ಸಾರಾಂಶ
ಕಾಂಗ್ರೆಸ್ ಸರ್ಕಾರ ಅನುದಾನ ನೀಡದೆ ತಾಲೂಕಿನ ಅಭಿವೃದ್ಧಿಯನ್ನು ಕಡೆಗಣಿಸಿದೆ. ನಾನು ಯಾಕಾದರೂ ಶಾಸಕನಾದೆ ಎನ್ನುವ ಕೊರಗುವಂತಾಗಿದೆ ಎಂದು ಶಾಸಕ ಎಚ್.ಟಿ.ಮಂಜು ದೂರಿದರು.
ಕಿಕ್ಕೇರಿ : ಕಾಂಗ್ರೆಸ್ ಸರ್ಕಾರ ಅನುದಾನ ನೀಡದೆ ತಾಲೂಕಿನ ಅಭಿವೃದ್ಧಿಯನ್ನು ಕಡೆಗಣಿಸಿದೆ. ನಾನು ಯಾಕಾದರೂ ಶಾಸಕನಾದೆ ಎನ್ನುವ ಕೊರಗುವಂತಾಗಿದೆ ಎಂದು ಶಾಸಕ ಎಚ್.ಟಿ.ಮಂಜು ದೂರಿದರು.
ಪುರದ ಮಲೆಮಹದೇಶ್ವರ ಬೆಟ್ಟದಲ್ಲಿ ಹಮ್ಮಿಕೊಂಡಿದ್ದ 10ನೇ ವರ್ಷದ ಬೆಳದಿಂಗಳ ಪೂಜೆಯಲ್ಲಿ ಭಾಗವಹಿಸಿ ಮಾತನಾಡಿ, ನಾನು ಶಾಸಕನಾಗಿರುವುದು ಕ್ಷೇತ್ರದ ಜನತಾರ್ಶೀವಾದ ಹಾಗೂ ಮಲೆಮಹದೇಶ್ವರರ ಕೃಪ ಕಟಾಕ್ಷದಿಂದ. ಜಿಲ್ಲೆಯ ಓರ್ವ ಜೆಡಿಎಸ್ ಶಾಸಕ ನಾನಾಗಿದ್ದೇನೆ. ಇದರಿಂದ ಕಾಂಗ್ರೆಸ್ ಸರ್ಕಾರ ತಾಲೂಕಿನ ಅಭಿವೃದ್ಧಿ ಕಡೆಗಣಿಸಿದೆ ಎಂದು ದೂರಿದರು.
ಅಭಿವೃದ್ಧಿಗಾಗಿ ಅನುದಾನ ಕೊಡದೆ ಸತಾಯಿಸುತ್ತಿದೆ. ಜನತೆ ಎದುರು ತಿರುಗಾಡಲು, ಮುಖ ತೋರಿಸಲು ಬೇಸರವಾಗುವಂತಹ ವಾತಾವರಣವನ್ನು ಸರ್ಕಾರ ನಿರ್ಮಿಸಿದೆ. ಸಣ್ಣ ಪುಟ್ಟ ಭೂತ ಸೌಲಭ್ಯವನ್ನು ನಂಬಿರುವ ಜನತೆಗೆ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಬೇಸರಿಸಿದರು.
ಅಭಿವೃದ್ಧಿ ಶೂನ್ಯ ಸರ್ಕಾರದಲ್ಲಿ ಅನುದಾನಕ್ಕೆ ಹೋರಾಟ ನಡೆಸುವಂತಾಗಿದೆ. ಕಷ್ಟವಾದರೂ ಅನುದಾನ ತರುತ್ತೇನೆ. ರಾಜ್ಯದ 2ನೇ ಮಹದೇಶ್ವರಸ್ವಾಮಿ ಬೆಟ್ಟವಾಗಲು ಪ್ರಾಮಾಣಿಕವಾಗಿ ಯತ್ನಿಸುವೆ ಎಂದರು.
ಆರ್‌ಟಿಒ ಅಧಿಕಾರಿಗಳ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ್ ಮಾತನಾಡಿ, ಕ್ಷೇತ್ರ ಪ್ರಕೃತಿ ಮಡಿಲಿನಲ್ಲಿದ್ದು ಮೂಲ ಸೌಲಭ್ಯ ಕಲ್ಪಿಸಿದರೆ ಉತ್ತಮ ಧಾರ್ಮಿಕ ಕ್ಷೇತ್ರವಾಗಲಿದೆ. ಕ್ಷೇತ್ರಕ್ಕೆತನ್ನ ಸಹಕಾರ ಸದಾ ಇದೆ ಎಂದು ನುಡಿದರು.
ಕ್ಷೇತ್ರದ ಪೀಠಾಧ್ಯಕ್ಷ ಬಸಪ್ಪಗುರೂಜಿ ಮಾತನಾಡಿ, ಚುನಾವಣೆ ಮುನ್ನ ಎಚ್.ಟಿ.ಮಂಜು ಮಾದಪ್ಪನ ದರ್ಶನಕ್ಕೆ ಆಗಮಿಸಿದ್ದರು. ಅಂದು ಮಾದಪ್ಪನ ನುಡಿಯಂತೆ ಶಾಸಕರಾಗುವುದು ಖಚಿತ ಎಂದೆ. ಅದರಂತೆ ಎಚ್.ಟಿ.ಮಂಜು ಶಾಸಕರಾಗಿದ್ದಾರೆ. ಮುಂದಿನ ದಿನದಲ್ಲಿ ಮಲ್ಲಿಕಾರ್ಜುನ ಶಾಸಕರಾಗುವುದು ಖಚಿತ ಎಂದು ಭವಿಷ್ಯ ನುಡಿದರು.
ಹುಣ್ಣಿಮೆ ಅಂಗವಾಗಿ ಹೋಮ ಹವನಾದಿ, ರತ್ನ ಗರ್ಭಗಣಪತಿ ಪೂಜೆ, ಸುಬ್ರಹ್ಮಣ್ಯಸ್ವಾಮಿ ಮಂಡಲ ಪೂಜೆ, ವಿವಿಧ ಸೇವಾ ಪೂಜೆ ನೆರವೇರಿತು. ಭಕ್ತರಿಗೆ ತೀರ್ಥ, ಅನ್ನ ಪ್ರಸಾದ ಸೇವೆ ನಡೆಯಿತು.
ಈ ವೇಳೆ ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಆರ್.ಅಕ್ಕನ ಬಳಗ ಅಧ್ಯಕ್ಷೆ ಸುಮಾ, ಅಖಿಲ ಭಾರತ ವೀರಶೈವ ಸಮಾಜ ತಾಲೂಕು ಅಧ್ಯಕ್ಷ ಸುಜೇಂದ್ರಕುಮಾರ್, ಚಂದ್ರಪ್ರಕಾಶ್, ಪ್ರಗತಿ ಪರರೈತ ವಡಕಹಳ್ಳಿ ಮಂಜೇಗೌಡ, ದಿಂಕ ಮಹೇಶ್, ಶಿಕ್ಷಕ ಪಾಪಣ್ಣ, ಸೋಮನಹಳ್ಳಿ ಡೇರಿ ಅಧ್ಯಕ್ಷ ಸರೋಜಮ್ಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಶಿವಮ್ಮ, ಗಂಜಿಗೆರೆ ಮಹೇಶ್, ಪುರಸಭಾ ಮಾಜಿ ಸದಸ್ಯಕೆ.ಆರ್.ನೀಲಕಂಠ, ಸದ್ಭಕ್ತರು ಇದ್ದರು.