ಜನಸ್ನೇಹಿ ಸಂಸದೆ ಆಗಬೇಕೆಂಬುವುದು ನನ್ನಾಸೆ

| Published : Jun 21 2024, 01:03 AM IST

ಸಾರಾಂಶ

ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು ಗುರುವಾರ ಹುಕ್ಕೇರಿ ತಾಲೂಕಲ್ಲಿ ಸಂಚರಿಸಿ ಸಾರ್ವಜನಿಕರ ಅಹವಾಲು ಆಲಿಸಿದರು.

ಕನ್ನಡಪ್ರಭ ವಾರ್ತೆ ಹುಕ್ಕೇರಿ

ಜನಸ್ನೇಹಿ ಸಂಸದೆಯಾಗಬೇಕು ಎಂಬುವುದು ನನ್ನ ಆಸೆಯಾಗಿದ್ದು, ಜನರ ಸಂಕಷ್ಟಗಳಿಗೆ ಯಾವಾಗಲೂ ನಾನು ಸಿಗಬೇಕು. ಸಾಮಾನ್ಯ ಜನರಿಗೆ ಶೀಘ್ರ ಕೆಲಸ ಆಗಬೇಕು. ಸಚಿವರು, ಶಾಸಕರು ಹಾಗೂ ಎಲ್ಲ ಇಲಾಖೆ ಅಧಿಕಾರಿಗಳು ಒಗ್ಗಟ್ಟಾಗಿ ಸೇವೆ ಸಲ್ಲಿಸುವ ಮೂಲಕ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ನೂತನ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.

ತಾಲೂಕಿನ ಗುಡಸ, ಹುಕ್ಕೇರಿ, ಸಂಕೇಶ್ವರ ಮತ್ತಿತರ ಕಡೆಗಳಲ್ಲಿ ಗುರುವಾರ ಮಿಂಚಿನ ಸಂಚಾರ ನಡೆಸಿ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದ ಅವರು, ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು, ವಿವಿಧ ಇಲಾಖೆಯ ಅಧಿಕಾರಿಗಳಿಂದ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಬಹುದಿನಗಳ ಬೇಡಿಕೆಯಾಗಿರುವ ಚಿಕ್ಕೋಡಿ ಜಿಲ್ಲೆ ರಚಿಸಲು ಹಿರಿಯರೊಂದಿಗೆ ಚರ್ಚಿಸಲಾಗುವುದು. ಕೃಷ್ಣಾ ನದಿಯ ಪ್ರವಾಹದಿಂದ ಉಂಟಾಗುವ ನೆರೆಸಂತ್ರಸ್ತರಿಗೆ ಶಾಶ್ವತ ಪರಿಹಾರ ಕಲ್ಪಿಸಲು ಪ್ರಯತ್ನಿಸಲಾಗುವುದು. ನಿರುದ್ಯೋಗ ನಿವಾರಣೆಗೆ ಕೈಗಾರಿಕೆಗಳನ್ನು ಸ್ಥಾಪಿಸಿ ಉದ್ಯೋಗ ಸೃಷ್ಟಿಸಲಾಗುವುದು. ಸಮರ್ಪಕ ಕುಡಿಯುವ ನೀರು ಪೂರೈಕೆ, ಕೃಷಿ ಚಟುವಟಿಕೆಗೆ ಉತ್ತೇಜನ ಸೇರಿದಂತೆ ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸುವ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಭರವಸೆ ನೀಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯ ರವದಿ, ಮಹಾಂತೇಶ ಮಗದುಮ್ಮ, ಸಂತೋಷ ಮುಡಸಿ, ಕೆಪಿಸಿಸಿ ಪ್ರಚಾರ ಸಮಿತಿ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ರಾಶಿಂಗೆ, ವಕೀಲರ ಸಂಘದ ಅಧ್ಯಕ್ಷ ಅನೀಸ್ ವಂಟಮೂರಿ, ನ್ಯಾಯವಾದಿಗಳಾದ ಡಿ.ಕೆ.ಅವರಗೋಳ, ರಾಜು ಚೌಗಲಾ, ಭೀಮಸೇನ ಬಾಗಿ, ಆಪ್ತ ಸಹಾಯಕರಾದ ಪಾಂಡು ಮನ್ನಿಕೇರಿ, ಮುರಳಿ ಬಡಿಗೇರ, ಮಲ್ಲಿಕಾರ್ಜುನ ಪತ್ತಾರ, ಪುರಸಭೆ ಸದಸ್ಯರಾದ ಆನಂದ ಗಂಧ, ಸದಾಶಿವ ಕರೆಪ್ಪಗೋಳ, ದಿಲೀಪ ಹೊಸಮನಿ, ಮಹೇಶ ಹಟ್ಟಿಹೊಳಿ, ಚಂದು ಮುತ್ನಾಳೆ, ರೇಖಾ ಚಿಕ್ಕೋಡಿ, ಮುಖಂಡರಾದ ರವಿ ಕರಾಳೆ, ಮೌನೇಶ ಪೋತದಾರ, ರಾಜು ಸಿದ್ನಾಳ, ಚಂದು ಗಂಗಣ್ಣವರ, ಸಲೀಮ್ ಕಳಾವಂತ, ಇರ್ಷಾದ ಮೊಖಾಶಿ, ಸಂಜು ಗಂಡ್ರೋಳ್ಳಿ, ಕೆಂಪಣ್ಣ ಶಿರಹಟ್ಟಿ, ಕೆ.ವೆಂಕಟೇಶ, ಸತೀಶ ದಿನ್ನಿಮನಿ, ಮಂಜುನಾಥ ಪಡದಾರ, ಸಿದ್ರಾಮ ಖೋತ, ಕುಮಾರ ಬೆಂಕಿ ಮತ್ತಿತರರು ಉಪಸ್ಥಿತರಿದ್ದರು.