾವಣಗೆರೆ

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ 2024ರ ಚುನಾವಣೆಯಲ್ಲಿ ಕ್ರಾಂತಿಯಾಗಿದೆ. ರಾಜಕೀಯ ಹಿನ್ನೆಲೆ ನನಗಿಲ್ಲದಿದ್ದರೂ ಕ್ಷೇತ್ರ ವ್ಯಾಪ್ತಿಯಲ್ಲಿ ಸಂಚರಿಸಿ, ನಾನು ಸ್ವಾಭಿಮಾನಿ ಅಲೆಯನ್ನೇ ಎಬ್ಬಿಸಿದ್ದೇನೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯಕುಮಾರ ಹೇಳಿದರು.

ನಗರದ ಹೊರವಲಯದ ಕರೂರು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮಂಗಳವಾರ ಮತ ಚಲಾಯಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಹಕ್ಕಾದ ಮತ ಚಲಾಯಿಸಿದ್ದು ಜೀವನದ ಅತ್ಯಂತ ಸಂತೋಷದ ದಿನವೂ ಆಗಿದೆ ಎಂದರು.

ಪ್ರಜಾಪ್ರಭುತ್ವದ ಗೆಲುವಿಗಾಗಿ ಹೋರಾಟ ನನ್ನದಾಗಿದೆ. ಸಾಮಾನ್ಯ ಕುಟುಂಬದಿಂದ ಬಂದ ನಾನು ದಾವಣಗೆರೆಯಂತಹ ಮಹಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದೇನೆ. ಚುನಾವಣೆಯಲ್ಲಿ ಯಾವುದೇ ಆಸೆ, ಆಮಿಷಗಳನ್ನು ಒಡ್ಡದೇ, ಸ್ವಾಭಿಮಾನಿಯಾಗಿ ಜನರ ಬಳಿಗೆ ಬಂದಿದ್ದೇನೆ. ಜನರಿಂದ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗಿದೆ ಎಂದರು.

ಇವಿಎಂನಲ್ಲಿ ನನ್ನ ಕ್ರಮ ಸಂಖ್ಯೆ ಕೊನೆಯಲ್ಲಿ ಬರುತ್ತದೆ. ಈ ಬಗ್ಗೆಯೂ ಜನರಿಗೆ ತಿಳಿಸಿದ್ದೇವೆ. ಇವಿಎಂ ಬಗ್ಗೆ ಇನ್ನೂ ಕೆಲವರಲ್ಲಿ ಗೊಂಲ ಉಂಟಾಗುವ ಸಂಭವವಿರುತ್ತದೆ. ಅಂಥವರಿಗೆ ಸಹಾಯ ಮಾಡಬೇಕು. ಮುಂದಿನ ದಿನಗಳಲ್ಲಿ ಆನ್‌ಲೈನ್ ಮತದಾನ ಪ್ರಕ್ರಿಯೆ ನಡೆಸಬೇಕೆಂಬುದು ಕೇಂದ್ರ ಚುನಾವಣಾ ಆಯೋಗಕ್ಕೆ ನನ್ನ ಸಲಹೆಯಾಗಿದೆ ಎಂದು ವಿನಯಕುಮಾರ ಅನಿಸಿಕೆ ವ್ಯಕ್ತಪಡಿಸಿದರು.

- - - -6ಕೆಡಿವಿಜಿ2:

ದಾವಣಗೆರೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯಕುಮಾರ ಮತ ಚಲಾಯಿಸಿದ ಖುಷಿಯಿಂದ ತಮ್ಮ ಬೆರಳಿಗೆ ಹಾಕಿದ ಶಾಹಿ ಗುರುತು ಪ್ರದರ್ಶಿಸಿದರು.