ಸಾರಾಂಶ
ಕನ್ನಡಪ್ರಭ ವಾರ್ತೆ ಹಲಗೂರು
ವಿದ್ಯೆ ಕಲಿಸಿದ ಗುರು, ಸಲಹೆ ನೀಡಿದ ಹಿರಿಯರಿಗೆ ನನ್ನ ಅಭಿನಂದನೆ ಅರ್ಪಿಸುತ್ತೇನೆ ಎಂದು ಮೈಸೂರು ವೈದ್ಯಕೀಯ ಕಾಲೇಜು ಶ್ವಾಸಕೋಶ ವಿಭಾಗದ ಪ್ರಾಧ್ಯಾಪಕಸ್ಥರಾದ ಡಾ.ವಿರೂಪಾಕ್ಷ ತಿಳಿಸಿದರು.ಹಲಗೂರು ವೀರಶೈವ ಸಮಾಜದಿಂದ ಬೃಹನ್ಮಠದಲ್ಲಿ ಹಲಗೂರು ಗ್ರಾಮದ ವಾಸಿ ಗಣೇಶ ಭವನ ಹೋಟೆಲ್ ಮಾಲೀಕರಾದ ದಿ. ಹಿರಿಯೂರ್ ಮಹಾದೇವಪ್ಪನ ಪುತ್ರ ನಿವೃತ್ತ ವೈದಾಧಿಕಾರಿ ಡಾ.ವಿರೂಪಾಕ್ಷ ಅವರಿಗೆ ಮೈಸೂರು ಪೇಟ ತೊಡಿಸಿ, ಫಲತಾಂಬೂಲ ನೀಡಿ ಬೆಳ್ಳಿ ಗಣಪತಿ ವಿಗ್ರಹ ನೀಡಿ ಅಭಿನಂದಿಸಿದ ಬಳಿಕ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ನನ್ನ ವೃತ್ತಿ ತಿಳಿದು ಹೊರದೇಶಗಳಲ್ಲಿ ನನಗೆ ಸನ್ಮಾನ ನಡೆದಿದೆ. ಆದರೆ, ತವರೂರಿನಲ್ಲಿ ಸನ್ಮಾನಿಸುತ್ತಿರುವುದು ನನ್ನ ಹೃದಯದಲ್ಲಿ ಅಚ್ಚಳಿಯದೆ ಉಳಿಯುತ್ತದೆ. ನಾನು ವೃತ್ತಿ ಜೀವನಕ್ಕಿಂತ ಶಿಕ್ಷಣ ವೃತ್ತಿಯನ್ನು ಹೆಚ್ಚು ಇಷ್ಟ ಪಡುತ್ತೇನೆ. ಈಗಲೂ ನಾನು ವೈದ್ಯಕೀಯ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದ್ದೇನೆ ಎಂದರು.ರಾಷ್ಟ್ರದ ಪ್ರಭಾವಿ ನಾಯಕರನ್ನು ಅಸೆಂಬ್ಲಿಯಲ್ಲಿ ಕಾಣಲು ವೈದ್ಯಕೀಯ ಶಿಕ್ಷಣ ಮೂಲ ಪ್ರೇರಣೆ ಆಯ್ತು. ಶಿಕ್ಷಣ ಪಡೆಯುವಾಗ ಸತತ ಅಭ್ಯಾಸ ಮತ್ತು ನಿರಂತರ ಪರಿಶ್ರಮದಿಂದ ವೈದ್ಯಕೀಯ ವೃತ್ತಿಯನ್ನು ಆರಿಸಿಕೊಂಡೆ. ಯಾವುದೇ ತೊಂದರೆ ಆಗದಂತೆ ಸಮಾಜದ ಕಟ್ಟೆ ಕಟೆಯ ವ್ಯಕ್ತಿಗೂ ಸಮಾನ ಸೇವೆ ಸಲ್ಲಿಸಬೇಕು ಎಂದು ವೈದ್ಯಕೀಯ ಸೇವೆ ಅರಂಭಿಸಿದೆ ಎಂದು ತಿಳಿಸಿದರು.
