2028ಕ್ಕೆ ನಾನೇ ಮುಖ್ಯಮಂತ್ರಿ

| Published : Sep 03 2025, 01:02 AM IST

ಸಾರಾಂಶ

2028ರ ಚುನಾವಣೆಯಲ್ಲಿ ಪಕ್ಷಕ್ಕೆ ಬಹುಮತ ಬಂದು ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಭವಿಷ್ಯ ನುಡಿದರು.

ಕನ್ನಡಪ್ರಭ ವಾರ್ತೆ ಘಟಪ್ರಭಾ

2028ರ ಚುನಾವಣೆಯಲ್ಲಿ ಪಕ್ಷಕ್ಕೆ ಬಹುಮತ ಬಂದು ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಭವಿಷ್ಯ ನುಡಿದರು.

ಪಟ್ಟಣದ ವೀರ ಸಾರ್ವಕರ ಯುವಕ ಸಂಘ ಹಾಗೂ ಶ್ರೀರಾಮ ಸೇನೆ ಘಟಪ್ರಭಾ ಸಂಯುಕ್ತ ಆಶ್ರಯಲ್ಲಿ ಘಟಪ್ರಭಾ ಕಾಯಿಪಲ್ಲೆ ಮಾರ್ಕೆಟ್‌ ಆವರಣದಲ್ಲಿ ಸೋಮವಾರ ಆಯೋಜಿಸಲಾದ ಬೃಹತ್ ಧರ್ಮ ಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು, ಹಿಂದೂ ದೇವಸ್ಥಾನದ ಮೇಲೆ, ಮಠ-ಮಾನ್ಯಗಳ ಮೇಲೆ ಅಪಚಾರ ಹಾಗೂ ಅಪಪ್ರಚಾರ ಮಾಡುತ್ತಿದ್ದಾರೆ. ನಾವು ನರೇಂದ್ರ ಮೋದಿಯಂತಹ ಒಳ್ಳೆ ಪ್ರಧಾನಿಮಂತ್ರಿ ಇದ್ದುದ್ದರಿಂದ ಚೆನ್ನಾಗಿದ್ದೇವೆ. ನನ್ನನ್ನು ದಿಲ್ಲಿಯವರೆ ಬಂದು ಪಕ್ಷಕ್ಕೆ ಕರೆದುಕೊಂಡು ಹೋಗುತ್ತಾರೆ ಎಂದರು. ಕರ್ನಾಟಕದಲ್ಲಿ ಹಿಂದೂಗಳಿಗೆ ಒಂದು ಕಾನೂನು, ಮುಸ್ಲಿಂರಿಗೆ ಒಂದು ಕಾನೂನು ಏಕೆ? ಗಣೇಶ ನಮ್ಮ ಆರಾಧ್ಯ ದೇವರು. ಈ ಹಬ್ಬ ಆಚರಿಸಲಿಕ್ಕೆ 20 ಕಟ್ಟಳೆಗಳನ್ನು ಹಾಕುತ್ತಾರೆ. ಇದೆಲ್ಲ ಇನ್ಮೂಂದೆ ನಡೆಯುವುದಿಲ್ಲ ಎಂದು ಗುಡುಗಿದರು.ಧರ್ಮಸ್ಥಳದ ಹೆಸರು ಕೆಡಿಸುವ ಸಲುವಾಗಿ ಯಾರೋ ಮೂರ್ಖನ ಮಾತು ಕೇಳಿ 18 ಫೂಟ್‌ಗಳಷ್ಟು ಆಳ ಜೆಸಿಬಿಯಿಂದ ಹಡ್ಡಿದ್ದಿರಿ. ಹೆಣವನ್ನು ಯಾರಾದರೂ ಅಷ್ಟು ಆಳದಲ್ಲಿ ಹುಗಿಯುತ್ತಾರೆಯೇ? ಗೃಹ ಸಚಿವರನ್ನು ಕೇಳಿದರೇ ಆ ವಿಚಾರ ಗೊತ್ತಿಲ್ಲ, ಆಮೇಲೆ ಮಾತನಾಡುತ್ತೇನೆ ಎಂದು ಹಾರಿಕೆಯ ಉತ್ತರ ನೀಡುತ್ತಾರೆ. ಜನರಿಗೆ ಗ್ಯಾರಂಟಿ ಕೊಡುವ ನೆಪದಲ್ಲಿ ಬೆಲೆಗಳನ್ನು, ಟ್ಯಾಕ್ಸ್‌ಗಳನ್ನು ಹೆಚ್ಚು ಮಾಡಿ ಲೂಟಿ ಮಾಡುತ್ತಿದೆ ಈ ಸರ್ಕಾರ ಎಂದು ಕಿಡಿಕಾರಿದರು.ನಮಗೆ ಸ್ವಾತ್ಯಂತ್ರ ಮಹಾತ್ಮಾ ಗಾಂಧಿ, ಜವಾಹರಲಾಲ ನೆಹರು ಸಿಕ್ಕಿದೆಂದು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ನಮಗೆ ಸ್ವಾತ್ಯಂತ್ರ ಸಿಕ್ಕಿದ್ದು ನೇತಾಜಿ ಸುಭಾಸಚಂದ್ರ ಬೋಸ, ವೀರ ಸಾವರ್ಕರ, ಮದನಲಾಲ ಡಿಂಗ್ರಾ, ಲಾಲಾ ಲಜಪತರಾಯ, ಭಗತಸಿಂಗರಂತಹ ಇನ್ನೂ ಅನೇಕ ಮಹನೀಯರು ಸ್ವಾತ್ಯಂತ್ರಕ್ಕಾಗಿ ಜೀವ ಕಳೆದುಕೊಂಡಿದ್ದಾರೆ. ವೀರ ಸಾವರ್ಕರ ಎರಡು ಬಾರಿ ಕಾಲಾ ಪಾನಿ ಶಿಕ್ಷೆಗೆ ಗುರಿಯಾಗಿದ್ದಾರೆ. ಮಹಾಜನಗಳೇ ಇನ್ನಾದರೂ ಹಿಂದೂ ಧರ್ಮ ಉಳುವಿಗಾಗಿ ಒಕ್ಕಟ್ಟಾಗಿ ಧರ್ಮದ ಪರ ಹೋರಾಟ ಮಾಡುವವರಿಗೆ ಆರಿಸಿ ತನ್ನಿ ಎಂದು ಕೋರಿದರು.ಈ ಸಂದರ್ಭದಲ್ಲಿ ಗುಬ್ಬಲಗುಡ್ಡ ಮಠದ ಡಾ.ಮಲ್ಲಿಕಾರ್ಜುನ ಮಹಾಸ್ವಾಮೀಜಿ, ಕುಮಾರಮಠದ ವಿರೂಪಾಕ್ಷ ಸ್ವಾಮೀಜಿ ಹಾಗೂ ರಾಮಸೇನೆ, ವೀರ ಸಾರ್ವಕರ್‌ ಮಂಡಳದ ಕಾರ್ಯಕರ್ತರು ಇದ್ದರು.