ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿಯವರ ಪೂರ್ತಿ ತಂಡ ಬಂದರೂ ನಾನು ಸವಾಲು ಸ್ವೀಕರಿಸಲು ಸಿದ್ಧತ್ ಎಂದು ಶಾಸಕ ಅಶೋಕ್ ಕುಮಾರ್ ರೈ ತಿರುಗೇಟು ನೀಡಿದ್ದಾರೆ.
ಪುತ್ತೂರು: ಕರ್ನಾಟಕ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿಯವರ ಪೂರ್ತಿ ತಂಡ ಬಂದರೂ ನಾನು ಸವಾಲು ಸ್ವೀಕರಿಸಲು ಸಿದ್ಧ. ನಾನು ಅವರ ವೇದಿಕೆಗೆ ಹೋಗುವ ಬದಲು. ಜನ ವೇದಿಕೆಯಲ್ಲಿ ಉತ್ತರ ಕೊಡುತ್ತೇನೆ. ಅವರು ಕೂಡಾ ಸಾಮೂಹಿಕ ವೇದಿಕೆಯಲ್ಲೇ ಉತ್ತರ ಕೊಡಲಿ ಎಂದು ಶಾಸಕ ಅಶೋಕ್ ಕುಮಾರ್ ರೈ ತಿರುಗೇಟು ನೀಡಿದ್ದಾರೆ. ಪುತ್ತೂರಿನಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಶಾಸಕರು, ನಾರಾಯಣ ಸ್ವಾಮಿ ಅವರ ಹೇಳಿಕೆಗೆ ಉತ್ತರಿಸಿ ಚಲವಾದಿ ನಾರಾಯಣ ಸ್ವಾಮಿ ಅವರ ಪೂರ್ತಿ ತಂಡ ಬಂದರೂ ನಾನು ಚಾಲೆಂಜಿಗೆ ಸಿದ್ಧ. ಅವರು ನನ್ನ ವೇದಿಕೆಗೆ ಬರಬೇಕು. ನಾನು ಇಲ್ಲಿ ಶಾಸಕ. ಅವರ ವೇದಿಕೆಗೆ ನಾನು ಹೋಗುವ ಬದಲು ಅವರು ಒಂದು ಸಾಮೂಹಿಕ ವೇದಿಕೆ ಸೃಷ್ಟಿ ಮಾಡಲಿ. ನಾನು ಉತ್ತರ ಕೊಡುತ್ತೇನೆ. ಅವರು ಕೂಡಿದರೆ ಸಾಮೂಹಿಕ ವೇದಿಕೆಯಲ್ಲಿ ಉತ್ತರ ಕೊಡಲಿ. ಜನರ ವೇದಿಕೆಯಲ್ಲಿ ಉತ್ತರ ಕೊಡುತ್ತೇನೆ ಎಂದು ಹೇಳಿದರು.
ನಾಯಿಗಳು ಕಳ್ಳ ಬಂದರೂ ಬೊಗಳುತ್ತದೆ ಒಳ್ಳೆಯವರು ಬಂದರೂ ಬೊಗಳುತ್ತದೆ. ನಾಯಿಗೆ ಯಾರು ಒಳ್ಳೆಯವರು, ಯಾರು ಕೆಟ್ಟವನೂ ಅಂತ ಗೊತ್ತಾಗುವುದಿಲ್ಲ. ಅದಕ್ಕೆ ಯಾವುದು ಏನು ಅಂತ ಗೊತ್ತಾಗುವುದಿಲ್ಲ. ಅದಕ್ಕೆ ಕಲ್ಲು ಬಿಸಾಕುವಂತಿಲ್ಲ. ಅದು ಪ್ರಾಣಿ ಎಂದು ಶಾಸಕರು ಹೇಳಿದರು.