ನಾನು ಎಂದರೆ ನರಕ, ನಾವೆಂಬುದೇ ಸ್ವರ್ಗ

| Published : Oct 07 2024, 01:36 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ ಜಗತ್ತಿನಲ್ಲಿ ಅತೀ ಬುದ್ಧಿವಂತ ಪ್ರಾಣಿ ಎಂದರೆ ಮನುಷ್ಯ. ಆದರೆ ನಾನು ಎಂಬ ರಾಕ್ಷಸ ಮನುಷ್ಯನ ಮನುಷ್ಯತ್ವವನ್ನು ತಿಂದು ಅವನನ್ನು ಏಕಾಂಗಿಯಾಗಿಸುತ್ತಿದ್ದಾನೆ. ನಾನು ನಾನು ಎಂದವರು ಈ ಜಗತ್ತಿನಲ್ಲಿ ಯಾರೂ ಉಳಿದಿಲ್ಲತ ಉಳಿಯುವುದೂ ಇಲ್ಲ. ಅಹಂಕಾರ ಅವನನ್ನು ಅಂದನನ್ನಾಗಿ ಮಾಡುತ್ತದೆ. ಹೀಗಾಗಿ ತನ್ನ ಮನಸುನ್ನು ತಾನು ಗೆದ್ದರೆ ಅವನೇ ಈಶನಾಗುತ್ತಾನೆ ಎಂದು ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಠದ ಪೀಠಾಧಿಪತಿ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಜಗತ್ತಿನಲ್ಲಿ ಅತೀ ಬುದ್ಧಿವಂತ ಪ್ರಾಣಿ ಎಂದರೆ ಮನುಷ್ಯ. ಆದರೆ ನಾನು ಎಂಬ ರಾಕ್ಷಸ ಮನುಷ್ಯನ ಮನುಷ್ಯತ್ವವನ್ನು ತಿಂದು ಅವನನ್ನು ಏಕಾಂಗಿಯಾಗಿಸುತ್ತಿದ್ದಾನೆ. ನಾನು ನಾನು ಎಂದವರು ಈ ಜಗತ್ತಿನಲ್ಲಿ ಯಾರೂ ಉಳಿದಿಲ್ಲತ ಉಳಿಯುವುದೂ ಇಲ್ಲ. ಅಹಂಕಾರ ಅವನನ್ನು ಅಂದನನ್ನಾಗಿ ಮಾಡುತ್ತದೆ. ಹೀಗಾಗಿ ತನ್ನ ಮನಸುನ್ನು ತಾನು ಗೆದ್ದರೆ ಅವನೇ ಈಶನಾಗುತ್ತಾನೆ ಎಂದು ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಠದ ಪೀಠಾಧಿಪತಿ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು.

ಸ್ಥಳೀಯ ಬನಶಂಕರಿ ದೇವಸ್ಥಾನದಲ್ಲಿ ನಡೆಯುತ್ತಿರುವ ನವರಾತ್ರಿ ದೇವಿ ಪುರಾಣ ಕಾರ್ಯಕ್ರಮದ ಮೂರನೇ ದಿನದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿಕೊಂಡು ಆಶೀರ್ವಚನ ನೀಡಿ ಮಾತನಾಡಿದ ಅವರು, ಮಹಾಲಿಂಗಪುರದಲ್ಲಿ ಅತ್ಯಂತ ವೈಭವದಿಂದ ನಡೆಯುತ್ತಿರುವ ಈ ದಸರಾ ನೋಡಲು ಎರಡು ಕಣ್ಣು ಸಾಲದು. ನಾವು ನುಡಿದಂತೆ ನಡೆಯುವುದನ್ನು ಕಲಿಯಬೇಕು. ಅದುವೇ ನಮ್ಮ ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತದೆ ಎಂದರು.