ಕನಕಪುರ ಮರಳೆಗವಿ ಮಠದ ಶ್ರೀಮುಮ್ಮಡಿ ಶಿವರುದ್ರ ಸ್ವಾಮೀಜಿ ಮಾತನಾಡಿ, ಡಾ.ವಿರೂಪಾಕ್ಷ ಅವರಿಗೆ ತವರೂರಲ್ಲಿ ಅಭಿಮಾನಿ ಬಳಗ ಅಭಿನಂದನೆ ಸಲ್ಲಿಸಿರುವುದು ಅವರ ಹೃದಯದಲ್ಲಿ ಶಾಶ್ವತವಾಗಿ ನೆಲೆಯೂರುವಂತೆ ಮಾಡಿದೆ ಎಂದರು.ಡಾ.ವಿರೂಪಾಕ್ಷ ಅವರಲ್ಲಿ ಪ್ರೀತಿ, ವಾತ್ಸಲ್ಯ ತುಂಬಿದ ಹೃದಯ ಶ್ರೀಮಂತಿಕೆಗೆ ಕಾಣುತ್ತದೆ. ಆ ದೀಪದ ಬೆಳಕು ಹೆಚ್ಚು ಪ್ರಜ್ವಲಿಸಿ ವಿಶಾಲ ಪ್ರಪಂಚಕ್ಕೆ ಇನ್ನು ಹೆಚ್ಚಿನ ಬೆಳಕು ನೀಡುವಂತೆ ಎಣ್ಣೆ ಬತ್ತಿ ಹಾಕಿ ಶಕ್ತಿ ತುಂಬುವಂತೆ ವಿರೂಪಾಕ್ಷ ಅವರಿಗೆ ಇನ್ನು ಹೆಚ್ಚಿನ ಆಯುಷ್ಯ ಆರೋಗ್ಯ ವೃದ್ಧಿಯಾಗಲಿ ಎಂದು ಪ್ರಾರ್ಥಿಸಿದರು.
ವೀರಶೈವ ಸಮಾಜದ ಅಧ್ಯಕ್ಷ ಎನ್.ಮಹದೇವಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಯೊಬ್ಬರೂ ನಿಮ್ಮ ಮಕ್ಕಳನ್ನು ವ್ಯಾಸಂಗ ಕೊಡಿಸಿ ವಿದ್ಯಾವಂತರನ್ನಾಗಿ ಮಾಡಿ ಆಸ್ತಿ ಬದಲು ವಿದ್ಯೆ ಕೊಡಿಸಿ ಸಮಾಜದ ಅಭಿವೃದ್ಧಿಗೆ ಸಹಕಾರಿಯಾಗಬೇಕು ಎಂದು ಮನವಿ ಮಾಡಿದರು.ವೀರ ಸಂಸ್ಥಾನ ಮಠ ಧನಗೂರಿನ ಷಡಕ್ಷರ ದೇಶಿಕೇಂದ್ರ ಸ್ವಾಮೀಜಿ, ಗುರುವಿನ ಪುರದ ಮಠದ ಜಗದೀಶ್ ಶಿವಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಈ ವೇಳೆ ವಿರೂಪಾಕ್ಷ ಬಂಧುಗಳು ಹಾಗೂ ಅಭಿಮಾನಿಗಳು ಎಲ್ಲರೂ ಸನ್ಮಾನಿಸಿ ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ವೀರಶೈವ ಸಮಾಜದ ಹೆಚ್.ಎಸ್ ಪರಶಿವಮೂರ್ತಿ, ಎಚ್.ಆರ್.ವಿಶ್ವ, ಮಂಜುನಾಥ್, ಎಚ್.ಎಂ.ಸದಾನಂದ್, ಬಸವರಾಜು (ಅಭಿ) ಸೇರಿದಂತೆ ಇತರರು ಇದ್ದರು.