ನಾನು ಕಾನೂನು ವಿದ್ಯಾರ್ಥಿ, ನೀವು ಉಚ್ಛಾಟಿತ ಅಭ್ಯರ್ಥಿ: ರಘುಪತಿ ಭಟ್‌ಗೆ ಹಿಜಾಬ್ ಹೋರಾಟಗಾರ್ತಿ ಆಲಿಯಾ ಟಾಂಗ್

| Published : May 29 2024, 12:46 AM IST

ನಾನು ಕಾನೂನು ವಿದ್ಯಾರ್ಥಿ, ನೀವು ಉಚ್ಛಾಟಿತ ಅಭ್ಯರ್ಥಿ: ರಘುಪತಿ ಭಟ್‌ಗೆ ಹಿಜಾಬ್ ಹೋರಾಟಗಾರ್ತಿ ಆಲಿಯಾ ಟಾಂಗ್
Share this Article
  • FB
  • TW
  • Linkdin
  • Email

ಸಾರಾಂಶ

ಉಡುಪಿಯ ಹೆಣ್ಣುಮಕ್ಕಳ ಸರ್ಕಾರಿ ಪಪೂ ಕಾಲೇಜಿನಲ್ಲಿ ಅಲಿಯಾ ಮತ್ತು ಇತರ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಪರ ಹೋರಾಟ ನಡೆಸಿದಾಗ, ಶಾಸಕರಾಗಿದ್ದ ರಘುಪತಿ ಭಟ್ ಈ ವಿದ್ಯಾರ್ಥಿನಿಯರ ಅಮಾನತಿಗೆ ಕಾರಣರಾಗಿದ್ದರು.

ಕನ್ನಡಪ್ರಭ ವಾರ್ತೆ ಉಡುಪಿ

ಇಂದು ನಾನು ಕಾನೂನು ಪದವಿ ವಿದ್ಯಾರ್ಥಿ, ನೀವು ಪಕ್ಷದಿಂದ ಉಚ್ಛಾಟಿತ ಅಭ್ಯರ್ಥಿ ಎಂದು ಕಾಲೇಜಿನಲ್ಲಿ ಹಿಜಾಬ್ ಪರ ಹೋರಾಟ ನಡೆಸಿದ್ದ ಉಡುಪಿಯ ಅಲಿಯಾ ಅಸಾದಿ ಬಿಜೆಪಿಯಿಂದ ಉಚ್ಛಾಟಿತ ಮಾಜಿ ಶಾಸಕ ರಘುಪತಿ ಭಟ್ ಗೆ ಟಾಂಗ್ ನೀಡಿದ್ದಾಳೆ.

ಉಡುಪಿಯ ಹೆಣ್ಣುಮಕ್ಕಳ ಸರ್ಕಾರಿ ಪಪೂ ಕಾಲೇಜಿನಲ್ಲಿ ಅಲಿಯಾ ಮತ್ತು ಇತರ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಪರ ಹೋರಾಟ ನಡೆಸಿದಾಗ, ಶಾಸಕರಾಗಿದ್ದ ರಘುಪತಿ ಭಟ್ ಈ ವಿದ್ಯಾರ್ಥಿನಿಯರ ಅಮಾನತಿಗೆ ಕಾರಣರಾಗಿದ್ದರು.

ಇದೀಗ ಭಟ್ಟರು ಪಕ್ಷದಿಂದ ಅಮಾನತಾಗಿರುವುದಕ್ಕೆ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿರುವ ಆಲಿಯಾ, ವಾರ್ಷಿಕ ಪರೀಕ್ಷೆಗೆ ಇನ್ನೇನು 60 ದಿನ ಇತ್ತು, ಹಿಜಾಬ್ ಧರಿಸಿದ್ದೆ ಎಂಬ ಏಕಮಾತ್ರ ಕಾರಣಕ್ಕೆ ನನ್ನನ್ನು ಕಾಲೇಜಿನಿಂದ ಹೊರದಬ್ಬಿದಿರಿ, ನಿಮ್ಮ ಪಕ್ಷಕ್ಕೆ ದೊಡ್ಡ ಸಾಧನೆ ಮಾಡಿ ತೋರಿಸಿದರಲ್ಲವೇ? ಇಂದು ಅದೇ ಪಕ್ಷ ನಿಮ್ಮನ್ನು ಹೊರದಬ್ಬಿದೆ. ಆ ಕ್ಷಣವನ್ನು ನಾನು ನನ್ನ ಉಡುಪಿಯಲ್ಲೇ ನೋಡುವಂತಾಯಿತು. ಇಂದು ನಾನು ಕಾನೂನು ಪದವಿ ವಿದ್ಯಾರ್ಥಿ, ನೀವು ಉಚ್ಛಾಟಿತ ಅಭ್ಯರ್ಥಿ ಎಂದು ಕಾಲೆಳೆದಿದ್ದಾಳೆ.