ನಿಸರ್ಗದಲ್ಲಿ ಸಿಗುವ ಮಣ್ಣು, ನೀರು, ಗಾಳಿಯನ್ನು ಎಂದಿಗೂ ಕಲುಷಿತಗೊಳಿಸಬಾರದು. ಪ್ರಕೃತಿಯನ್ನು ಪ್ರೀತಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಬದುಕನ್ನು ಉತ್ತಮ ವಿಚಾರಗಳಿಗೆ ಉಪಯೋಗಿಸಬೇಕು. ಕೆಟ್ಟ ಚಟಗಳಿಂದ ದೂರವಿದ್ದು, ಮನುಷ್ಯ ಪ್ರಕೃತಿ ಋಣ ಉಂಡು ಸಮಾಜಮುಖಿಯಾಗಿ ಬದುಕಬೇಕು ಎಂದು ಸಲಹೆ ನೀಡಿದರು.

ಮನೆಯ ವಾಸ್ತು ಮುಖ್ಯವಲ್ಲ. ಬದುಕಿಗೆ ಮನಸಿನ ವಾಸ್ತು ಮುಖ್ಯ. ನಿಸರ್ಗದೊಂದಿಗೆ ಬದುಕಿದರೆ ಬದುಕು ಸ್ವರ್ಗವಾಗುತ್ತದೆ ಎಂದು ಶ್ರೀಗಳು, ನಾನು ಎಂಬುದು ನರಕಕ್ಕೆ ಸಮ. ನಾವು ಎಂಬುದೇ ಸ್ವರ್ಗ. ನಾವೆಲ್ಲರೂ ಒಂದಾಗಿ ಪರಸ್ಪರ ಪ್ರೀತಿ ವಿಶ್ವಾಸದಿಂದ ಬಾಳಿದರೆ ಅದು ನಮ್ಮ ಸ್ವರ್ಗ. ಜಗತ್ತಿನಲ್ಲಿ ನಿಸರ್ಗಕ್ಕಿಂತ ಮಿಗಿಲಾದ ವಸ್ತು ಮತ್ತೊಂದಿಲ್ಲ. ಅದನ್ನು ಪ್ರೀತಿಸಬೇಕು. ದ್ವೇಷ ಬಿಟ್ಟು ಪ್ರೇಮದ ಬದುಕು ಕಟ್ಟಿಕೊಳ್ಳಬೇಕು ಎಂದು ಆಶೀರ್ವಚನ ನೀಡಿದರು.

ಮೂರನೇ ದಿನದ ಪ್ರವಚನ:

ಕಲ್ಲು ದೇವರಿಗೆ ಚಿನ್ನ ಹಾಕುವ ಬದಲು ಜನ್ಮಕೊಟ್ಟ ತಂದೆ ತಾಯಿಗೆ ಅನ್ನ ಹಾಕಿ ಪುಣ್ಯ ಕಟ್ಟಿಕೊಳ್ಳಿ. ತಂದೆ ತಾಯಿಗೆ ಮಕ್ಕಳೇ ಪ್ರಪಂಚ. ಆದರೆ ಮಕ್ಕಳಿಗೆ ಬೇರೆ ಪ್ರಪಂಚ ಆಗಬಾರದು ಎಂದು ಬೆಂಗಳೂರಿನ ಅನ್ನದಾನಿ ಮಹಾಸ್ವಾಮಿಗಳು ಹೇಳಿದರು.

ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಬನಶಂಕರಿ ದೇವಸ್ಥಾನ ಆಡಳಿತ ಮಂಡಳಿ ಹಾಗೂ ಮಹಾಲಿಂಗಪುರ ಸಾಂಸ್ಕೃತಿಕ ಉತ್ಸವ ಸಂಘ ಇವರ ಆಶ್ರಯದಲ್ಲಿ ಶ್ರೀ ದೇವಿ ಪುರಾಣ ಮತ್ತು ದಸರಾ ಸಾಂಸ್ಕೃತಿಕ ನವರಾತ್ರಿ ಉತ್ಸವದಲ್ಲಿ ಮುಖ್ಯ ಪ್ರವಚನಕಾರರಾಗಿ ಮಾತನಾಡಿದರು. ನವದುರ್ಗೆಯ ಮೂರನೆಯ ಅವತಾರವಾದ ಚಂದ್ರ ಘಂಟಾ ಕುರಿತು ಪ್ರವಚನ ನೀಡಿ ಮಾತನಾಡಿದರು. ಯಾರು ತಂದೆ ತಾಯಿ ಕಣ್ಣಲ್ಲಿ ನೀರು ಬಾರದ ಹಾಗೆ ನೋಡಿಕೊಳ್ಳುತ್ತಾರೆ. ಅವರಿಗೆ ತಾಯಿ ಜಗನ್ಮಾತೆ ಸಕಲ ಸೌಭಾಗ್ಯ ಕೊಟ್ಟು ಕಾಪಾಡುತ್ತಾಳೆ. ಭೂಮಿ ಮೇಲೆ ಎಲ್ಲೂ ಅನಾಥ ಆಶ್ರಮಗಳು ಹುಟ್ಟಿಕೊಳ್ಳಬಾರದು. ಹಾಗೆ ಜೀವನ ನಡೆಸಿ ಕಾಣದ ದೇವರಿಗೆ ಕೈ ಮುಗಿಯುವ ಮೊದಲು ಕಣ್ಣಿಗೆ ಕಾಣುವ ನಮಗೆ ಜನ್ಮ ಕೊಟ್ಟು ಈ ಪ್ರಪಂಚವನ್ನು ನಮಗೆ ಪರಿಚಯಿಸಿದ ಜೀವಂತ ದೇವರಾದ ತಂದೆ ತಾಯಿಗೆ ನಮಸ್ಕರಿಸಿ, ದೇವಿ ಕೃಪೆಗೆ ಪಾತ್ರರಾಗಿ ಎಂದರು.

ಈ ವೇಳೆ ಮುಖಂಡರಾದ ಪುರಸಭೆ ಅಧ್ಯಕ್ಷ ಯಲ್ಲಣ್ಣಗೌಡ ಪಾಟೀಲ, ಬಲವಂತಗೌಡ ಪಾಟೀಲ, ಚಂದ್ರು ಗೊಂದಿ, ಅಶೋಕ ಅಂಗಡಿ, ಚನ್ನಪ್ಪ ಪಟ್ಟಣಶೆಟ್ಟಿ, ಬಸವರಾಜ ಘಟ್ನಟ್ಟಿ, ಹಣಮಂತ ಬುರುಡ, ಪ್ರಭು ನಾವಿ, ಮಲ್ಲಪ್ಪಾ ಹಡಪದ, ಹೊಳಬಸು ಹಡಪದ, ಮಹಾಲಿಂಗಪ್ಪಾ ಲಾತುರ, ಬಸವರಾಜ ಮೇಟಿ, ಮಹಾಲಿಂಗಪ್ಪಾ ಹೊಸೂರ್, ರಾಮಣ್ಣ ಬಂಡಿ, ಮಲ್ಲಪ್ಪಾ ಭಾವಿಕಟ್ಟಿ, ಲಕ್ಕಪ್ಪ ಚಮಕೇರಿ, ಶ್ರೀಶೈಲಪ್ಪ ಉಳ್ಳೆಗಡ್ಡಿ, ಶ್ರೀಶೈಲ ನುಚ್ಚಿ, ಮಾನಿಂಗ ನುಚ್ಚಿ, ಸಿದ್ದಗಿರೆಪ್ಪ ಕಾಗಿ, ಪ್ರಭು ಬೆಳಗಲಿ, ಬಸವರಾಜ್ ಪಶ್ಚಾಪುರ, ಕಲ್ಲಪ್ಪ ಚಿಂಚಲಿ, ಎಸ್.ಕೆ.ಗಿಂಡೆ ಸಿದ್ದು ದಡುತಿ, ಸಿದ್ದಪ್ಪ ನಿಂಬರಗಿ, ಮಾನಿಂಗ ಬುರುಡ, ಈಶ್ವರ ವಂದಾಲ, ಗೊಲೇಶ ಅಮ್ಮನಗಿ, ಶ್ರೀಶೈಲ ಬಾಡನವರ, ಶ್ರೀಶೈಲ ಕಳ್ಯಾಗೋಳ ಹಾಗೂ ಸಾವಿರಾರು ಮಹಿಳೆಯರು ಭಾಗವಹಿಸಿದ್ದರು. ಕನ್ನಡ ಕೋಗಿಲೆ ಖ್ಯಾತಿ ಕುಮಾರಿ ಮಹನ್ಯಾ ಪಾಟೀಲ ಸಂಗೀತ ಕಾರ್ಯಕ್ರಮ ನೋಡುಗರ ಮನ ತಣಿಸಿತು.